-
ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ಸಮೀಕ್ಷೆಯಂತೂ ನಿಲ್ಲಲ್ಲ : ಡಿಕೆಶಿ

ಬೆಂಗಳೂರು, ಅ.5- ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ, ಎಲ್ಲರೂ ಅಗತ್ಯ ಮಾಹಿತಿ ನೀಡುವುದು ಸೂಕ್ತ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಯಾರು ಬೇಕಾದರೂ ಆಕ್ಷೇಪ ವ್ಯಕ್ತಪಡಿಸಬಹುದು, ಅಪೇಕ್ಷೆಯನ್ನೂ ಪಡಬಹುದು. ಆದರೆ ಸಮೀಕ್ಷೆಯಂತೂ ನಡೆಯುತ್ತದೆ ಎಂದರು. ಈ ಹಿಂದೆ ನಡೆದಿದ್ದಂತಹ ಸಮೀಕ್ಷೆ ಸರಿಯಿಲ್ಲ ಎಂದು ಹೇಳಿದ್ದಕ್ಕಾಗಿಯೇ ನಮ ಸರ್ಕಾರ ಹೊಸದಾಗಿ ಸಮೀಕ್ಷೆ ನಡೆಸುತ್ತಿದೆ. ಈಗಲೂ ವಿರೋಧ ಮಾಡುವುದು ಅರ್ಥಹೀನ ಎಂದು ತಿರುಗೇಟು…
-
ಉತ್ತರ ಬಂಗಾಳದಾದ್ಯಂತ ನಿರಂತರ ಮಳೆ, ಭೂಕುಸಿತದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವು

ಕೋಲ್ಕತ್ತ, ಅ.5-ಉತ್ತರ ಬಂಗಾಳದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಡಾರ್ಜಿಲಿಂಗ್‌ನ ಮಿರಿಕ್ ಮತ್ತು ಸುಖಿಯಾ ಪೋಖಾರಿಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ 15 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಕುರ್ಸಿಯೊಂಗ್ ಬಳಿಯ ರಾಷ್ಟ್ರೀಯ ಹೆದ್ದಾರಿ 110 ರ ಉದ್ದಕ್ಕೂ ಇರುವ ಹುಸೇನ್ ಖೋಲಾದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ಈ ಅವಘಡ ಸಂಭವಿಸಿದೆ. ಡಾರ್ಜಿಲಿಂಗ್ ಜಿಲ್ಲಾ ಪೊಲೀಸರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಭಾರಿ ಮಳೆಯಿಂದ…
-
ಜೋಳದ ದಂಟಿನಿಂದ ಸಿಹಿಬೆಲ್ಲ ತಯಾರಿಸಿದ ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ ಸಾಹಸ

ಹುಬ್ಬಳ್ಳಿ ಅ.5- ಮನಸಿದ್ದರೆ ಮಾರ್ಗ ಎಂಬಂತೆ ಬಾಗಲಕೋಟೆಯ ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ ಅವರು ಜೋಳದ ದಂಟಿನಿಂದ ಸಿಹಿಬೆಲ್ಲ ತಯಾರಿ ಅಚ್ಚರಿ ಮೂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಬ್ಬಿನಿಂದ ಬೆಲ್ಲ ತಯಾರಿಸುತ್ತಾರೆ ಆದರೆ ಸಿಹಿ ಜೋಳದ ದಂಟಿನಿಂದ ಬೆಲ್ಲ ತಯಾರಿಸಬಹುದು ಎಂದರು.ರೈತರು ತಮ ಜಾನುವಾರುಗಳಿಗೆ ಅಗತ್ಯವಾದ ಜೋಳದ ದಂಟನ್ನು ಇಟ್ಟುಕೊಂಡು ಉಳಿದದ್ದನ್ನು ಮಾರಾಟ ಮಾಡುತ್ತಿದ್ದರು.ಇಲ್ಲವೇ, ಸುಟ್ಟು ಹಾಕುತ್ತಿದ್ದರು, ಆದರೆ, ಇದೀಗ ಜೋಳ ಬೆಳೆದ 120 ದಿನಗಳ ಒಳಗಾಗಿ ಕಟಾವು ಮಾಡಿ ಕೊಟ್ಟರೆ ಪ್ರತಿ ಟನ್‌ಗೆ 3,000 ಲಾಭ…
-
ಶಿವಾರ್ಜುನ್ ಅವರಿಗೆ 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ

ಬೆಂಗಳೂರು, ಅ.5- ಕಳೆದ 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಹಿರಿಯ ನಿರ್ಮಾಣ ನಿರ್ವಾಹಕ ಶಿವಕುಮಾರ್ ಎಸ್(ಶಿವಾರ್ಜುನ್) ಪೊಗರು ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. 40 ವರ್ಷಗಳ ಹಿಂದೆ ಸಂಸಾರದ ಗುಟ್ಟು, ಪ್ರೇಮ ಪರ್ವ ಮುಂತಾದ ಚಿತ್ರಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದ ಶಿವಾರ್ಜುನ್ ಅವರು ನಂತರ ಗೌರಿಶಂಕರ್, ಎಸ್.ರಾಮಚಂದ್ರ, ಮಧುಸೂದನ್, ಸುಂದರನಾಥ ಸುವರ್ಣ ಅವರಂತಹ ಹಿರಿಯ ಛಾಯಾಗ್ರಾಹಕರ ಬಳಿ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆನಂತರ ನಿರ್ಮಾಣ ನಿರ್ವಾಹಕರಾಗಿ ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ವಜ್ರೇಶ್ವರಿ,…
-
ಕೈಕೊಟ್ಟ ಎಂಜಿನ್, ತುರ್ತು ಎಂಜಿನ್ ಸಹಾಯದಿಂದ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ, ತಪ್ಪಿದ ಅನಾಹುತ

ಮುಂಬೈ, ಅ.5- ಅಮೃತಸರದಿಂದ ಬ್ರಿಟನ್‌ನ ಬರ್ಮಿಂಗ್ಹ್ಯಾಮ್‌ಗೆ ಹೋಗುತ್ತಿದ್ದ ಬೋಯಿಂಗ್ 787 ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಇಂಜಿನ್ ಕೈಕೊಟ್ಟು ಸಂದರ್ಭದಲ್ಲಿ ಪೈಲಟ್‌ಗಳು ಸಯಂಚಾಲಿತ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ. ಎರಡು ಎಂಜಿನ್ ವೈಫಲ್ಯ ಅಥವಾ ಸಂಪೂರ್ಣ ಎಲೆಕ್ಟ್ರಾನಿಕ್ಸ್ ಅಥವಾ ಹೈಡ್ರಾಲಿಕ್ ವೈಫಲ್ಯದ ಸಂದರ್ಭದಲ್ಲಿ ವಿಮಾನವನ್ನು ಸ್ವಯಂಚಾಲಿತಕ್ಕೆ ನಿಯೋಜಿಸಲ್ಪಡುತ್ತದೆ. ಇದು ತುರ್ತು ವಿದ್ಯುತ್ ಉತ್ಪಾದಿಸಲು ಗಾಳಿಯ ವೇಗವನ್ನು ಬಳಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಸಂಜೆ ಅಮೃತಸರದಿಂದ ಬರ್ಮಿಂಗ್ಹ್ಯಾಮ್‌ಗೆ ತೆರಳಿದ್ದ ವಿಮಾನದ ಅಂತಿಮ ಹಂತದ…
-
ಸಚಿವ ಜಮೀರ್ ಹೇಳಿಕೆಗೆ ಸಂಸದ ಇ.ತುಕಾರಾಂ ತಿರುಗೇಟು

ಬೆಂಗಳೂರು, ಅ.5– ಸಂಪುಟದಲ್ಲಿ ಸಚಿವರಾಗಲು ಶುದ್ಧ ಚಾರಿತ್ರ್ಯದ ಅಗತ್ಯ ಇದೆ ಎಂದು ಹೇಳುವ ಮೂಲಕ ಸಂಸದ ಇ.ತುಕಾರಾಂ, ಸಚಿವ ಜಮೀರ್ ಅಹಮದ್‌ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಇಂದು ಬೆಂಗಳೂರಿನಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಲ್ಲಿ ಜವಾಹರ್‌ಲಾಲ್ ನೆಹರು ಅವರ ಕಾಲದಿಂದಲೂ ಹೈಕಮಾಂಡ್ ಸಂಸ್ಕೃತಿಯಿದೆ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗಲೂ ಇದು ಜಾರಿಯಲ್ಲಿತ್ತು. ಸಂಪುಟ ಸೇರ್ಪಡೆಯ ಬಗ್ಗೆ ಹಿರಿಯ ವರಿಷ್ಠ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಮ್ಮ ಹಂತದಲ್ಲಿ ಈ ವಿಚಾರಗಳು ನಿರ್ಧಾರವಾಗುವುದಿಲ್ಲ…
-
ಖ್ಯಾತ ಸಾಹಿತಿ, ಕತೆಗಾರ ಪ್ರೊ.ಮೊಗಳ್ಳಿ ಗಣೇಶ್ ವಿಧಿವಶ

ಬೆಂಗಳೂರು, ಅ.5-ಖ್ಯಾತ ಸಾಹಿತಿ, ಹಿರಿಯ ಕತೆಗಾರ ಪ್ರೊ.ಮೊಗಳ್ಳಿ ಗಣೇಶ್ (64) ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಮೂವರು ಪುತ್ರಿಯರು ಸೇರದಂತೆ ಆಪಾರ ಸಂಖ್ಯೆಯ ಓದುಗರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆಸಲಾಗುತ್ತದೆ. ಕಳೆದ ಹಲವು ದಿನಗಳಿಂದ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.ಇದಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್ ತಂಗಡಿಗಿ ಸೇರಿದಂತೆ ಅನೇಕ ಗಣ್ಯರು ತೀವ್ರ…
-
ಕೆಮ್ಮಿನ ಸಿರಪ್ ದುರಂತ : 14 ಮಕ್ಕಳು ಸಾವಿನ ಬಗ್ಗೆ ತನಿಖೆ ವೇಳೆ ಸ್ಪೋಟಕ ಅಂಶ ಬಹಿರಂಗ

ಭೋಪಾಲ್,ಅ.5-ಮಧ್ಯಪ್ರದೇಶದಲ್ಲಿ 14 ಮಕ್ಕಳು ಸಾವಿನ ಬಗ್ಗೆ ತನಿಖೆ ವೇಳೆ ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಲ್ಲಿ ಹೆಚ್ಚು ವಿಷಕಾರಿ ವಸ್ತು ಇರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಸುಮಾರು 6 ರಾಜ್ಯಗಳಲ್ಲಿ ಸಿರಪ್‌ಗಳು,ಮಾತ್ರೆ ಸೇರಿದಂತೆ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ ಅಪಾಯ ಆಧಾರಿತ ತಪಾಸಣೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಪರೀಕ್ಷಿಸಿದ ಸಿರಪ್‌ನ ಮಾದರಿಯನ್ನು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು…
-
ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಅಹಿಂದ ಓಲೈಸಲು ಯತ್ನಿಸುತ್ತಿದೆ : ಬಿ.ವೈ.ರಾಘವೇಂದ್ರ

ಶಿವಮೊಗ್ಗ,ಅ.5-ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಅಹಿಂದವನ್ನು ಓಲೈಸಲು ಮುಂದಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ,ಜಾತಿ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕ ವಾಗಿದೆ. ಕಾಂಗ್ರೆಸ್ ಸಚಿವರೇ ಈ ಸಮೀಕ್ಷೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು ಇನ್ನು . ರಾಜ್ಯ ಹೈಕೋರ್ಟ್ ಕೂಡ ಈ ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಕಡ್ಡಾಯವಾಗಿ ಮಾಹಿತಿ ನೀಡುವ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ,ಜನರಿಗೂ ಇದರಲ್ಲಿ ಆಸಕ್ತಿ ಇಲ್ಲ ಎಂದು ಟೀಕಿಸಿದರು. ಹೀಗಿದ್ದಾಗ ವಾಸ್ತವವಾಗಿ ಜಾತಿಗಣತಿ ಮಾಡಿ ಪ್ರಯೋಜನವೇನು ಎಂದು…
-
ಸೆಪ್ಟೆಂಬರ್‌ನಲ್ಲಿ ಕುಸಿದ ರಾಜ್ಯದ ವಾಣಿಜ್ಯ ತೆರಿಗೆ ಸಂಗ್ರಹ

ಬೆಂಗಳೂರು, ಅ.5-ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ವಾಣಿಜ್ಯ ತೆರಿಗೆ ಸಂಗ್ರಹವು ಕಳೆದ ಆರು ತಿಂಗಳಲ್ಲಿ 53196.20 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ. ಆಗಸ್ಟ್‌ನಲ್ಲಿ ಗಣನೀಯ ಹೆಚ್ಚಳ ಕಂಡಿದ್ದ ಈ ತೆರಿಗೆ ಸಂಗ್ರಹವು ಸೆಪ್ಟೆಂಬರ್ ತಿಂಗಳಲ್ಲಿ ಇಳಿಕೆಯಾಗಿದೆ. ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ 8891.63 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ. ಇದು ಆಗಸ್ಟ್ ತಿಂಗಳಿಗೆ ಹೋಲಿಸಿದರೆ 175.42 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಆದರೆ, ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಹೆಚ್ಚಳವಾಗಿದೆ. ಸೆಪ್ಟೆಂಬರ್‌ನಲ್ಲಿ 6653.52…