Saturday, September 23, 2023
Homeಅಂತಾರಾಷ್ಟ್ರೀಯವಿಯೆಟ್ನಾಂನಲ್ಲಿ ಭಾರಿ ಅಗ್ನಿ ಅನಾಹುತ, 50 ಮಂದಿ ಬಲಿ

ವಿಯೆಟ್ನಾಂನಲ್ಲಿ ಭಾರಿ ಅಗ್ನಿ ಅನಾಹುತ, 50 ಮಂದಿ ಬಲಿ

- Advertisement -

ಹನೋಯಿ,ಸೆ.13- ವಿಯೆಟ್ನಾಂ ರಾಜಧಾನಿ ಹನೋಯ್‍ನಲ್ಲಿರುವ ಅಪಾರ್ಟ್‍ಮೆಂಟ್‍ನ ಬ್ಲಾಕ್ ಒಂದರಲ್ಲಿ ಸಂಭವಿಸಿದ ಭಾರಿ ಅಗ್ನಿ ಅನಾಹುತದಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇತರ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ತಡರಾತ್ರಿ 10 ಅಂತಸ್ತಿನ ಕಟ್ಟಡದ ಪಾರ್ಕಿಂಗ್ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ತಕ್ಷಣ ಅಗ್ನಿಶಾಮಕ ದಳದ ಅಧಿಕಾರಿಗಳು ಸುಮಾರು 70 ಜನರನ್ನು ರಕ್ಷಿಸಿದ್ದಾರೆ, ಡಜನ್‍ಗಟ್ಟಲೆ ಜನ ಸಾವನ್ನಪ್ಪಿದ್ದು, 54 ಜನರನ್ನು ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಅಧಿಕೃತ ವಿಯೆಟ್ನಾಂ ಸುದ್ದಿ ಸಂಸ್ಥೆ ತಿಳಿಸಿದೆ.

- Advertisement -

ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ, ಈ ವರ್ಷದಲ್ಲಿ ಇದು 25ನೇ ಕೇಸ್

ನೈಋತ್ಯ ಹನೋಯಿಯ ಹೆಚ್ಚು ವಸತಿ ಪ್ರದೇಶದಲ್ಲಿ, ಕಿರಿದಾದ ಪ್ರದೇಶದಲ್ಲಿ ಅಪಾರ್ಟ್‍ಮೆಂಟ್ ಇರುವುದರಿಂದ ಕಟ್ಟಡವನ್ನು ಪ್ರವೇಶಿಸಲು ರಕ್ಷಕರು ಹೆಣಗಾಡುವಂತಾದ ಪರಿಣಾಮ ಸಾವು-ನೋವು ಹೆಚ್ಚಾಗಲು ಕಾರಣ ಎನ್ನಲಾಗಿದೆ.

#Over50dead, #firebreaksout, #apartmentbuilding, #Vietnam,

- Advertisement -
RELATED ARTICLES
- Advertisment -

Most Popular