ಕರಾಚಿ,ಫೆ.16- ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕಿಸ್ತಾನವು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ಪೆಟ್ರೋಲï, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಸರ್ಕಾರ ಕೂಡ ಕೈಚಲ್ಲಿ ಕೂತಿದೆ. ಕೇವಲ ಪೆಟ್ರೋಲï,
ಡೀಸೆಲ್ ಬೆಲೆ ಮಾತ್ರವಲ್ಲದೆ ಬ್ರೆಡ್, ಹಾಲು ಸೇರಿ ದಿನನಿತ್ಯದ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ.
ಪೆಟ್ರೋಲ್ ಪಂಪ್ ಬಳಿ ಜನಜಂಗುಳಿ ಕಂಡುಬಂದಿದ್ದು , ಜನರ ನಡುವೆ ಘರ್ಷಣೆ ಕೂಡ ಕಂಡುಬರುತ್ತಿದೆ. ತೈಲ ಬೆಲೆಗಳನ್ನು ಹೆಚ್ಚಳ ಇಂದಿನಿಂದಲೆ ಜಾರಿಗೆ ಬಂದಿದೆ. ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಶ್ರೀಲಂಕಾದಂತೆ ಬಹುತೇಕ ಖಾಲಿಯಾಗಿದೆ.
ದೇಶವನ್ನು ಒಂದು ತಿಂಗಳುಗಳ ಕಾಲ ನಡೆಸಲು ಸಾಕಾಗುವುದಿಲ್ಲದಷ್ಟು ಆಯೋಮಯ ಸ್ಥಿತಿ ನಿರ್ಮಾಣವಾಗಿದೆ. ಆಹಾರ ಪದಾರ್ಥ ಸೇರಿ ಹಲವು ಅಗತ್ಯ ಉತ್ಪನ್ನವನ್ನು ಆಮದು ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ದೇಶದಲ್ಲಿ ಹಣದುಬ್ಬರ ತಲ್ಲಣ ಸೃಷ್ಟಿಸಿದೆ.
ಕಳೆದ ಜ. 29ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಲಾಗಿತ್ತು. ಮತ್ತೆ ಇಂದು 22 ರೂ ಏರಿಕೆಯಿಂದ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 272 ರೂ.ಗೆ ಮುಟ್ಟಿದೆ.
#PakistanEconomicCrisis, #EconomicCrisis, #Pak,