ಫಿಲಿಪೈನ್ಸ್ ನಲ್ಲಿ ಭೀಕರ ಚಂಡಮಾರುತಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

Social Share

ಮನಿಲಾ,ಅ.31- ಫಿಲಿಪೈನ್ಸ್ ನಲ್ಲಿ ಬೀಸಿದ ಅನಾಹುತಕಾರಿ ಚಂಡಮಾರುತದಿಂದ ಸುಮಾರು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ದಕ್ಷಿಣ ಚೀನಾದ ಸಮುದ್ರದಿಂದ ಭಾನುವಾರ ಬೀಸಲಾರಂಭಿಸಿದ ನಲ್ಗೆ ಹೆಸರಿನ ಚಂಡಮಾರುತ ಫಿಲಿಫೈನ್ಸ್ನ ಬಹುತೇಕ ಭಾಗದಲ್ಲಿ ಅನಾಹುತ ಸೃಷ್ಟಿಸಿದೆ.

ಸುಮಾರು 20 ಲಕ್ಷ ಜನ ನಿರ್ವಸತಿಗರಾಗಿದ್ದಾರೆ. ಹಲವಾರು ಪ್ರಾಂತ್ಯಗಳ ಪ್ರವಾಹ ಪೀಡಿತವಾಗಿವೆ. ಮೃತಪಟ್ಟವರ ಪೈಕಿ ಈವರೆಗೂ 93 ಶವಗಳನ್ನು ಹೊರತೆಗೆಯಲಿದೆ. 153ಕ್ಕೂ ಹೆಚ್ಚು ಪ್ರವಾಹನದಲ್ಲಿ ಮುಳುಗಿದವರು ಮತ್ತು ಬಂಡೆಗಳ ಜಾರುವಿಕೆಯಿಂದ ಉಂಟಾದ ಭೂ ಕುಸಿತದಲ್ಲಿ ಸಮಾಯಾದವರು ಸೇರಿದ್ದಾರೆ.

ಕೆಲವು ಪ್ರಾಂತ್ಯಗಳಲ್ಲಿ ಇಡೀ ಕುಟುಂಬಗಳೇ ನೆಲಸಮವಾಗಿದ್ದು, ಯಾರು ಏನಾಗಿದ್ದಾರೆ ಎಂಬ ಮಾಹಿತಿಯೇ ದೊರೆಯದಾಗಿದೆ. ಬೃಹತ್ ಪ್ರಮಾಣ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಮುಸ್ಲಿಂ ಸ್ವಾಯತತ್ತೆ ಇರುವ ಮಗನಿಂದೊ ಪ್ರಾಂತ್ಯದಲ್ಲಿ ಬಹುತೇಕ ವಿನಾಶಕಾರಿ ಪರಿಸ್ಥಿತಿ ಇದೆ. ದಕ್ಷಿಣ ಕುಷಿಯೋಂಗ್ ಗ್ರಾಮದಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಿದೆ.

ಕರ್ನಾಟಕ ರತ್ನ ಮೂಲಕವೂ ಹಲವು ದಾಖಲೆ ಬರೆಯಲಿದ್ದಾರೆ ಅಪ್ಪು

ಸಂಕಷ್ಟಕ್ಕೊಳಗಾದ 20 ಲಕ್ಷ ಜನರನ್ನು ನಿರ್ವಸತಿ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಅಲ್ಲಿಂದ ಅರ್ಧದಷ್ಟು ಜನ ತಮ್ಮ ಸಂಬಂಕರ ಮನೆಗಳಿಗೆ ಹೋಗಿದ್ದಾರೆ. 40 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪರಿಹಾರ ಕಾರ್ಯಗಳನ್ನು ಸರ್ಕಾರ ಖುದ್ದಾಗಿ ಕೈಗೊಳ್ಳುತ್ತಿದೆ ಎಂದು ಆಡಳಿತ ವಿಭಾಗದ ಅಕಾರಿಗಳು ತಿಳಿಸಿದ್ದಾರೆ.

Articles You Might Like

Share This Article