ರಾವಲ್ಪಿಂಡಿ,ಜ.30-ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಹಿಂದೂ ಮತ್ತು ಕ್ರಿಶ್ಚಿಯನ್‍ನರ ಮನೆಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ಕಂಟೋನ್ಮೆಂಟ್ ಪ್ರದೇಶದಲ್ಲಿ ಸುಮಾರು 70 ವರ್ಷದಿಂದ ವಾಸಿಸುತ್ತಿದ್ದ ಹಿಂದೂ ಹಾಗು ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳಿಗೆ ಸೇರಿದ ಕನಿಷ್ಠ ಐದು ಮನೆಗಳನ್ನು ನೆಲಸಮ ಮಾಡಲಾಗಿದ್ದು, ಸಾಮಾನು, ಸರಂಜಾಮುಗಳನ್ನು ಅಕ್ಕಪಕ್ಕದ ಬೀದಿಗಳಲ್ಲಿ ಎಸೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮೀಪದ ದೇವಾಲಯವೊಂದರಲ್ಲಿ ಆಶ್ರಯ ಪಡೆಯುವಂತೆ ಹಿಂದೂ ಕುಟುಂಬಕ್ಕೆ ಒತ್ತಾಯಿಸಲಾಗಿದೆ. ಆದರೆ ಕ್ರಿಶ್ಚಿಯನ್ ಕುಟುಂಬ ಮತ್ತು ಶಿಯಾಗಳು ಯಾವುದೇ ಆಶ್ರಯವಿಲ್ಲದೆ ಬದುಕುವಂತೆ ಪೀಡಿಸಲಾಗಿದೆ. ಸಂತ್ರಸ್ತ ಕುಟುಂಬಗಳು ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅಧಿಕಾರಿಗಳು ಬಲಪ್ರಯೋಗಿಸಿ ಮನೆ ಧ್ವಂಸಗೊಳಿಸಿದ್ದಾರೆ.
ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಅವರಿಗೆ ಸರ್ಕಾರೀ ಗೌರವಗಳೊಂದಿಗೆ ವಿದಾಯ
ನೂರಾರು ಮಂದಿ ಬಂದು ನಮ್ಮ ಮೇಲೆ ಹಲ್ಲೇ ನಡೆಸಿ ಮನೆ ಹೊಡೆದಿದ್ದಾರೆ ಆದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಪ್ರಕರಣ ದಾಖಲಾಗಿಲ್ಲ ಎಂದು ಹಿಂದೂ ಸಂತ್ರಸ್ತರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪರ ಗಟ್ಟಿ ಅಲೆ ಇದೆ : ಬೊಮ್ಮಾಯಿ
ಕಳೆದ 70 ವರ್ಷಗಳಿಂದಲೂ ಇಲ್ಲಿಯೇ ವಾಸಿಸುತ್ತಿರುವುದಕ್ಕೆ ದಾಖಲೆ ಎಲ್ಲವೂ ಇದೆ. ಮನೆ ಧ್ವಂಸಕ್ಕೂ ಮುನ್ನಾ ಯಾವುದೇ ನೋಟಿಸ್ ನೀಡಿಲ್ಲ, ಮನೆ ವಸ್ತು ಸಾಗಿಸಲು ಯಾವುದೇ ಸಮಯಾವಕಾಶ ನೀಡಲಿಲ್ಲ. ಕುಟುಂಬವನ್ನು ದೇವಾಲಯಕ್ಕೆ ಕರೆದೊಯ್ಯದೆ ಬೇರೆ ದಾರಿಯಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
Pakistan, Houses, Hindu, Familie,s Demolished, Rawalpindi,