ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರು,ತಳಮಟ್ಟದಲ್ಲಿ ಬೇರೂರಿ ಕೂತಿರುವುದು ವ್ಯವಸ್ಥೆಗೆ ತಗುಲಿರಿವ ಅನಿಷ್ಟ. ಇಂದಿಗೂ ಜೀವಂತವಾಗಿದ್ದು ಅನೇಕ ಜೀವನಗಳಿಗೆ ಕೊಳ್ಳಿ ಇಟ್ಟಿದೆ. ಈ ರೀತಿಯ ಕಥೆಗಳನ್ನು ಸಿನಿಮಾ ಪರದೆಯ ಮೇಲೆ ತಂದು ಜಾಗೃತಿ ಮೂಡಿಸುವ ಕಾರ್ಯಗಳು ಈ ಹಿಂದೆ ಎಷ್ಟೋ ನಡೆದಿವೆ.
ಈಗಲೂ ನಡೆಯುತ್ತಿವೆ. ಈ ವಾರ ತೆರೆ ಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪಾಲಾರ್ ಸಿನಿಮಾ ಕೂಡ ಈ ವರ್ಗಕ್ಕೆ ಸೇರುತ್ತದೆ. ಜೀವನವೀನ್ ಆಕ್ಷನ್ ಕಟ್ ಹೇಳಿದ್ದು, ಜಾತಿ ವ್ಯವಸ್ಥೆಯಲ್ಲಿ ತಳ ಸಮಾಜಕ್ಕೆ ಆಗುವ ಅನ್ಯಾಯವನ್ನು ಉತ್ತುಂಗದ ಸ್ಥಿತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ, ಗೌರಿಬಿದನೂರು ಈ ಭಾಗಗಳಲ್ಲಿ ನಡೆಯುತ್ತಿರುವ ಸತ್ಯ ಘಟನೆಗಳನ್ನ ಸಾಕ್ಷೀಕರಿಸಲಾಗಿದೆ. ಮೇಲ್ವರ್ಗದ ಶ್ರೀಮಂತರು ಕೆಳ ಜಾತಿಯವರನ್ನು ರಾಜಕೀಯವಾಗಿ ಬಳಸಿಕೊಂಡು, ದೌರ್ಜನ್ಯದಿಂದ ಭೂಮಿ ಆಸ್ತಿಪಾಸ್ತಿಗಳನ್ನ ಕಿತ್ತುಕೊಳ್ಳುವುದಷ್ಟೇ ಅಲ್ಲದೆ ಅಮಾನುಷವಾಗ ಮರ್ಯಾದೆ ಹತ್ಯೆ ಹೆಸರಿನಲ್ಲಿ ಕೊಲ್ಲುವ ಪರಿ ಸಿನಿಮಾ ನೋಡುವ ಪ್ರತೊಯೊಬ್ಬ ನಾಗರೀಕ ತಲೆತಗ್ಗಿಸುವಂತಾಗುತ್ತದೆ.
ಎಷ್ಟರ ಮಟ್ಟಿಗೆ ಅಂದರೆ ಊರ ಗೌಡನ ವಿರುದ್ದ ತಿರುಗಿಬಿದ್ದ ಕೆಳ ಜಾತಿಯ ಹುಡುಗ ವಿವಾಹವಾದ ಮೊದಲ ರಾತ್ರಿ ಪತ್ನಿಯೊಂದಿಗೆ ಏಕಾಂತದಲ್ಲಿ ಇರುವಾಗಲೆ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತದೆ.
ಹೆಣ್ಣೊಬ್ಬಳ ಹೋರಾಟದ ಕಥೆ ಜೂಲಿಯೆಟ್ 2
ಪತಿಯನ್ನ ಕಳೆದುಕೊಂಡ ಅಬಲೆ ಹೆಣ್ಣನ್ನು ಪರಸ್ಥಿತಿಗಳು ಹೇಗೆ ರಾಕ್ಷಸರ ಮೇಲೆ ತೊಡೆ ತಟ್ಟಿ ನಿಲ್ಲುವಂತೆ ಮಾಡುತ್ತವೆ,ಮೋಸದಿಂದ ಬರೆಸಿಕೊಂಡ ಭೂಮಿಗಾಗಿ ಮತ್ತು ತನ್ನ ಮನೆ ಮೂರು ಹೆಣಗಳನ್ನ ಉರುಳಿಸಿದ ಸೇಡಿಗಾಗಿ ಆಕೆಯ ಪ್ರತೀಕಾರ ಈಡೇರುತ್ತ,ಇಲ್ಲ ಇಡೀ ವ್ಯವಸ್ಥೆಯನ್ನು ತನ್ನ ಕೈಯಲ್ಲಿ ಇರಿಸಿ ಆಟವಾಡುವ ಮೇಲ್ಜಾತಿ ಹೆಣೆಯುವ ಮಾಯಾ ಜಾಲದಲ್ಲಿ ಸಿಲುಕಿ ಅಂತ್ಯವಾಗುತ್ತಾಳ ಎಂಬುದು ಕಥೆಯ ಗುಟ್ಟು.

ಹಾಲಾರ್ ಎಂಬ ಹಳ್ಳಿಯಲ್ಲಿ ನಡೆಯುವ ಕಥೆ ನೈಜ ಘಟನೆಗಳೇ ಆಗಿದ್ದು, ಆದರೆ ಹಳ್ಳಿ ಹೆಸರು ಮಾತ್ರ ಕಾಲ್ಪನಿಕ. ನಂದಿ ಬೆಟ್ಟದಲ್ಲಿ ಹುಟ್ಟುವ ಪಾಲಾರ್ ನದಿ ಭೂಮಿಯ ಒಳಗೆ ಹರಿದು ತಮಿಳುನಾಡು ಸೇರುತ್ತದೆ.ಆನದಿ ಹರಿಯುವಾಗ ಎಷ್ಟು ಬಿಸಿಯಾಗಿರುತ್ತದೋ ಅದೇ ರೀತಿ ತುಳಿತಕ್ಕೆ ಒಳಗಾದ ಜನಾಂಗದ ರಕ್ತ ಕೂಡ ಬಿಸಿಯಾಗಿದ್ದು ಒಮ್ಮೆ ಸ್ಪೋಟವಾದರೆ ಏನಾಗುತ್ತದೆ ಎಂದು ಕಾರ್ಮಿಕವಾಗಿ ನಿರ್ದೇಶಕರು ತಿಳಿಸಿದ್ದಾರೆ.
ಕಥೆಯಲ್ಲಿ ಎರಡು ಪಾತ್ರಗಳು ಎಲ್ಲರನ್ನೂ ಕಾಡುತ್ತದೆ. ಒಂದು ನಾಯಕಿ ಸಿನಿಮಾಬಂಡಿ ಖ್ಯಾತಿಯ ಗಾಯಕಿ ವೈ.ಜಿ.ಉಮಾ ಕೋಲಾರ ಮತ್ತು ನಾಯಕ ತಿಲಕ್‌ರಾಜ್.ಉಮಾ ಶೋಷಿತ ಹೆಣ್ಣು ಮಗಳ ಪಾತ್ರದಲ್ಲಿ ತುಂಬಾ ಸ್ವಾಭಾವಿಕವಾಗಿ ಅಭಿನಯಿಸಿ ಉತ್ತಮ ನಟಿಯಾಗುವ ಭರವಸೆ ಮೂಡಿಸಿದ್ದಾರೆ.
ಭಾಷೆ ನೆಲಕ್ಕಾಗಿ ಕ್ಯಾಂಪಸ್ ಕ್ರಾಂತಿ
ಅದರಲ್ಲೂ ಕೋಲಾರ ಕನ್ನಡ ಭಾಷೆಯ ಸೊಗಡನ್ನು ಅತ್ಯದ್ಭುತವಾಗಿ ಮಾತನಾಡಿರುವುದು ಸಿನಿಮಾ ವೀಕ್ಷರಿಗೆ ಹೊಸತನವನ್ನು ಕೊಟ್ಟಿದ್ದಾರೆ. ಅದೇ ರೀತಿ ನಾಯಕ ತಿಲಕ್ ರಾಜ್ ಹಳ್ಳಿಯ ಯುವಕ ಯಾವ ರೀತಿ ಸ್ವಾಭಾವಿಕವಾಗಿ ಇರುತ್ತಾನೋ ಆ ರೀತಿಯಲ್ಲಿ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ತನ್ನನ್ನು ಕೊಂದಾಗ ಶವದ ರೀತಿ ಹಲವು ನಿಮಿಷಗಳ ಕಾಲ ಕಣ್ಣನ್ನ ಒಂದು ಕ್ಷಣವು ಮಿಟುಕಿಸದೆ ಪಳಗಿದ ನಟನಂತೆ ಕಾಣುತ್ತಾರೆ.
ಸುಬ್ರಹ್ಮಣ್ಯ ಆಚಾರ್ಯ ಕಥೆಯ ತೀವ್ರತೆಗೆ ತಕ್ಕಂತೆ ಸಂಗೀತ ಸಂಯೋಜಿಸಿರುವುದು ಫಲ ಕೊಟ್ಟಿದೆ.
ನಿರ್ದೇಶಕ ಜೀವನವೀನ್ ಹಳ್ಳಿಯ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಡುವುದರ ಮೂಲಕ, ಕೋಲಾರ ಭಾಗದ ಭಾಷೆ, ಸಂಸ್ಕೃತಿಯನ್ನು ಕತೆಯಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕಣ್ಣು ಮುಂದೆ ನಡೆಯುತ್ತಿರುವ ಸತ್ಯ ಘಟನೆಗಳಂತೆ ಪ್ರತಿ ದೃಶ್ಯವೂ ಭಾಸವಾಗುತ್ತದೆ. ಅಷ್ಟರಮಟ್ಟಿಗೆ ನೈಜತೆಯನ್ನು ನಿರ್ದೇಶಕರು ಮೆರೆದಿದ್ದಾರೆ.

ಇಂತಹ ಕಥೆಯುಳ್ಳ ಚಿತ್ರಗಳಿಗೆ ರಾಷ್ಟ್ರಮಟ್ಟದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಾಗ, ಸಿನಿಮಾ ಸಮಾಜದ ಪರಿವರ್ತನೆಗೆ ಸಹಕಾರಿಯಾಗುತ್ತದೆ ಎಂಬ ಮಾತಿಗೆ ಪುಷ್ಟಿಯಾಗಲು ನೆರವಾಗುತ್ತದೆ.
Paalaar, #Kannada, #Movie, #Reviews, #ಪಾಲಾರ್, #palar, #Paalaar, #JeevaNaveen, #Umayg, #Umayg, #SubramanyaAcharya, #VaradarajChikkaballapur, #tilakraj, #AsifRehan, #ValiKulays,