ಮೈಸೂರು, ನ. 3– ಅಭಿವೃದ್ದಿಯ ಹರಿಕಾರ ಎಂದೇ ಹೆಸರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ರವರ ಪ್ರತಿಮೆ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ಅನಾವರಣಗೊಂಡಿದೆ. ಆದರೆ ಅವರು ಹುಟ್ಟಿ ಬೆಳೆದು ಆಶ್ರಯ ನೀಡಿದ್ದ ಗೃಹ ಅಭಿವೃದ್ಧಿ ಕಾಣದೆ ನಿಂತಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಡಿ.ದೇವರಾಜ ಅರಸ್ ರವರು ಹುಟ್ಟಿಬೆಳೆದ ನಿವಾಸದ ಬಗ್ಗೆ 1970ರ ದಶಕದಲ್ಲಿ ರಾಜಕಾರಿಣಿಗಳಿಂದ, ಜನಗಳಿಂದ ತುಂಬಿ ತುಳುಕುತ್ತಿದ್ದ ಈ ಮನೆ ಇದೀಗ ನಿರ್ಜೀವವಾಗಿದೆ. ಅಭಿವೃದ್ದಿಯ ಹರಿಕಾರನಾಗಿ ಹೆಸರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ರವರ ಮನೆಗೆ ಅಭಿವೃದ್ದಿಯೇ ಮರೀಚಿಕೆಯಾಗಿದೆ. ಇವರಿಂದ ರಾಜಕೀಯ ಪಟ್ಟುಗಳನ್ನ ಕಲಿತ ಎಷ್ಟೋ ರಾಜಕಾರಿಣಿಗಳಿಗೆ ಈ ನಿವಾಸ ಜ್ಞಾಪಕಕ್ಕೂ ಬಾರದಿರುವುದು ವಿಪರ್ಯಾಸ.
1915ರಲ್ಲಿ ಜನಿಸಿದ ಡಿ. ದೇವರಾಜ್ ಅರಸ್ ರವರು 1982ರ ವರೆಗೆ ಇದೇ ನಿವಾಸದಲ್ಲಿ ವಾಸ ಮಾಡಿದವರು. ದೇವರಾಜ ಅರಸ್ ರವರ ರಾಜಕೀಯ ಹುಟ್ಟಿಗೆ ಕಾರಣವಾದ ಮನೆಯೂ ಇದಾಗಿದೆ. ರಾಜ್ಯದ ಜನತೆಗೆ ಇವರು ಆಡಳಿತದ ಅವಧಿಯಲ್ಲಿ ಕೊಟ್ಟ ಕೊಡುಗೆಗಳು ಅವಿಸರಣೀಯ. ಇವರ ಗರಡಿಯಲ್ಲಿ ಪಳಗಿದ ರಾಜಕಾರಣಿಗಳಿಗೆ ಇಂದಿಗೂ ಇವರ ಅಭಿವೃದ್ದಿಯ ಮಂತ್ರವೇ ಜೀವನಾಡಿ. ಪ್ರತಿಯೊಂದು ವಿಚಾರ ದಲ್ಲೂ ಡಿ.ದೇವರಾಜ ಅರಸ್ ರವರ ರಾಜಕೀಯವನ್ನೇ ಉದಾಹರಣೆ ಯಾಗಿ ಬಳಸಿಕೊಳ್ಳುತ್ತಿರುವುದು ಪ್ರಸ್ತುತ.
ಇಂತಹ ಒಬ್ಬ ಮಹಾನ್ ಹಾಗೂ ಮಾದರಿ ನಾಯಕನನ್ನ ರಾಜ್ಯಕ್ಕೆ ಕೊಟ್ಟ ಈ ಮನೆಯಲ್ಲಿ ಉಳಿದಿರುವುದು ನೆನಪುಗಳು ಮಾತ್ರ. ದೇವರಾಜ ಅರಸುರವರ ನಿವಾಸವನ್ನು ಅಭಿವೃದ್ದಿಪಡಿಸುವ ಸಾಕಷ್ಟು ಪ್ರಯತ್ನಗಳು ನಡೆದವಾದರೂ ಲಿತಾಂಶ ಮಾತ್ರ ಶೂನ್ಯ.
2015 ರಲ್ಲಿ ಈ ಮನೆಯನ್ನ ಮ್ಯೂಸಿಯಂ ಮಾಡಲು ಹೊರಟವರು ಕೈಕಟ್ಟಿ ಕುಳಿತರು.
ಮಂಜುನಾಥ್ ರವರು ಶಾಸಕರಾಗಿದ್ದ ವೇಳೆ ಹಾಗೂ ಹಿಂದುಳಿದ ವರ್ಗ ಹಾಗೂ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯ ರವರ ಅವಧಿಯಲ್ಲಿ ಕಲ್ಲಹಳ್ಳಿ ಗ್ರಾಮದ ಅಭಿವೃದ್ದಿಗೆ ದತ್ತು ಸ್ವೀಕಾರವಾಯ್ತು. ಆದರೆ ಈ ಯೋಜನೆಯೂ ಮೂಲೆ ಗುಂಪಾಯಿತು. ಡಿ.ದೇವರಾಜ ಅರಸ್ ರವರ ನಿವಾಸಕ್ಕೆ ತಲುಪ ಬೇಕಾದರೂ ರಸ್ತೆಯಲ್ಲಿರುವ ಹಳ್ಳಗುಂಡಿಗಳನ್ನ ತಪ್ಪಿಸಿಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗಿದೆ. ಸದ್ಯ ಈ ಮನೆಗೆ ಪ್ರತಿದಿನ ಸ್ವಚ್ಛಗೊಳಿಸಲು ವ್ಯಕ್ತಿಯೊಬ್ಬರು ಬರುತ್ತಾರೆ. ಕಸಗುಡಿಸಿ ಮನೆಯಲ್ಲಿರುವ ಮಹಾವೀರ ಪ್ರತಿಮೆಗೆ ಪೂಜೆ ಸಲ್ಲಿಸಿ ತೆರಳುವುದು ಹೊರತು ಪಡಿಸಿದರೆ ಇನ್ಯಾವ ಚಟುವಟಿಕೆಯೂ ಅಲ್ಲಿ ಇಲ್ಲ. ದೇವರಾಜ ಅರಸ್ ರವರ ಪುತ್ರಿ ಹಾಗೂ ಮೊಮಕ್ಕಳೂ ಸಹ ಇತ್ತ ಸುಳಿಯದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಇಂದು ಡಿ.ದೇವರಾಜ ಅರಸ್ ರವರ ಪ್ರತಿಮೆಯನ್ನ ಅನಾವರಣ ಗೊಳಿಸುವ ಮೂಲಕ ಸರ್ಕಾರ ಸರಣೆ ಮಾಡುತ್ತಿದೆ ಆದರೆ ಮತ್ತೊಂದೆಡೆ ಇವರ ನಿವಾಸವನ್ನು ಅಭಿವೃದ್ಧಿಪಡಿಸಬೇಕೆಂದು ಸಾರ್ವಜನಿಕರ ಆಶಯವಾಗಿದೆ.