ಕ್ರಿಮಿಗಳನ್ನು ಬೆಳಸಿ ಬುಡಕ್ಕೆ ಬಾಂಬ್ ಇಟ್ಟುಕೊಂಡ ‘ಪಾಪಿ’ಸ್ತಾನ

Social Share

ನವದೆಹಲಿ/ಇಸ್ಲಾಮಾಬಾದ್,ಫೆ.12- ಮತೀಯ ಭಯೋತ್ಪಾದನೆಯನ್ನು ಬೆಂಬಲಿಸಿ ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದರಲ್ಲೇ ಹೆಚ್ಚು ಸಮಯ ಕಳೆದು, ಈಗ ಆರ್ಥಿಕ ಮತ್ತು ರಾಜತಾಂತ್ರಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಅದರ ಮಿತ್ರ ರಾಷ್ಟ್ರಗಳು ಮತ್ತು ಮೂಲಭೂತವಾದಿ ಸಂಘಟನೆಗಳು ಬೆಂಬಲ ನೀಡುತ್ತಿಲ್ಲ ಎಂಬ ವಿಶ್ಲೇಷಣೆ ಅಂತಾರಾಷ್ಟ್ರೀಯ ವಲಯದಿಂದ ಕೇಳಿ ಬಂದಿದೆ.

ಭಯೋತ್ಪಾದಕ ಗುಂಪು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸೃಷ್ಟಿಸಿರುವ ಅವಾಂತರಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ನಿಯಂತ್ರಿಸಬೇಕು ಎಂದು ತಿಳಿಯದೆ ಪಾಕಿಸ್ತಾನ ಸರ್ಕಾರ ಮತ್ತಷ್ಟು ಗೊಂದಲದಲ್ಲಿದೆ.

ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಐತಿಹಾಸಿಕವಾಗಿ ಕನಿಷ್ಠ 275 ಅಂಶಗಳಷ್ಟು ಕುಸಿದಿದೆ. ಹಣದುಬ್ಬರ ಶೇಕಡಾ 27 ಕ್ಕಿಂತ ಹೆಚ್ಚಿದೆ , 1998ರ ನಂತರ ವಿದೇಶಿ ವಿನಿಮಯ ಮೀಸಲು ಕಡಿಮೆ ಮಟ್ಟಕ್ಕೆ ಅಂದರೆ ಸುಮಾರು 3 ಶತಕೋಟಿ ಡಾಲರ್‍ಗೆ ಇಳಿದಿದೆ. ಒಂದು ತಿಂಗಳ ಆಮದುಗಳನ್ನು ಸರಿದೂಗಿಸಲು ಇದು ಸಾಲದಷ್ಟಾಗಿದೆ.

ರಾಜ್ಯಪಾಲರ ನಿರ್ಗಮನವನ್ನು ಸ್ವಾಗತಿಸಿ ಮಹಾರಾಷ್ಟ್ರ ನಾಯಕರು

ಇದರ ನಡುವೆ ಜನವರಿ 30 ರಂದು ವಾಯುವ್ಯ ನಗರವಾದ ಪೇಶಾವರದಲ್ಲಿ ಸರಣಿ ಬಾಂಬ್ ಸ್ಪೋಟಗಳು ಸಂಭವಿಸಿ 100 ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಈ ನಡುವೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನಲ್ಲಿ ನಿರ್ಬಂಧಿಸಿರುವ 1.1 ಬಿಲಿಯನ್ ಡಾಲರ್ ನೆರವನ್ನು ಬಿಡುಗಡೆ ಮಾಡಿಸಿಕೊಳ್ಳಲು ಪಾಕಿಸ್ತಾನ ಸರ್ಕಾರ ಅಂತಾರಾಷ್ಟ್ರೀಯ ಸಮುದಾಯ ಹಲವು ಷರತ್ತುಗಳನ್ನು ಒಪ್ಪಿಕೊಂಡಿದೆ.

ಅಮೆರಿಕಾದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಮತ್ತು ಹಡ್ಸನ್ ಇನ್ಸಿಟಿಟ್ಯೂಟ್‍ನ ಪ್ರಮುಖರಾಗಿರುವ ಹುಸೇನ್ ಹಕ್ಕಾನಿ, ಭಯೋತ್ಪಾದನೆ ಕೃತ್ಯಗಳಿಂದ ಉಂಟಾದ ಆತಂಕ ಪಾಕಿಸ್ತಾನಕ್ಕೆ ವಿದೇಶಿ ನೇರ ಹೂಡಿಕೆಯನ್ನು ನಿರ್ಬಂಧಿಸಿದೆ. ಜೊತೆಗೆ ಚೀನಾದ ಮೇಲಿನ ಅವಲಂಬನೆ ಸಾಲದ ಮೊತ್ತವನ್ನು ಹೆಚ್ಚಿಸಿದೆ. ಈಗಲೂ ಎಚ್ಚೇತ್ತುಕೊಳ್ಳದ ಪಾಕಿಸ್ತಾನ ಸಾಲಕ್ಕೆ ಹೆಚ್ಚು ಜೋತು ಬೀಳುತ್ತಿದೆ. ಸ್ವಾವಲಂಬನೆ ಮತ್ತು ಸ್ವಂತ ಆದಾಯ ಸೃಷ್ಟಿಯ ಮಾರ್ಗಗಳಿಗೆ ಒತ್ತು ನೀಡುತ್ತಿಲ್ಲ. ಆರ್ಥಿಕ ಬಿಕ್ಕಟ್ಟುಗಳ ನಡುವೆಯೂ ಸಮರ್ಥನೀಯವಲ್ಲದ ಮಿಲಿಟರಿ ವೆಚ್ಚಕ್ಕೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ ಬದಲಿಗೆ ಬುಲ್ಡೋಜರ್ ಬಳಕೆ : ರಾಹುಲ್ ಟೀಕೆ

ಅಫ್ಘಾನಿಸ್ತಾನ, ಭಾರತದಂತಹ ರಾಷ್ಟ್ರಗಳ ಜೊತೆ ಪಾಕಿಸ್ತಾನ ಸಂಬಂಧವನ್ನು ಹದಗೆಡಿಸಿಕೊಂಡಿದೆ. ಇದರಿಂದಾಗಿ ವ್ಯಾಪಾರ ಅವಕಾಶಗಳು ಸೀಮಿತಗೊಂಡಿವೆ. ಸಂಘರ್ಷ ಮೀರಿ ಪಾಕಿಸ್ತಾನ ಆರ್ಥಿಕತೆಗೆ ಒತ್ತು ನೀಡಿದಾಗ ಪಾಕಿಸ್ತಾನ ಪರಿಸ್ಥಿತಿ ಸುಧಾರಿಸಲು ಸಾಧ್ಯ ಎಂದು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.

ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ (ನಿವೃತ್ತ) ಜೆ.ಜೆ.ಸಿಂಗ್, ಪಾಕಿಸ್ತಾನವು ಈಗಾಗಲೇ ಸ್ವಯಂ ಸೋಟಕ್ಕೆ ಗುಂಡಿಯನ್ನು ಒತ್ತಿಕೊಂಡಿದೆ. ಪರಿಸ್ಥಿತಿ ನಿಧಾನವಾಗಿ ನಿಯಂತ್ರಣ ತಪ್ಪುತ್ತಿದೆ. ಸಂಕಷ್ಟ ಕಾಲದಲ್ಲೂ ಸರಣಿ ಬಾಂಬ್ ಸ್ಪೋಟಗಳಿಗೆ ಈವರೆಗೂ ಪಾಕಿಸ್ತಾನ ಭಯೋತ್ಪಾದಕರಿಗೆ ನೀಡುತ್ತಿದ್ದ ಬೆಂಬಲವೇ ಕಾರಣ ಎಂದಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು : ಬಿಎಸ್‌ವೈ

ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶದ ನಾಯಕತ್ವದ ಗಂಭೀರ ಸಮಸ್ಯೆಯಿಂದ ಬಳಲುವಾಗ ಭಾರತ ಸೇರಿದಂತೆ ಪ್ರತಿಯೊಬ್ಬರು ಕಳವ¼ ವ್ಯಕ್ತಪಡಿಸಬೇಕಿದೆ. ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನವು ಭಯೋತ್ಪಾದನೆಯನ್ನು ಉತ್ತೇಜಿಸುವುದನ್ನು ಬಿಟ್ಟು ರಚನಾತ್ಮಕ ಆರ್ಥಿಕ ಸಹಕಾರದತ್ತ ಗಮನಹರಿಸಬೇಕು ಎಂದು ಪಾಕಿಸ್ತಾನದ ಮಾಜಿ ಭಾರತೀಯ ಹೈಕಮಿಷನರ್ ಜಿ ಪಾರ್ಥಸಾರಥಿ ತಿಳಿಸಿದ್ದಾರೆ.

Articles You Might Like

Share This Article