ಪಬ್‌ಜಿ ಎಫೆಕ್ಟ್ : ಗುಂಡಿಕ್ಕಿ ಕುಟುಂಬವನ್ನೇ ನಾಶ ಮಾಡಿದ ಬಾಲಕ..!

Social Share

ಲಾಹೋರ್,ಜ.29- ಪಬ್ಜಿ ಪ್ರಭಾವಕ್ಕೆ ಒಳಗಾಗಿದ್ದ ಬಾಲಕನೊಬ್ಬ ತಾಯಿ, ಅಣ್ಣ ಮತ್ತು ಇಬ್ಬರು ಸಹೋದರಿಯರಿಗೆ ಗುಂಡಿಕ್ಕಿ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿರುವ ಘಟನೆ ಪಾಕಿಸ್ತಾನದ ಲಾಹೋರ್‍ನಲ್ಲಿ ನಡೆದಿದೆ. ನಹಿದ(45), ತೈಮುರ್(22), 17 ವರ್ಷದ ಇಬ್ಬರು ಹೆಣ್ಣು ಮಕ್ಕಳು ಗುಂಡಿಗೆ ಬಲಿಯಾಗಿದ್ದು, ಘಟನೆ ಬಳಿಕ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೊಬೈಲ್ ಪಬ್ಜಿ ಗೇಮ್ ಎಫೆಕ್ಟ್‍ನಿಂದ ಬಾಲಕ ತನ್ನ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿ ಜೈಲು ಪಾಲಾಗಿದ್ದಾನೆ. ಈತ ಸದಾ ಪಬ್ಜಿ ಗೇಮ್‍ನಲ್ಲಿ ತೊಡಗಿರುತ್ತಿದ್ದ. ಪರಿಣಾಮ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈತನ ತಾಯಿಗೆ ವಿಚ್ಛೇಧನವಾಗಿದ್ದು, ಆ ನೋವಿನಲ್ಲಿದ್ದ ಮಹಿಳೆ ಮಗನ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಆ ಪರಿಣಾಮ ಬಾಲಕ ಓದುವುದನ್ನು ಬಿಟ್ಟು ಪಬ್ಜಿ ಆಟದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ. ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದ ಈತ ಏಕಾಏಕಿ ತನ್ನ ಕುಟುಂಬದವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

Articles You Might Like

Share This Article