ಕರಾಚಿ,ಜ.11- ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಒಂದು ಕೆಜಿ ಈರುಳ್ಳಿ ಬೆಲೆ 300ರೂಗೆ ತಲುಪಿದೆ. ಕಳೆದ 2022ರಲ್ಲಿ ಉಂಟಾದ ಭೀಕರ ಪ್ರವಾಹದಿಂದ ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿದ್ದು ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಮೊದಲೇ ಬೆಲೆ ಏರಿಕೆ ಜನರನ್ನು ಕಂಗಾಲು ಮಾಡಿದೆ.
ಒಂದು ಕೆಜಿ ಈರುಳ್ಳಿ ಬೆಲೆ 300ರೂ ದಾಟಿದ್ದು , ತೈಲ ಬೆಲೆಯೂ ಶೇ. 48ರಷ್ಟು ಏರಿಕೆಯಾಗಿದೆ. ಅಕ್ಕಿ, ಬೇಳೆಕಾಳುಗಳು, ಗೋ ಶೇ.50ರಷ್ಟು ಏರಿಕೆ ಕಂಡಿವೆ. ಯಾವುದು ಕೂಡ 400 ರೂ ಕಳಗೆ ಇಲ್ಲ.ಇನ್ನೊಂದೆಡೆ ಪಾಕಿಸ್ತಾನ ಸರ್ಕಾರ ಇಂಧನ ಉಳಿಸಲು ಮಾರುಕಟ್ಟೆ, ಮಾಲï, ಮದುವೆ ಹಾಲ್ಗಳನ್ನುರಾತ್ರಿಯಾಗುತ್ತಿದ್ದಂತೆ ಮುಚ್ಚುವುದಾಗಿ ಆದೇಶಿಸಿದೆ.
ಪೌರ ಕಾರ್ಮಿಕರ ಕೈಗೆ ಬಂತು ಹೈಟೆಕ್ ಕಸ ಗುಡಿಸುವ ಯಂತ್ರಗಳು
ಪಾಕಿಸ್ತಾನಕ್ಕೆ ಅಮೆರಿಕ ಸೇರಿದಂತೆ ಹಲವು ದೇಶಗಳು ಶತಕೋಟಿ ಡಾಲರ್ ನೆರವು ನೀಡಿದೆ ಆದಾಗ್ಯೂ, ದೇಶದ ಆರ್ಥಿಕ ಪರಿಸ್ಥಿತಿಯು ಘೋರ ಸಂಕಟದಲ್ಲಿದೆ. ಆರ್ಥಿಕತೆ ಕುಸಿಯುತ್ತಿರುವುದರಿಂದ ಈಗಾಗಲೇ ದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸರ್ಕಾರ ನಾಗಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
Pakistan, economic, crisis,