ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಅಸಮರ್ಥತೆ ಕಾರಣ : ಓವೈಸಿ

Social Share

ಕಚ್,ನ.26- ನಮ್ಮ ಪಕ್ಷ ಬಿಜೆಪಿ ಬಿ ಟೀಮ್ ಅಲ್ಲ. ಗುಜರಾತ್‍ನಲ್ಲಿ ಕೇಸರಿ ಪಕ್ಷ ನಿರಂತರವಾಗಿ ಆರಿಸಿ ಬರುತ್ತಿರಲು ನಮ್ಮ ಪಕ್ಷದ ಮತ ಕತ್ತರಿಸುವಿಕೆಯೆ ಕಾರಣ ಎಂಬ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಪಕ್ಷದಿಂದ ಕಾಂಗ್ರೆಸ್ ಸಾಂಪ್ರಾದಾಯಿಕ ಮತಗಳು ವಿಭಜನೆಯಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪದಲ್ಲಿ ಹಾಸ್ಯಸ್ಪದವಾಗಿದೆ ಎಂದು ಅವರು ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಆಡಳಿತಾರೂಢ ಭಾರತೀಯ ಜನತಾ ಪಕ್ಷ ತನ್ನ ಪ್ರಚಾರದ ಸಮಯದಲ್ಲಿ ಏಕರೂಪ ನಾಗರಿಕ ಸಂಹಿತೆ ಮತ್ತು ಮೆಹ್ರೌಲಿ ಕೊಲೆ ಪ್ರಕರಣದಂತಹ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಮುಸ್ಲಿಂ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ವೋಟರ್ ಡೇಟಾ ಅಕ್ರಮ ನಡೆದಿಲ್ಲ ಎಂದಾದರೆ IAS ಅಧಿಕಾರಿಗಳ ಅಮಾನತಾಗಿದ್ದೇಕೆ..?

ಕಾಂಗ್ರೆಸ್ ನಮ್ಮ ಮೇಲೆ ಏಕೆ ಆರೋಪ ಮಾಡುತ್ತಿರುವುದು ತಮ್ಮ ಪಕ್ಷದ ಲೋಪಗಳನ್ನು ಮರೆಮಾಚಲು. ಕಳೆದ 27 ವರ್ಷಗಳಿಂದ ಗುಜರಾತ್‍ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಕಾಂಗ್ರೆಸ್ ಮಾತ್ರ ವಿರೋಧ ಪಕ್ಷವಾಗಿತ್ತು, ಬಿಜೆಪಿಯನ್ನು ಸೋಲಿಸದಂತೆ ಕಾಂಗ್ರೆಸ್ ಅನ್ನು ತಡೆದವರು ಯಾರು ಮತ್ತು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಮತ್ತು ಎಐಎಂಐಎಂ ಎರಡನ್ನೂ ಬಿಜೆಪಿಯ ಬಿ-ಟೀಮ್ ಎಂದು ಆರೋಪಿಸುವ ಮೂಲಕ ಪುರಾತನ ಪಕ್ಷ ತನ್ನ ಬೆಳೆ ಬೇಯಿಸಿಕೊಳ್ಳುತ್ತಿದೆ ಎಂದು ಅವರು ದೂರಿದ್ದಾರೆ.

ಪ್ರತಿ ವರ್ಷ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ : ಅನುಷ್ಕಾ ಸುನಕ್

ನಮ್ಮ ಪಕ್ಷ ಗುಜರಾತ್‍ನ 182 ಕ್ಷೇತ್ರಗಳ ಪೈಕಿ ಕೇವಲ 13 ಸ್ಥಾನಗಳಲ್ಲಿ ಮಾತ್ರ ಸ್ರ್ಪಧಿಸುತ್ತಿದೆ. ಪರಿಸ್ಥಿತಿ ಈಗಿರುವಾಗ ನಾವು ಬೇರೆ ಪಕ್ಷದ ಮತಗಳನ್ನು ಕಬಳಿಸಲು ಹೇಗೆ ಸಾಧ್ಯ ಎಂದು ಓವೈಸಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ 169 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಲಿ. ಅದನ್ನು ಬಿಟ್ಟು ತಮ್ಮ ಪಕ್ಷದ ಅಸಮರ್ಥತೆಯಿಂದ ಬಿಜೆಪಿ ನಿರಂತರವಾಗಿ ಗೆದ್ದು ಬರಲು ಕಾರಣವಾಗುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Owaisi, Blames, Congress, BJP, Rule, Gujarat,

Articles You Might Like

Share This Article