ಭಾರತ-ಪಾಕ್ ಗಡಿಭಾಗದಲ್ಲಿ ಯೋಧರ ಸಿಹಿ-ಶುಭಾಷಯ ವಿನಿಮಯ

Social Share

ನವದೆಹಲಿ,ಆ.14-75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಎರಡು ದೇಶಗಳ ಯೋಧರು ಪರಸ್ಪರ ಸಿಹಿ ಹಂಚುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಭಾರತದ ಗಡಿಭದ್ರತಾ ಪಡೆ(ಬಿಎಸ್‍ಎಫ್ ) , ಪಾಕಿಸ್ತಾನದ ರೇಂಜರ್ಸ್ ಪಡೆಗಳ ಶಿಸ್ತುಬದ್ದ ಸಮವಸ್ತ್ರದಲ್ಲಿ ಗಡಿಯ ಬಾಗಿಲನ್ನು ತೆರೆದು ಪರಸ್ಪರ ಭೇಟಿಯಾಗಿ ಸಿಹಿ ಹಂಚಿಕೊಂಡಿದ್ದಾರೆ.

ನಾಳೆ ಸ್ವಾತಂತ್ರ್ಯ ಸಂಭ್ರಮದ ವೇಳೆ ಎರಡೂ ದೇಶಗಳ ರಕ್ಷಣಾ ಪಡೆಗಳು ಕವಾಯತಿನ ಮೂಲಕ ಗಮನಸೆಳೆಯಲಿವೆ. ಸಾಂಪ್ರದಾಯಿಕವಾದ ಸಂಘರ್ಷದ ನಡುವೆಯೂ ಕೂಡ ಗಡಿಯಲ್ಲಿ ಸೌಹಾರ್ದತೆ ಪ್ರತಿಪಾದಿಸುವ ಬೆಳವಣಿಗೆಗಳು ಪ್ರತಿ ವರ್ಷ ನಡೆಯುತ್ತವೆ. ಪಂಜಾಬಿನ ಅಮೃತಸರದ ಗಡಿಯಲ್ಲಿ ಈ ದೃಶ್ಯಾವಳಿಗಳು ಮನಮೋಹಕವಾಗಿರುತ್ತದೆ.

Articles You Might Like

Share This Article