ಅಫ್ಘಾನ್ ಗಡಿಯಲ್ಲಿ ಉಗ್ರರ ಅಡಗುತಾಣದ ಮೇಲೆ ಪಾಕ್ ದಾಳಿ

Social Share

ಇಸ್ಲಾಮಾಬಾದ್, ಮಾ 16 -ಪಾಕಿಸ್ತಾನಿ ಭದ್ರತಾ ಪಡೆಗಳು ಅಫ್ಘಾನಿಸ್ತಾನದ ಗಡಿಯ ಸಮೀಪರುವ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಎಂಟು ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಸೇನಾಕಾರಿಗಳ ತಿಳಿಸಿದ್ದಾರೆ.

ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ದಕ್ಷಿಣ ವಜಿರಿಸ್ತಾನದ ಹೊರಠಾಣೆ ಮೇಲೆ ದಾಳಿಯ ಸಂದರ್ಭದಲ್ಲಿ ಇಬ್ಬರು ಮಕ್ಕಳನ್ನು ಕೊಂದು ಬೆಂಕಿ ಹಚ್ಚಲಾಗಿದೆ ಆದರ ಈ ಕೃತ್ಯ ಯಾರು ಮಾಡಿದರು ಎಂಬುದು ಸ್ಪಷ್ಟವಾಗಿಲ್ಲ.

ಹಿಂಸಾಚಾರದ ಬಗ್ಗೆ ಹೇಳಿಕೆ ನೀಡಿರುವ ಸೇನೆ, ಹತ್ಯೆಯಾದ ದಂಗೆಕೋರರು ಯಾವ ಉಗ್ರಗಾಮಿ ಗುಂಪಿಗೆ ಸೇರಿದ್ದಾರೆ ಎಂಬುದನ್ನು ಗುರುತಿಸಿಲ್ಲ.ದಕ್ಷಿಣ ವಜಿರಿಸ್ತಾನ್ ಪಾಕಿಸ್ತಾನಿ ತಾಲಿಬಾನ್ ಮತ್ತು ಇತರ ಉಗ್ರಗಾಮಿಗಳಿಗೆ ತಾಣವಾಗಿದ್ದು ಸಾಂದರ್ಭಿಕ ದಾಳಿಗಳು ಮುಂದುವರಿದಿವೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(16-03-2023)

ತ್ರೇಕ್-ಎ-ತಾಲಿಬಾನ್ ಪಾಕಿಸ್ತಾನ ಎಂದೂ ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್, ಅಫ್ಘಾನ್ ತಾಲಿಬಾನ್‍ನಿಂದ ಪ್ರತ್ಯೇಕ ಬಂಡಾಯ ಗುಂಪಾಗಿದೆ ಆದಾಗ್ಯೂ ಅಫ್ಘಾನಿಸ್ತಾನದ ಗಡಿಯಾಚೆಗಿನವರೊಂದಿಗೆ ಪರಸ್ಪರ ಸಂಬಂಧ ಹೊಂದಿವೆ ಎಂದು ಹೇಳಿದೆ,

#Pakistan, #attack, #Afghanistan, #border #TerrorCamps,

Articles You Might Like

Share This Article