ಟರ್ಕಿ, ಸಿರಿಯಾದಲ್ಲಿ ಭೂಕಂಪ, 2 ಸಾವಿರ ಸಮೀಪಿಸಿದ ಸಾವಿನ ಸಂಖ್ಯೆ

Social Share

ಅಂಕಾರಾ (ಟರ್ಕಿ), ಫೆ.6 -ಟರ್ಕಿ, ಸಿರಿಯಾ ಎರಡು ದೇಶಗಳ ನಡುವಿನ ಗಡಿಯ ಸಮೀಪ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇಲ್ಲಿಯವರೆಗೂ 1500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆಗ್ನೇಯ ಟರ್ಕಿಯಲ್ಲಿ ಇಂದು ಮುಂಜಾನೆ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹಲವಾರು ಕಟ್ಟಡಗಳು ಉರುಳಿ ಬಿದ್ದಿದೆ. ಟರ್ಕಿ ರಾಜಧಾನಿ ಗಾಜಿಯಾಂಟೆಪ್‍ನಿಂದ 33 ಕಿಲೋಮೀಟರ್ ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿದೆ ಎಂದು ಅಮೆರಿಕ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಟರ್ಕಿಯಲ್ಲಿ ಕನಿಷ್ಠ 1500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೆರೆಯ ಸಿರಿಯಾದಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ,ಪರಿಹಾರ ಕಾರ್ಯ ನಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂವೈಜ್ಞಾನಿಗಳ ಪ್ರಕಾರ ಭೂಮಿಯಿಂದ 18 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರ ಬಿಂದು ಇದ್ದು, ಮೊದಲ ಕಂಪನ ನಂತರ ಸುಮಾರು 10 ನಿಮಿಷದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ ರಿಕ್ಟರ್ ಮಾಪನದಲ್ಲಿ 6.7 ತೀವ್ರತೆ ದಾಖಲಾಗಿದೆ.

ಮೂರು ದಿನ ಮೊದಲೇ ಭೂಕಂಪದ ಭವಿಷ್ಯ ನುಡಿದಿದ್ದ ಸಂಶೋಧಕ

ಯಡಿಯೂರಪ್ಪನವರನ್ನ ಬಿಜೆಪಿ ಹೈಕಮಾಂಡ್ ಪಂಕ್ಚರ್ ಮಾಡಿದೆ : ಸಿದ್ದರಾಮಯ್ಯ

ದಿಯಾರ್‍ಬಕಿರ್ ಮತ್ತು ಮಲತ್ಯದಲ್ಲಿ ಹಲವಾರು ಕಟ್ಟಡಗಳು ಕುಸಿದು ಬಿದ್ದಿವೆ ಎಂದು ಹೇಬರ್‍ಟರ್ಕ್ ದೂರದರ್ಶನ ವರದಿ ಮಾಡಿದೆ. ಈ ನಡುವೆ ಲೆಬನಾನ್‍ನಲ್ಲೂ ಭೂಕಂಪದ ಅನುಭವವಾಗಿದೆ.

ಉತ್ತರದ ನಗರವಾದ ಅಲೆಪ್ಪೋ ಮತ್ತು ಹಮಾದಲ್ಲಿ ಕೆಲವು ಕಟ್ಟಡಗಳು ಕುಸಿದಿವೆ ಎಂದು ಸಿರಿಯಾದ ರಾಜ್ಯ ಮಾಧ್ಯಮ ವರದಿ ಮಾಡಿದೆ. ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯದಲ್ಲಿ ಟರ್ಕಿಯ ಗಡಿಯಲ್ಲಿ ಹಲವಾರು ಕಟ್ಟಡಗಳು ಕುಸಿದಿದೆ.

Over 95 Dead, Syria, Turkey, 7.8 Magnitude, Earthquake,

Articles You Might Like

Share This Article