ಘೋಷಿತ ಉಗ್ರ ಯಾಸಿನ್ ಮಲಿಕ್ ಪರವಾಗಿ ಪಾಕಿಸ್ತಾನ ವಾದ

Spread the love

ಇಸ್ಲಾಮಾಬಾದ್, ಮೇ 20- ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸಿದ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲ್ಲಿಕ್ ಅವರನ್ನು ದೆಹಲಿ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದ್ದನ್ನು ಪಾಕಿಸ್ತಾನ ಖಂಡಿಸಿದೆ.

ಹುರಿಯತ್ ನಾಯಕ ಮತ್ತು ನಿಷೇತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‍ಎಫ್) ಮುಖ್ಯಸ್ಥ ಮಲಿಕ್‍ನನ್ನು 2017 ರ ಹಿಂದಿನ ಭಯೋತ್ಪಾದಕ ನಿ ಪ್ರಕರಣದಲ್ಲಿ ಗುರುವಾರ ದೋಷಿ ಎಂದು ಘೋಷಿಸಲಾಗಿದೆ. ಹುರಿಯತ್ ನಾಯಕಯಾಸಿನ್ ಮಲಿಕ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು 2017 ರಲ್ಲಿ ದಾಖಲಿಸಿದ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದೆ.

ಈ ತೀರ್ಪಿನ ವಿಷಯವಾಗಿ ಮೂಗು ತೂರಿಸಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿ, ಏಕಪಕ್ಷೀಯ ಪ್ರಕರಣದಲ್ಲಿ ಊಹಿಸಬಹುದಾದಂತೆ ಮಾನವ ಹಕ್ಕುಗಳು, ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅಂತರರಾಷ್ಟ್ರೀಯ ಒಡಂಬಡಿಕೆಯನ್ನು ಧಿಕ್ಕರಿಸುವ ಕಾಲ್ಪನಿಕ ಆರೋಪದ ಮೇಲೆ ಯಾಸಿನ್ ಮಲಿಕ್ ಅವರನ್ನು ಅಪರಾಧಿ ಎಂದು ಘೋಷಿಸಲಾಗಿದೆ.

ಪಾಕಿಸ್ತಾನದ ಬಗ್ಗೆ ಊಹಾಪೋಹದ ಆರೋಪಗಳನ್ನು ಮಾಡಲಾಗಿದೆ ಎಂದು ಆಕ್ಷೇಪಿಸಿದೆ. ಪಾಕಿಸ್ತಾನವು ಭಾರತದ ಚಾರ್ಜ್ ಡಿ’ಅಫೇರ್ಸ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿಕೊಂಡು ತನ್ನ ಆಕ್ಷೇಪವನ್ನು ವ್ಯಕ್ತ ಪಡಿಸಿದೆ.

Facebook Comments