ಶೆಹಾನ್ ಶಾ ಆಫ್ರಿದಿ ಮಾರಕ ದಾಳಿಗೆ ಮಣಿದ ಬಾಂಗ್ಲಾ, ಸೂಪರ್ 4 ಹಂತಕ್ಕೆ ಪಾಕ್

Social Share

ಅಡಿಲೇಡ್ ನ. 6- ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಟಿ 20 ವಿಶ್ವಕಪ್‍ನ ನಿರ್ಣಾಯಕ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಶೆಹಾನ್ ಶಾ ಆಫ್ರಿದಿ (22/4 ವಿಕೆಟ್)ರ ಮಾರಕ ಬೌಲಿಂಗ್ ಫಲವಾಗಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್‍ಗಳ ಗೆಲುವು ಸಾಧಿಸಿ ಸೂಪರ್ 4 ಹಂತಕ್ಕೆ ತಲುಪಿದೆ.

ಸೂಪರ್ 12ರ ಹಂತದಲ್ಲಿ ಸಾಂಪ್ರದಾಯಿಕ ವೈರಿ ಭಾರತ ಹಾಗೂ ಜಿಂಬಾಬ್ವೆ ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನ ನಂತರ ಬಲಿಷ್ಠ ದಕ್ಷಿಣ ಆಫ್ರಿಕಾ, ನೆದರ್‍ಲ್ಯಾಂಡ್, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಸೂಪರ್ 4 ಹಂತಕ್ಕೆ ತೇರ್ಗಡೆಗೊಂಡಿದೆ.

ಕೃಷಿ ಮೇಳಕ್ಕೆ ಇಂದು ತೆರೆ, ಹರಿದುಬಂದ ಜನಸಾಗರ

ವ್ಯರ್ಥವಾದ ನಜಾಮುಲ್ ಹುಸೇನ್ ಆಟ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡ ಶಕಿಬ್ ಅಲ್ ಹಸನ್ ಸಾರಥ್ಯದ ಬಾಂಗ್ಲಾದೇಶ 21 ರನ್‍ಗಳಾಗುವಷ್ಟರಲ್ಲಿ ಭಾರತದ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದ್ದ ಆರಂಭಿಕ ಆಟಗಾರ ಲಿಟನ್ ದಾಸ್(10 ರನ್, 1 ಸಿಕ್ಸರ್) ಶೆಹನ್ ಶಾ ಆಫ್ರಿದಿ ಬೌಲಿಂಗ್‍ನಲ್ಲಿ ಶಾನ್ ಮಾಸೂದ್‍ಗೆ ಕ್ಯಾಚ್ ನೀಡಿ ಮೈದಾನ ತೊರೆದರು.

ನಂತರ ಬಂದ ಸೌಮ್ಯ ಸರ್ಕಾರ್ ಬೌಂಡರಿ, ಸಿಕ್ಸರ್ ಗಳಿಸುವ ಮೂಲಕ ಬೃಹತ್ ಮೊತ್ತ ಗಳಿಸುವ ಸೂಚನೆ ನೀಡಿದರೂ 20 ರನ್ ಗಳಿಸಿ ಶಹಬಾದ್ ಖಾನ್ ಬೌಲಿಂಗ್‍ನಲ್ಲಿ ಎಡವಿದರು. ನಂತರ ಬಂದ ನಾಯಕ ಶಕಿಬ್ ಅಲ್ ಹಸನ್ ರನ್ ಖಾತೆ ತೆರೆಯದೆ ಶಬಾದ್‍ಖಾನ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು.

ಒಂದೆಡೆ ವಿಕೆಟ್ ಉರುಳಿದರೂ ಸೋಟಕ ಆಟ ಪ್ರದರ್ಶಿಸಿದ ನಜಾಮುಲ್ (54 ರನ್, 7 ಬೌಂಡರಿ) ಅಕ್ರಮಣಕಾರಿ ಬ್ಯಾಟಿಂಗ್ ಮಾಡಿದರೂ ಇಫ್ತಿಕಾರ್ ಮೊಹಮ್ಮದ್ ಬೌಲಿಂಗ್‍ನಲ್ಲಿ ಭಾರಿ ಹೊಡೆತಕ್ಕೆ ಮುಂದಾಗಿ ಕ್ಲೀನ್ ಬೌಲ್ಡ್ ಆದರು. ಆಫೀಫ್ ಹುಸೇನ್‍ರ (24 ರನ್, 3 ಬೌಂಡರಿ) ಸ್ಲಾಗ್ ಓವರ್‍ಗಳಲ್ಲಿ ರನ್ ವೇಗ ಹೆಚ್ಚಿಸಿದ್ದರಿಂದ ಬಾಂಗ್ಲಾ 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತು.

ಪಾಕ್ ಪರ ಶೆಹನ್ ಶಾ ಆಫ್ರಿದಿ (4 ವಿಕೆಟ್), ಶಬಾದ್ ಖಾನ್ (2 ವಿಕೆಟ್), ಹ್ಯಾರಿಸ್ ರೌಫ್, ಇಫ್ತಿಕಾರ್ ಅಹಮ್ಮದ್ ತಲಾ 1 ವಿಕೆಟ್ ಕಬಳಿಸಿದರು.

ಎಐಸಿಸಿ ಅಧ್ಯಕ್ಷ ಖರ್ಗೆ ಆಗಮನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಸಂಚಲನ

ಮಿಂಚಿದ ಮಸೂದ್, ಹ್ಯಾರಿಸ್:
ಬಾಂಗ್ಲಾದೇಶ ನೀಡಿದ 128 ಸಾಧಾರಣ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ ( 32 ರನ್, 2 ಬೌಂಡರಿ, 1 ಸಿಕ್ಸರ್), ನಾಯಕ ಬಾಬರ್ ಆಝಾಮ್ ( 25 ರನ್, 2 ಬೌಂಡರಿ)ಯ ಜೊತೆಯಾಟದಿಂದಾಗಿ ಮೊದಲ ವಿಕೆಟ್‍ಗೆ 57 ರನ್‍ಗಳ ಕಾಣಿಕೆ ನೀಡಿದರು, ಆದರೆ ನಾಸೂಮ್ ಅಹಮ್ಮದ್ ಅವರು ಬಾಬರ್ ಆಝಾಮ್‍ರ ವಿಕೆಟ್ ಕೆಡವುವ ಮೂಲಕ ಈ ಜೊತೆಯಾಟ ಮುರಿದರು. ರಿಜ್ವಾನ್ ಎಬಾಡೊ ಹೊಸೇನ್ ಬೌಲಿಂಗ್‍ನಲ್ಲಿ ಔಟಾದರು.

ನಂತರ ಬಂದ ಮೊಹಮ್ಮದ್ ಹ್ಯಾರಿಸ್ (31 ರನ್, 1 ಬೌಂಡರಿ, 2 ಸಿಕ್ಸರ್) ಶಕೀಬ್ ಹಲ್ ಹಸನ್ ಬೌಲಿಂಗ್‍ನಲ್ಲಿ ಔಟಾದರೆ 14 ಎಸೆತಗಳಲ್ಲೇ 2 ಬೌಂಡರಿಗಳ ನೆರವಿನಿಂದ ಅಜೇಯ 24 ರನ್ ಗಳಿಸುವಮೂಲಕ ಶಾನ್ ಮಸೂದ್ 18.1 ಓವರ್‍ಗಳಲ್ಲೇ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಬಾಂಗ್ಲಾ ಪರ ನಸೂಮ್ ಅಹಮ್ಮದ್, ಶಕೀಬ್ ಅಲ್ ಹಸನ್, ಮುಸ್ತಾಫಿಜುರ್ ರೆಹಮಾನ್ ಹಾಗೂ ಹೊಸೆನ್ ತಲಾ 1 ವಿಕೆಟ್ ಕೆಡವಿದರೆ, ಶೆಹಾನ್ ಶಾ ಆಫ್ರಿದಿ ಪಂದ್ಯಪುಉಷೋತ್ತಮರಾದರು.

Articles You Might Like

Share This Article