ಟಿ-20 ವಿಶ್ವಕಪ್ : ಫೈನಲ್ ಪ್ರವೇಶಿಸಿದ ಪಾಕ್

Social Share

ಸಿಡ್ನಿ : ಐಸಿಸಿ ವಿಶ್ವಕಪ್ ಕ್ರಿಕೆಟ್ ಟಿ ಟ್ವೆಂಟಿ ಪಂದ್ಯಾವಳಿಯ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಪಾಕಿಸ್ತಾನ ಫೈನಲ್ ಪ್ರವೇಶಿಸಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡದ ವಿಲಿಯಮ್ಸ್ ಅವರ ಆಟದ ನೆರವಿನಿಂದ 152 ರನ್ಗಳ ಸವಾಲಿನ ಮೊತ್ತವನ್ನ ಕಲೆಹಾಕಿತು,

ಪಾಕಿಸ್ತಾನ ವೇಗದ ಬೌಲರ್ ಗಳ ಕರಾರುವಕ್ಕೂ ದಾಳಿಗೆ ಕತ್ತರಿಸಿದ ನ್ಯೂಜಿಲ್ಯಾಂಡ್ ತಿಣುಕುತ್ತಲೇ ಆಗಾಗ ವಿಕೆಟ್ ಕಳೆದುಕೊಂಡರು ಕೂಡ 152 ರನ್ಗಳನ್ನ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನದ ರಿಜ್ವಾನ್ ಮತ್ತು ನಾಯಕ ಬಾಬರ್ ಜೋಡಿ ಮುರಿಯದ ಜೊತೆಯಾಟ ಪಾಕಿಸ್ತಾನಕ್ಕೆ ಗೆಲುವಿನ ಭರವಸೆಯನ್ನ ಮೂಡಿಸಿತು.12ನೇ ಓವರ್ ನಲ್ಲಿಯೇ ನೂರರ ಗಡಿ ದಾಟಿದ ಪಾಕಿಸ್ತಾನಕ್ಕೆ ನ್ಯೂಜಿಲ್ಯಾಂಡ್ ನ ವೇಗಿ ಬೋಲ್ಟ್ ಜೊತೆ ಆಟವನ್ನ ಮುರಿದರೂ ಸಹ ಅದು ಪ್ರಯೋಜನವಾಗಲಿಲ್ಲ.

ರಾಜ್ಯದ ರೈತರಿಗೆ ಕಣ್ಣೀರು ತರಿಸುತ್ತಿದೆ ಮಹಾರಾಷ್ಟ್ರದ ಈರುಳ್ಳಿ

ಅರ್ಥಶತಕ ಸಿಡಿಸಿದ್ದ ಬಾಬರ್ ಔಟಾದ ನಂತರ ಮಸೂದ್ ಮತ್ತು ರಿಜ್ವಾನ್ ಜೋಡಿ ಯಶಸ್ವಿಯಾಗಿ ತಂಡವನ್ನು ಗೆಲುವಿನ ಗೆರೆ ದಾಟಿಸಿ ಜಯ ತಂದು ಕೊಟ್ಟರು. ಈ ಮೂಲಕ ಪಾಕಿಸ್ತಾನ ಟಿ20 ವಿಶ್ವಕಪ್ ನ ಫೈನಲ್ ಗೇರಿದ ಮೊದಲ ತಂಡವಾಗಿದೆ. ನಾಳೆ ನಡೆಯುವ ಸೆಮಿ ಫೈನಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಾಟ ನಡೆಸಲಿದೆ.

Articles You Might Like

Share This Article