ನ್ಯೂಯಾರ್ಕ್,ಜ.19- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಸಿರುವ ಲಷ್ಕರ್-ಎ-ತಯ್ಯಬಾ ಮತ್ತು ಜೈಷ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಅಲ್-ಖೈದಾ ಸಂಪರ್ಕಗಳು ಬಲವಾಗಾ ಲಾರಂಭಿಸಿವೆ ಎಂದು ವಿಶ್ವಸಂಸ್ಥೆಗೆ ಭಾರತದ ಪ್ರತಿನಿ ತಿಳಿಸಿದ್ದಾರೆ. ಆಫ್ಘಾನಿಸ್ತಾನದ ಬೆಳವಣಿಗೆಗಳೊಂದೇ ಭಯೋತ್ಪಾದಕ ಸಂಘಟನೆಗಳ ಬಲವರ್ಧನೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಇಸ್ಲಾಮಿಕ್ ಸ್ಟೇಟ್(ಐಸಿಸ್) ಸಂಘಟನೆ ತನ್ನ ಕಾರ್ಯ ವಿಧಾನವನ್ನು ಬದಲಿಸಿಕೊಂಡಿದೆ. ಸಿರಿಯಾ ಮತ್ತು ಇರಾಕ್‍ನಲ್ಲಿ ತನ್ನ ನೆಲೆಯನ್ನು ಪುನಃ ಗಳಿಸಿಕೊಳ್ಳಲು ಒತ್ತು ನೀಡಿದೆ ಮತ್ತು ಅದರ ಪ್ರಾದೇಶಿಕ ಸಹ ಸಂಘಟನೆಗಳು ಬಲರ್ವಸಿಕೊಳ್ಳುತ್ತಿದ್ದು, ತಮ್ಮ ನೆಲೆ ವಿಸ್ತರಿಸಿಕೊಳ್ಳುತ್ತಿವೆ.
ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ತಮ್ಮ ಗಮನ ಕೇಂದ್ರೀಕರಿಸಿವೆ ಎಂದು ವಿಶ್ವಸಂಸ್ಥೆಯ ರಾಯಭಾರಿಗೆ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಅವರು ಮಂಗಳವಾರ ಜಾಗತಿಕ ಭಯೋತ್ಪಾದನಾ ನಿಗ್ರಹ ಸಮಿತಿ ಆಯೋಜಿಸಿದ್ದ ಅಂತಾರಾಷ್ಟ್ರಿಯ ಭಯೋತ್ಪಾದನಾ ನಿಗ್ರಹ ಸಮಾವೇಶ-2022ನ್ನು ಉದ್ದೇಶೀಸಿ ಮಾತನಾಡುವಾಗ ವಿವರಿಸಿದರು.
ಅದೇ ರೀತಿ ಅಲ್‍ಖೈದಾ ಒಂದು ಪ್ರಬಲ ಬೆದರಿಕೆಯಾಗಿ ಪರಿಣಮಿಸಿದೆ. ಇತ್ತೀಚೆಗೆ ಆಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅವುಗಳ ಬಲವರ್ದನೆಗೆ ಇಂಬು ನೀಡಿವೆ. ಅಲ್‍ಖೈದಾ ಮತ್ತು ಅದರ ಪ್ರಾದೇಶಿಕ ಸಹ ಸಂಘಟನೆಗಳು ಆಫ್ರಿಕಾದಲ್ಲಿ ತಮ್ಮ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗಿವೆ ಎಂದು ಮೂರ್ತಿ ನುಡಿದರು.
ಜಾಗತಿಕ ಭಯೋತ್ಪಾದನಾ ವ್ಯಾಪ್ತಿಯಲ್ಲಿ 2001ರಲ್ಲಿ 9/11ರ ಉಗ್ರಗಾಮಿ ದಾಳಿಗಳು ಭಯೋತ್ಪಾದನೆಯೆಡೆಗಿನ ನಮ್ಮ ಅನುಸಂಧಾನದಲ್ಲಿ ಒಂದು ತಿರುವಾಗಿರುವುದನ್ನು ಸಾಬೀತುಪಡಿಸಿz ಎಂದು 2022ರ ಸಾಲಿಗೆ ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಸಮಿತಿಯ ಅಧ್ಯಕ್ಷರೂ ಆಗಿರುವ ತಿರುಮೂರ್ತಿ ಪ್ರತಿಪಾದಿಸಿದರು.
