ತುಂಬಿತುಳುಕುತ್ತಿರುವ ಯರವಾಡ ಜೈಲು

Social Share

ಪುಣೆ,. 12- ಪುಣೆಯ ಯರವಾಡ ಕೇಂದ್ರ ಕಾರಾಗೃಹ ಕೈದಿಗಳಿಂದ ತುಂಬಿ ಹೋಗಿದ್ದು, ಹೆಚ್ಚುವರಿ ಬ್ಯಾರಕ್‍ಗಳನ್ನು ನಿರ್ಮಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿರುವುದಾಗಿ ಮಹಾರಾಷ್ಟ್ರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜೈಲುಗಳು) ಅಮಿತಾಭ್ ಗುಪ್ತಾ ಹೇಳಿದ್ದಾರೆ.

ಮಕರ ಸಂಕ್ರಾಂತಿ ವಿಶೇಷ ಸಂದರ್ಭದಲ್ಲಿ ಕೈದಿಗಳು ತಯಾರಿಸಿದ ವಿವಿಧ ವಸ್ತುಗಳು ಮತ್ತು ಉತ್ಪನ್ನಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೈದಿಗಳು ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಶೀಘ್ರದಲ್ಲೇ ಇ-ಕಾಮರ್ಸ್ ವೆಬ್‍ಸೈಟ್‍ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದರು. 2022ರ ನವೆಂಬರ್ ವೇಳೆ ಯರವಾಡ ಜೈಲಿನಲ್ಲಿ 6,854 ಕೈದಿಗಳಿದ್ದರು.

ಮನೀಶ್‍ಪಾಂಡೆ ಭರ್ಜರಿ ಶತಕ, ಕರ್ನಾಟಕ 445ಕ್ಕೆ ಸರ್ವಪತನ..

ಅದರ ಸಾಮಥ್ರ್ಯದ 2,449 ಆಗಿದೆ. ಸಾಮಥ್ರ್ಯ ಮೀರಿ ಮೂರು ಪಟ್ಟು ಹೆಚ್ಚು ಕೈದಿಗಳು ತುಂಬಿದ್ದಾರೆ. ಒಂಬತ್ತು ಕೇಂದ್ರ ಕಾರಾಗೃಹಗಳು ಸೇರಿ ರಾಜ್ಯದಲ್ಲಿ ಒಟ್ಟು 60 ಜೈಲುಗಳಿವೆ. 2022ರ ನವೆಂಬರ್ ವೇಳೆಗೆ ಇವುಗಳಲ್ಲಿ ಒಟ್ಟು 24,722 ಕೈದಿಗಳಿದ್ದರು.

ಸಂಚಿತ ಸಾಮಥ್ರ್ಯ 40,718 ಆಗಿದೆ ಎಂದರು. ಯರವಾಡ ಜೈಲಿನಲ್ಲಿ ಹೆಚ್ಚುವರಿ ಬ್ಯಾರಕ್‍ಗಳನ್ನು ನಿರ್ಮಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಕೆಲವು ದಿನಗಳ ಹಿಂದೆ ಕಳುಹಿಸಲಾಗಿದೆ, ಇದರ ಜೊತೆಗೆ ಹೆಚ್ಚಿನ ಜೈಲುಗಳ ನಿರ್ಮಾಣಕ್ಕೂ ಮನವಿ ಮಾಡಲಾಗಿದೆ. ಜೈಲು ನಿರ್ಮಾಣ ಸುದೀರ್ಘ ಪ್ರಕ್ರಿಯೆ. ಬಂಖಾನೆ ಇಲಾಖೆ ಈಗಾಗಲೇ ಅದರ ಕುರಿತು ಕ್ರಮ ಕೈಗೊಂಡಿದೆ ಎಂದಿದ್ದಾರೆ.

Overcrowding, prisons, Pune, Yerawada, jail,

Articles You Might Like

Share This Article