ಇಸ್ಲಾಮಾಬಾದ್,ಫೆ.7- ಕೆಲವು ದಿನಗಳಿಂದ ನಿರ್ಬಂಧನಕ್ಕೆ ಒಳಗಾಗಿದ್ದ ವಿಕಿಪಿಡಿಯಾ ವೆಬ್‍ಸೈಟ್ ಅನ್ನು ಅನಿರ್ಬಂಧಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಷ್ ಆದೇಶಿದ್ದಾರೆ.
ಆಕ್ಷೇಪಾರ್ಹ ಮತ್ತು ಧರ್ಮನಿಂದೆಯ ವಿಷಯವನ್ನು ತಿದ್ದುಪಡಿ ಮಾಡುವಂತೆ ಸೂಚಿಸಿದ ಹೊರತಾಗಿ ವಿಕಿಪಿಡಿಯಾ ಸರ್ಕಾರದ ಆದೇಶವನ್ನು ಮಾನ್ಯ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ದೂರಸಂಪರ್ಕ ನಿಗಾವಣಾ ಸಂಸ್ಥೆ ಸನ್‍ಸೈಕ್ಲೋಪೀಡಿಯಾವನ್ನು ನಿಷೇಧಿಸಿತ್ತು.
ಆದಾಯ ಕ್ರೋಢೀಕರಣಕ್ಕೆ ಸಿಎಂ ಬೊಮ್ಮಾಯಿ ಆದ್ಯತೆ
ಪ್ರಧಾನಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ವೆಬ್‍ಸೈಟ್ (ವಿಕಿಪೀಡಿಯಾ)ವನ್ನು ಮರುಸ್ಥಾಪಿಸುವಂತೆ ನಿರ್ದೇಶಿಸಲು ಸೂಚಿಸಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮರಿಯುಮ್ ಔರಂಗಜೇಬ್ ಟ್ವಿಟರ್‍ನಲ್ಲಿ ತಿಳಿಸಿದ್ದು, ಪ್ರಧಾನಿ ಆದೇಶವನ್ನು ಪೋಸ್ಟ್ ಮಾಡಿದ್ದಾರೆ.
ನಿರ್ಬಂಧವನ್ನು ತೆರವು ಮಾಡಿದ ಜೊತೆಯಲ್ಲೇ ಪ್ರಧಾನಿ ಅವರು ವಿಕಿಪೀಡಿಯಾ ಮತ್ತು ಇತರ ಆನ್‍ಲೈನ್ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಪರಿಶೀಲನೆಗೆ ಸಂಪುಟ ಉಪಸಮಿತಿಯನ್ನು ರಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಕಿಪೀಡಿಯಾವು ಉಚಿತ ಆನ್‍ಲೈನ್ ವಿಶ್ವಕೋಶವಾಗಿದ್ದು, ಪ್ರಪಂಚದಾದ್ಯಂತದ ಸ್ವಯಂಸೇವಕರಿಂದ ರಚಿಸಲ್ಪಟ್ಟಿದೆ ಮತ್ತು ವಿಷಯ ಸಂಗ್ರಹಿಸಲ್ಪಟ್ಟಿದೆ. ವಿಕಿಮೀಡಿಯಾ ಫೌಂಡೇಶನ್‍ನಿಂದ ವೆಬ್‍ಸೈಟ್ ನಿರ್ವಹಿಸಲ್ಪಡುತ್ತಿದೆ.
ಪಾಕ್ ಸರ್ಕಾರದ ವಕ್ತಾರ ಮಲಾಹತ್ ಒಬೈದ್ ಪ್ರಕಾರ, ಇಸ್ಲಾಂ ಧರ್ಮಿಯರ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು 48 ಗಂಟೆಗಳ ಗಡುವನ್ನು ನೀಡಲಾಗಿತ್ತು. ಅದನ್ನು ನಿರ್ಲಕ್ಷಿಸಿದ್ದರಿಂದ ನಿರ್ಬಂಧಿಸಲಾಗಿತ್ತು. ವಿಚಾರಣೆಗೆ ಅವಕಾಶವನ್ನೂ ಒದಗಿಸಲಾಯಿತು; ಆದಾಗ್ಯೂ, ವೆಬ್‍ಸೈಟ್ ಧರ್ಮನಿಂದೆಯ ವಿಷಯವನ್ನು ತೆಗೆದುಹಾಕಲಿಲ್ಲ. ವಿಚಾರಣಾ ಪ್ರಾಧಿಕಾರದ ಮುಂದೆ ಹಾಜರಾಗಲಿಲ್ಲ ಎಂದು ವಕ್ತಾರರು ಹೇಳಿದರು.
ಮುಂಬೈ ಮೇಲಿನ ಉಗ್ರ ದಾಳಿ ಇನ್ನು ಜೀವಂತ ; ಅಮೆರಿಕ
ಈ ಮೊದಲು ಸಾಮಾಜಿಕ ಮಾಧ್ಯಮದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಯೂಟ್ಯೂಬ್ ಈ ಹಿಂದೆ ಧರ್ಮನಿಂದೆಯೆಂದು ಪರಿಗಣಿಸಿ ನಿರ್ಬಂಧಿಸಲಾಗಿತ್ತು.
Pakistan, PM, orders, unblock, Wikipedia, website,