ಚಂಡೀಗಢ, ಅ.4- ಪಂಜಾಬ್‍ನ ಗುರುದಾಸ್‍ಪುರ ಸೆಕ್ಟರ್‍ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಹಾರಿ ಬಂದ ಡ್ರೋಣ್ ಮೇಲೆ ಬಿಎಸ್‍ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಪಡೆಗಳು ಗಡಿಭಾಗದಲ್ಲಿ ಝೇಂಕರಿಸುವ ಶಬ್ದವನ್ನು ಕೇಳಿ, ಗಮನಿಸಿದಾಗ ಹಾರುತ್ತಿರುವ ವಸ್ತು ಕಂಡು ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡು ಗುಂಡು ಹಾರಿಸಿದ್ದಾರೆ.
ದ್ರೋಣ್‍ನಿಂದ ಭಾರತೀಯ ಭೂಪ್ರದೇಶದಲ್ಲಿ ಯಾವುದಾದರೂ ವಸ್ತುಗಳನ್ನು ಚೆಲ್ಲಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಅಧಿಕಾರಿಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.