9/11ರ ದಾಳಿ ನಂತರ ಅಮೆರಿಕಗೆ ಸಾಥ್ ನೀಡಿದ್ದು ನಮ್ಮ ದೊಡ್ಡ ತಪ್ಪು : ಇಮ್ರಾನ್

Spread the love

ನ್ಯೂಯಾರ್ಕ್, ಸೆ.24 (ಪಿಟಿಐ)- ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲೆ 9/11ರ ಭಯೋತ್ಪಾದಕರ ದಾಳಿ ನಂತರ ಅಮೆರಿಕ ಜೊತೆ ಕೈಜೋಡಿಸಿದ್ದು ಪಾಕಿಸ್ತಾನ ಮಾಡಿದ ದೊಡ್ಡ ತಪ್ಪು ಎಂದು ಪ್ರಧಾನಿ ಇಮ್ರಾನ್ ಖಾನ್ ವಿಷಾದಿಸಿದ್ದಾರೆ.

ಈ ದಾಳಿ ನಂತರ ಆಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲದೊಂದಿಗೆ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 70,000 ಯೋಧರು ಹತರಾದರು. 200 ಶತಕೋಟಿ ಡಾಲರ್ ನಷ್ಟವಾಯಿತು ಎಂದು ಕೆಲವರು ಹೇಳುತ್ತಿದ್ದಾರೆ. ಆಫ್ಘಾನಿಸ್ತಾನದಲ್ಲಿ ಉಗ್ರರನ್ನು ಮಟ್ಟ ಹಾಕಲು ಅಮೆರಿಕ ವಿಫಲವಾಗಿದ್ದಕ್ಕೆ ಅದರ ಅಪವಾದವನ್ನು ಪಾಕ್ ಮೇಲೆ ಹೊರಿಸಲಾಗಿದೆ ಎಂದು ಖಾನ್ ಹೇಳಿದ್ದಾರೆ.

ವಿದೇಶಿ ಸಂಬಂಧಗಳ ಚಿಂತಕರ ಚಾವಡಿ ಮಂಡಳಿ ಸಭೆಯಲ್ಲಿ ಮಾತನಾಡಿದ ಇಮ್ರಾನ್, ಆಫ್ಘಾನಿಸ್ತಾನ ವಿಷಯದಲ್ಲಿ ನಾನು ನಡೆಸಿದ ಹೋರಾಟಗಳಲ್ಲಿ ನಮ್ಮ ಮೇಲೆ ಅಪವಾದ ಹೊರಿಸಲಾಗುತ್ತಿದೆ.  ಈ ಹಿಂದೆ ಕಣಿವೆ ರಾಷ್ಟ್ರದ ಮೇಲೆ ರಷ್ಯಾ ಅಕ್ರಮಣ ಮಾಡಿದಾಗ ಅದರ ವಿರುದ್ಧ ಹೋರಾಟಕ್ಕೆ ಪಾಕ್ ಸಾಥ್ ನೀಡಿತು. ಆದರೆ, ರಷ್ಯಾ ಪಡೆಗಳ ವಿರುದ್ಧ ಹೋರಾಡಿದ ನಮ್ಮ ಯೋಧರಿಗೆ ಭಯೋತ್ಪಾದಕರ ಪಟ್ಟ ಕಟ್ಟಲಾಯಿತು ಎಂದು ಇಮ್ರಾನ್ ಬೇಸರದಿಂದ ನುಡಿದರು.

ಆಫ್ಘನ್‍ನಲ್ಲಿ ಈಗ ಶಾಂತಿ ಸಂಧಾನ ಪ್ರಕ್ರಿಯೆಯ ಬಾಗಿಲು ಬಂದ್ ಮಾಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬಗ್ಗೆ ಪಾಕ್ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು.

Facebook Comments

Sri Raghav

Admin