ಅಮೃತಸರ, ನ.29 – ಪಂಜಾಬ್ ರಾಜ್ಯದ ಅಮೃತಸರ ಜಿಲ್ಲಾ ಭಾರತ ಗಡಿ ಬಳಿ ಪಾಕಿಸ್ತಾನದಿಂದ ನುಸುಳಿದ್ದ ಡ್ರೋನ್ ಹೊಡೆದುರುಳಿಸುವಲ್ಲಿ ಗಡಿ ಭದ್ರತಾ ಪಡೆ ಯಶಸ್ವಿಯಾಗಿದೆ. ಅಮೃತಸರ ನಗರದಿಂದ ಉತ್ತರಕ್ಕೆ 40 ಕಿಮೀ ದೂರದಲ್ಲಿರುವ ಚಹರ್‍ಪುರ್ ಗ್ರಾಮದ ಬಳಿ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸುವುದನ್ನು ಗಮನಿಸಿದ ಬಿಎಸ್‍ಎಫ್ ಸಿಬ್ಬಂದಿ ಕಳೆದ ರಾತ್ರಿ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣ ಶೋಧ ಕಾರ್ಯಾಚರಣೆಯಲ್ಲಿ ಭಾಗಶಃ ಹಾನಿಗೊಳಗಾದ ಹೆಕ್ಸಾಕಾಪ್ಟರ್ ವಶಪಡಿಸಿಕೊಳ್ಳಲಾಗಿದೆ ಆರು ರೋಟರ್‍ಗಳನ್ನು ಹೊಂದಿರುವ ಮಾನವರಹಿತ ವೈಮಾನಿಕ ವಾಹನದ ಕೆಳಗೆ ಬಿಳಿ ಬಣ್ಣದ ಪಾಲಿಥಿನ್‍ಕವರ್‍ನಲ್ಲಿ ಕೆಲ ವಸ್ತುಗಳಿತ್ತು ಎಂದು ಗೊತ್ತಾಗಿದೆ.
ಫಿಫಾ ಫುಟ್ಬಾಲ್ ಪಂದ್ಯದಲ್ಲೂ ಕ್ರಿಕೆಟ್ ಸದ್ದು
ಮಾದಕ ವಸ್ತು ಸಾಗಣೆ ಮಾಡಲಾಗುತ್ತಿತ್ತು ಎಂದು ಶಂಕಿಸಲಾಗಿದೆ, ಬಿಎಸ್‍ಎಫ್‍ನ ಎಚ್ಚರಿಕೆಯ ಪಡೆಗಳು ಮತ್ತೊಮ್ಮೆ ಡ್ರೋನ್ ಸೆರೆಹಿಡಿಯುವಲ್ಲಿ ಮತ್ತು ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲು ಸಾಧ್ಯವಾಯಿತು ಎಂದು ಪಡೆಯ ವಕ್ತಾರರು ತಿಳಿಸಿದ್ದಾರೆ.
ನವೆಂಬರ್ 25 ರಂದು ಅಮೃತಸರದ ಅಂತರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಲಾಗಿತ್ತು.
Pak, drone, shot, down, BS,F Amritsar,