ಕಿಚ್ಚನ ‘ಪೈಲ್ವಾನ್’ ಟ್ರೈಲರ್ ರಿಲೀಸ್
ಪೋಸ್ಟರ್, ಟೀಸರ್ ಹಾಗೂ ಹಾಡುಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಸಿನಿಮಾ ‘ಪೈಲ್ವಾನ್’. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗಪ್ಪಳಿಸಲು ಸಿದ್ಧವಾಗಿರುವ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಪವರ್ ಫುಲ್ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ.
ಕನ್ನಡ, ಮಲಯಾಳಂ ಹಾಗೂ ತಮಿಳಿನ ಟ್ರೈಲರ್ ಅನ್ನು ಲಹರಿ ಬಿಡುಗಡೆ ಮಾಡಿದರೆ, ತೆಲುಗು ಟ್ರೈಲರ್ ಅನ್ನು ವರಾಹಿ ಚಲನಚಿತ್ರ ಹಾಗೂ ಹಿಂದಿ ಟ್ರೈಲರ್ ಅನ್ನು ಝೀ ಸ್ಟುಡಿಯೋಸ್ ಬಿಡುಗಡೆ ಮಾಡಿವೆ.
‘ಕೆ.ಜಿ.ಎಫ್’ ನಂತರ ಕನ್ನಡದ ಬಹುನಿರೀಕ್ಷಿತ ಚಿತ್ರ ಅಂತಲೇ ಬಿಂಬಿತವಾಗಿರೋ ‘ಪೈಲ್ವಾನ್’ ಟ್ರೈಲರ್ 5 ಭಾಷೆಗಳ್ಲಲಿ ಇಂದು ರಿಲೀಸ್ ಆಗಿದೆ. ಬಹುಭಾಷೆಯಲ್ಲಿ ಶ್ವದಾದ್ಯಂತ ಬಿಡುಗಡೆಯಾಗೋಕೆ ತಯಾರಿ ಮಾಡಿಕೊಳ್ಳುತ್ತಿದ್ದು, ಕೃಷ್ಣ ‘ಹೆಬ್ಬುಲಿ’ ನಂತರ ಸುದೀಪ್ ಅವರನ್ನು ‘ಪೈಲ್ವಾನ್’ ಅವತಾರದಲ್ಲಿ ತೆರೆಗೆ ತರುತ್ತಿದ್ದಾರೆ. ಕಿಚ್ಚನ ಸಿಕ್ಸ್ ಪ್ಯಾಕ್ ಅವತಾರದ ದರ್ಶನಕ್ಕೆ ಚಿತ್ರಪ್ರೇಮಿಗಳು ಕಾತರದಿಂದ ಕಾದಿದ್ದಾರೆ.
ಕನ್ನಡದ ಚಿತ್ರಗಳು ಈಗ ಮಾರುಕಟ್ಟೆ ಹಿಗ್ಗಿಸಿಕೊಂಡಿದ್ದು, ಐದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿವೆ. ಸದ್ಯ ಚಿತ್ರರಸಿಕರ ನಿರೀಕ್ಷೆ ‘ಪೈಲ್ವಾನ್’. ಸುದೀಪ್ ಜೊತೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡ ನಟಿಸಿರೋ ‘ಪೈಲ್ವಾನ’ನ ಪವರ್ ಹೇಗಿರುತ್ತೆ ಅನ್ನೋದು ಟ್ರೈಲರ್ನ ಮೂಲಕ ರಿವೀಲ್ ಆಗಿದೆ. ಟ್ರೈಲರ್ ನೋಡಿದ ಅಭಿಮಾನಿಗಳು ಪೈಲ್ವಾನ್ ಆಗಿ ಬದಲಾಗಲು ಕಿಚ್ಚ ಪಟ್ಟ ಶ್ರಮವನ್ನು ಕೊಂಡಾಡಿದ್ದಾರೆ.
ಬಹು ನಿರೀಕ್ಷಿತ ಈ ಸಿನಿಮಾ ’ ಸೆಪ್ಟೆಂಬರ್ 12ಕ್ಕೆ ದೇಶದಲ್ಲಿ ಐದು ಭಾಷೆಗಳಲ್ಲಿ ರಿಲೀಸ್ ಆಗ್ತಿದೆ.