ಇಸ್ಲಮಾಬಾದ್,ಜ.11-ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ಖಾನ್ ಹಾಗೂ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಕೆಲವು ನಾಯಕರ ವಿರುದ್ಧ ಪಾಕ್ ಚುನಾವಣಾ ಆಯೋಗ ಬಂಧನದ ವಾರಂಟ್ ಹೊರಡಿಸಿದೆ.
ಆಯೋಗದ ವಿರುದ್ಧ ಇಮ್ರಾನ್ ಖಾನ್ ಹಾಗೂ ಅವರ ಪಕ್ಷದ ಕೆಲವು ಉನ್ನತ ನಾಯಕರು ನೀಡಿದ ಹೇಳಿಕೆ ಕುರಿತಂತೆ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ಅವರು ದೂರು ನೀಡಿದ ನಂತರ ಬಂಧನದ ವಾರಂಟ್ ಹೊರಡಿಸಲಾಗಿದೆ.
ಆಯೋಗದ ದೂರನ್ನಾಧರಿಸಿ ನಿಸಾರ್ ದುರಾನಿ ನೇತೃತ್ವದ ನ್ಯಾಯಪೀಠವೂ ಇಮ್ರಾನ್ ಖಾನ್ ಮತ್ತು ಅವರ ಬೆಂಬಲಿಗರ ಹೇಳಿಕೆಯನ್ನು ಖಂಡಿಸಿ ಕೂಡಲೆ ಅವರನ್ನು ಬಂಧಿಸುವಂತೆ ಸೂಚಿಸಿದೆ.
ವಿಶ್ವದ ಅತಿ ಉದ್ದದ ನದಿ ವಿಹಾರಕ್ಕೆ ಗಂಗಾ ವಿಲಾಸ್ ಐಷಾರಾಮಿ ಕ್ರೂಸ್ ರೆಡಿ
ನ್ಯಾಯಲಯದ ಮುಂದೆ ಹಾಜರಾಗದೆ ವಿನಾಯಿತಿ ಮನವಿ ಸಲ್ಲಿಸುತ್ತಲೆ ಬಂದಿದ್ದ ಅವರ ಧೋರಣೆಗೆ ಮನ್ನಣೆ ನೀಡದೆ 50 ಸಾವಿರ ರೂ. ಮೌಲ್ಯದ ಶ್ಯೂರಿಟಿ ಬಾಂಡ್ಗಳ ಜತೆಗೆ ಜಾಮೀನು ಪಡೆಯಬಹುದಾದ ಬಂಧನದ ವಾರಂಟ್ ಹೊರಡಿಸಿ ವಿಚಾರಣೆಯನ್ನು ಜ.17ಕ್ಕೆ ಮುಂದೂಡಿದೆ.
Pakistan, Issues, Arrest, Warrant, Imran Khan, Contempt Case,