ಇಸ್ಲಾಮಾಬಾದ್,ಜ.14- ಸರ್ಕಾರದಿಂದ ಪಶ್ಚಿಮ ಖೈಬರ್ ಪಖ್ತಾನ್ವಾ ಪ್ರಾಂತ್ಯದ ಕಡೆಗಣನೆಯಾಗಿರುವುದಕ್ಕೆ ಪ್ರಧಾನಿಯ ಪರ ಮತ ನೀಡುವುದಿಲ್ಲ ಎಂದು ಹೇಳಿದ್ದಕ್ಕಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಮತ್ತು ಪ್ರಧಾನಿಯ ನಡುವೆ ಕಾವೇರಿದ ವಾಗ್ವಾದ ನಡೆದ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಾಕ್ ಪ್ರಧಾನಿ ಇಮ್ರಾನ್‍ಖಾನ್ ಅಧ್ಯಕ್ಷತೆಯಲ್ಲಿ ಪಾಕ್ ಸಂಸತ್ ಭವನದಲ್ಲಿ ನಿನ್ನೆ ನಡೆದ ಆಡಳಿತಾರೂಢ ಮೈತ್ರಿಕುಟದ ಸಂಸದೀಯ ಪಕ್ಷದ ಸಭೆಯಲ್ಲಿ ಈ ಘಟನೆ ಜರುಗಿದೆ ಎಂದು ದಿ ಡಾನ್ ವಾರ್ತಾಪತ್ರಿಕೆ ವರದಿ ಮಾಡಿದೆ.
ಸಾಧಾರಣವಾಗಿ ಮಿನಿ ಬಜೆಟ್ ಎಮದು ಕರೆಯಲಾಗುವ ವಿವಾದಿತ ಪೂರಕ ಹಣಕಾಸು ಮಸೂದೆ-2022ರ ಅನುಮೋದನೆಗಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡ ರಕ್ಷಣಾ ಸಚಿವ ಪರ್ವೇಜ್ ಖಟ್ಟಕ್ ಅಭಿವೃದ್ಧಿ ಕಾಣದ ಈ ಪ್ರಾಂತ್ಯದಲ್ಲಿ ಹೊಸ ಅನಿಲ ಸಂಪರ್ಕಗಳನ್ನು ಜನತೆಗೆ ನೀಡದಿದ್ದರೆ ಪ್ರಧಾನಿ ಖಾನ್‍ಪರ ಮತ ಹಾಕುವುದಿಲ್ಲ ಎಂದು ಹೇಳಿದರು ಎನ್ನಲಾಗಿದೆ.
ಖಟ್ಟಕ್ ಅವರು ಖೈಬರ್ ಪಖ್ತೂನ್ವಾ (ಕೆಪಿ) ಪ್ರಾಂತ್ಯದ ನೌಕ್ಷೀರಾ-1 ಕ್ಷೇತ್ರದಿಂದ ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ.
ಖಟ್ಟಕ್ ಅವರ ದೂರುಗಳಿಂದ ಪ್ರಧಾನಿ ಕೋಪಗೊಂಡು ನನ್ನನ್ನು ಬ್ಲ್ಯಾಕ್‍ಮೇಲ್ ಮಾಡುವುದನ್ನು ನಿಲ್ಲಿಸಿ ಎಂದು ಸೂಚಿಸಿದರು ಎಂಬುದಾಗಿ ಮೂಲಗಳು ತಿಳಿಸಿವೆ.
ಇದರಿಂದ ರಕ್ಷಣಾ ಸಚಿವರು ಸಭಾಂಗಣದಿಂದ ಹೊರನಡೆದರು. ಆದರೆ, ಅನಮತರ ಪ್ರಧಾನಿ ಅವರನ್ನು ವಾಪಸ್ ಕರೆಸಿದರು ಎಂದು ವರದಿ ತಿಳಿಸಿದೆ.
