Sunday, June 15, 2025
Homeರಾಷ್ಟ್ರೀಯ | Nationalಬೇಹುಗಾರಿಕೆ ಮಾಡಿದ ಯೂಟ್ಯೂಬರ್‌ ಜೊತೆ ಪಾಕ್‌ನ ಮಾಜಿ ಎಸ್‌‍ಐ ಲಿಂಕ್

ಬೇಹುಗಾರಿಕೆ ಮಾಡಿದ ಯೂಟ್ಯೂಬರ್‌ ಜೊತೆ ಪಾಕ್‌ನ ಮಾಜಿ ಎಸ್‌‍ಐ ಲಿಂಕ್

Pak retired cop's link to spy YouTuber Jyoti Malhotra uncovered

ನವದೆಹಲಿ, ಜೂ. 7- ಇತ್ತೀಚೆಗೆ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಪಂಜಾಬಿ ಯೂಟ್ಯೂಬರ್‌ ಜಸ್ಬೀರ್‌ ಸಿಂಗ್‌ ಅವರು, ಬೇಹುಗಾರಿಕೆ ದಂಧೆಯಲ್ಲಿ ಪಾಕಿಸ್ತಾನದ ಮಾಜಿ ಪೊಲೀಸ್‌‍ ಅಧಿಕಾರಿಯೊಬ್ಬರ ಭಾಗಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ಮಾಜಿ ಸಬ್‌‍-ಇನ್ಸ್ ಪೆಕ್ಟರ್‌ ನಾಸಿರ್‌ ಧಿಲ್ಲೋನ್‌‍, ಬೇಹುಗಾರಿಕೆ ಕಾರ್ಯಾಚರಣೆಯ ಹಿಂದಿನ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬರು ಎಂದು ಜಸ್ಬೀರ್‌ ಬಹಿರಂಗಪಡಿಸಿದ್ದಾರೆ.

ಈಗ ಪಾಕಿಸ್ತಾನದ ಯೂಟ್ಯೂಬರ್‌ ಆಗಿರುವ ಧಿಲ್ಲೋನ್‌, ಜಸ್ಬೀರ್‌ರನ್ನು ಲಾಹೋರ್‌ನಲ್ಲಿರುವ ಪಾಕಿಸ್ತಾನದ ಇಂಟರ್‌-ಸರ್ವೀಸಸ್‌‍ ಇಂಟೆಲಿಜೆನ್ಸ್ (ಐಎಸ್‌‍ಐ) ಅಧಿಕಾರಿಗಳಿಗೆ ಪರಿಚಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಸ್ಬೀರ್‌ ಮತ್ತು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟ ಮತ್ತೊಬ್ಬ ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾ 10 ದಿನಗಳ ಕಾಲ ಲಾಹೋರ್‌ನಲ್ಲಿ ಒಟ್ಟಿಗೆ ಇದ್ದರು ಎಂದು ಹೇಳಿದರು.

RELATED ARTICLES

Latest News