ಇಸ್ಲಾಮಾಬಾದ್,ಫೆ.19 – ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಯಾವುದೇ ಸಾಲವನ್ನು ಪಾವತಿಸಿಲ್ಲ ಹಾಗಾಗಿ ದೇಶ ದಿವಾಳಿಯಾಗಿದೆ, ಇದಕ್ಕೆಲ್ಲ ಸರ್ಕಾರ, ಅಧಿಕಾರಿಗಳು ಮತ್ತು ರಾಜಕಾರಣಿಗಳು ಕಾರಣ ಎಂದು ಪಾಕ್ ರಕ್ಷಣಾ ಸಚಿವ ಖವಾಜ ಆಸೀಫ್ ದೂಷಿಸಿದ್ದಾರೆ.
ಪಾಕಿಸ್ತಾನ ಆರ್ಥಿಕವಾಗಿ ಸ್ಥಿರತೆ ಹೊಂದಿ ತನ್ನ ಕಾಲ ಮೇಲೆ ತಾನು ನಿಲ್ಲುವ ಸಾಧ್ಯತೆಗಳು ಬಹಳ ಕಡಿಮೆ. ದೇಶ ಈಗಾಗಲೇ ದಿವಾಳಿಯಾಗಿದೆ. ನಾವು ದಿವಾಳಿಯಾದ ದೇಶದಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದರು.
ಸರಣಿ ಅಪಘಾತ : ಶಾಲಾ ಮಕ್ಕಳು ಸೇರಿ ಹಲವರಿಗೆ ಗಾಯ
ನಮ್ಮ ಸಮಸ್ಯೆಗೆ ಪರಿಹಾರ ದೇಶದೊಳಗೆ ಇದೆ. ಐಎಮ್‍ಎಫ್ ಪರಿಹಾರ ನೀಡಲು ಸಾಧ್ಯವಿಲ್ಲ. ದೇಶದ ಕಾನೂನು ಮತ್ತು ಸಂವಿಧಾನ ಪಾಲನೆ ಆಗದೇ ಇರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಕಿಡಿಕಾರಿದರು.
ಎರಡು ವರ್ಷಗಳ ಹಿಂದೆ ದೇಶಕ್ಕೆ ಭಯೋತ್ಪಾದಕತೆಯನ್ನು ಪರಿಚಯಿಸಲಾಯಿತು. ಇದರಿಂದ ಇಂದು ಭಯೋತ್ಪಾದಕತೆ ಹೆಚ್ಚಾಗಿ ಸಮಸ್ಯೆ ತಲೆದೂರಿದೆ ಎಂದು ಹಿಂದಿನ ಸರ್ಕಾರದ ವಿರುದ್ಧ ಕಿಡಿಕಾರಿದರು.
Pakistan, already, defaulted, Defence, Minister, Khawaja Asif,