ಹೈದರಾಬಾದ್, ಡಿ.10- ನಿಶ್ಚಿತಾರ್ಥ ನಡೆಯಬೇಕಿದ್ದ ಯುವತಿಯನ್ನು ಆಕೆಯ ಮನೆಯಿಂದ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ ಘಟನೆ ತೆಲಂಗಾಣದ ಆದಿಬಟ್ಲದಲ್ಲಿ ನಡೆದಿದೆ. ಸುಮಾರು ನೂರು ಯುವಕರು ತಮ್ಮ ಮನೆಗೆ ನುಗ್ಗಿ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಯುವತಿಯಪೋಷಕರು ಆರೋಪಿಸಿದ್ದಾರೆ.
ದೊಣ್ಣೆ ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದು ಬಂದ ದುಷ್ಕರ್ಮಿಗಳ ಗುಂಪು ಯುವತಿಯ ಸಂಬಂಧಿಕರನ್ನು ಥಳಿಸಿ ಮನೆಯನ್ನು ಧ್ವಂಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾನು ಪ್ರೀತಿಸಿದ ಯುವತಿ ಬೇರೊಬ್ಬನ ಜತೆ ಮದುವೆಯಾಗುತ್ತಿದ್ದಾಳೆ ಎಂದರಿತ ಪ್ರೇಮಿ ನವೀನ್‍ರೆಡ್ಡಿ (29) ಎಂಬಾತ ನಿಶ್ಚಿತಾರ್ಥದ ದಿನವೇ ನೂರು ಜನರನು ಕರೆದುಕೊಂಡು ಬಂದು ಯುವತಿಯ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗುಜರಾತ್ ಚುನಾವಣೆ : ಕಾಂಗ್ರೆಸ್ ಮತ ಕಸಿದ ಆಪ್
ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಆರು ತಾಸಿನಲ್ಲೇ ಆರೋಪಿಯನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಹೈದರಾಬಾದ್‍ನ ಮನ್ನೆಗುಡ್ಡ ಪ್ರದೇಶದ ನಿವಾಸಿಯಾದ ಯುವತಿ 2021ರಲ್ಲಿ ನವೀನ್‍ರೆಡ್ಡಿ ಎಂಬಾತನ ಜತೆ ಪ್ರೀತಿ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ.
ಬ್ಯಾಡ್ಮಿಂಟನ್ ತರಬೇತಿ ಕೇಂದ್ರದಲ್ಲಿ ಇಬ್ಬರ ಪರಿಚಯವಾಗಿತ್ತು. ನಂತರ ಅನ್ಯೋನ್ಯವಾಗಿದ್ದ ಇವರು ಹಲವೆಡೆ ಪ್ರವಾಸಕ್ಕೂ ಹೋಗಿ ಬಂದಿದ್ದರು ಎನ್ನಲಾಗಿದೆ. ಈ ವಿಷಯ ಎರಡೂ ಕುಟುಂಬಗಳ ಮನಸ್ತಾಪಕ್ಕೆ ಕಾರಣವಾಗಿತ್ತು. ಕುಟುಂಬಸ್ಥರ ವಿರೋಧದಿಂದ ಯುವತಿ ಪ್ರೇಮಿಯಿಂದ ದೂರವಾಗಿದ್ದಳು. ಆದರೆ, ಆತ ಮೊಬೈಲ್‍ಗೆ ಕರೆ ಮಾಡಿ ವಾಟ್ಸಾಪ್ ಸಂದೇಶ ಕಳುಹಿಸಿ ಮದುವೆಗೆ ಒತ್ತಾಯ ಮಾಡುತ್ತಿದ್ದುದಲ್ಲದೆ ಬೆದರಿಕೆ ಕೂಡ ಹಾಕುತ್ತಿದ್ದನಂತೆ.
ಯುವತಿಯ ಮನೆಯವರು ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಂಡಿದ್ದ ವಿಷಯ ತಿಳಿದು ತನ್ನ ಸಹಚರರೊಂದಿಗೆ ಬಂದು ಹಲ್ಲೆ ನಡೆಸಿ ಬೆದರಿಸಿ ಯುವತಿಯನ್ನು ಅಪಹರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಂಚಾರಿ ನಿಯಮ ಉಲ್ಲಂಘನೆ ಸೆರೆ ಹಿಡಿಯಲು ಬಂದಿವೆ ಐಟಿಎಂ ಕ್ಯಾಮರಾಗಳು
ನವೀನ್‍ರೆಡ್ಡಿ ಜತೆ ಎಂಟು ಜನರನ್ನು ಪೊಲೀಸರು ಬಂಧಿಸಿ ಯುವತಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ನೀಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಚಕೊಂಡ ಕಮಿಷನರೇಟ್‍ನ ಹೆಚ್ಚುವರಿ ಆಯುಕ್ತ ಸುೀಧಿರ್‍ಬಾಬು, ಇದು ಗಂಭೀರ ಅಪರಾಧವಾಗಿದ್ದು, ತನಿಖೆ ನಡೆಯುತ್ತಿದೆ. ಪೋಷಕರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದೇವೆ. ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
100 men, storm, house, kidnap, woman, attack, family, Telangana,