ಭಾರತ ನೆಲದೊಳಗೆ ನುಸುಳುತ್ತಿದ್ದವನು ಸೇನೆಯ ಗುಂಡಿಗೆ ಬಲಿ

Social Share

ಜಮ್ಮು, ನ.22 (ಪಿಟಿಐ) ಜಮ್ಮು ಮತ್ತು ಕಾಶ್ಮೀರದ ಅಂತರಾಷ್ಟ್ರೀಯ ಗಡಿ ಮೂಲಕ ಭಾರತದೊಳಗೆ ನುಸುಳುತ್ತದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಬಬ್ಬನನ್ನು ಹೊಡೆದುರುಳಿಸಿ ಇನ್ನೊಬ್ಬನನ್ನು ಬಿಎಸ್‍ಎಫ್ ಪಡೆಗಳು ಬಂಧಿಸಿದೆ.

ಜಮ್ಮುವಿನ ಅರ್ನಿಯಾ ಸೆಕ್ಟರ್‍ನಲ್ಲಿ ಇಂದು ಮುಂಜಾನೆ ಪಾಕ್ ಕಡೆಯಿಂದ ಒಳನುಸುಳುವಿಕೆ ಯತ್ನಗಳು ನಡೆಯಿತು ಗಡಿ ಬೇಲಿಯತ್ತ ಸಮೀಪಿಸುತ್ತಿರುವುದನ್ನು ಗಮನಿಸಿದಾಗ ಬಿಎಸ್‍ಎಫ್ ಪಡೆಗಳು ಮೊದಲು ಎಚ್ಚರಿಕೆ ನೀಡಿದೆ ಆದರ ಆಕ್ರಮಣಕಾರಿಯಾಗಿ ವರ್ತನೆ ಕಂಡು ಗುಂಡಿನ ದಾಳಿ ನಡೆಸಿತು ಎಂದು ಗಡಿ ಭದ್ರತಾ ಪಡೆ ವಕ್ತಾರರು ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ, ರಾಮ್‍ಗಢ್ ಸೆಕ್ಟರ್‍ನಲ್ಲಿ ಗಡಿ ರೇಖೆ ದಾಟಿ ದಾಟಿ ತಮತಿ ಬೇಲಿ ಹಾರುವಾಗ ಪಾಕಿಸ್ತಾನಿ ನುಸುಳುಕೋರನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರಕ್ಕೇರದ ಬಿಜೆಪಿ, ಮೂರಕ್ಕಿಳಿಯದ ಕಾಂಗ್ರೆಸ್, ಜೆಡಿಎಸ್ ಜೋಶ್

ಗೇಟ್ ತೆರೆದ ನಂತರ ಅವನನ್ನು ಭಾರತದ ಭಾಗದ ಒಳಗೆ ಕರೆತರಲಾಗಿದ್ದು ವಿಚಾರಣೆ ನಡೆಸಲಾಗುತ್ತದೆ .ಎರಡೂ ವಲಯಗಳ ಸಂಪೂರ್ಣ ಪ್ರದೇಶವನ್ನು ಕೂಲಂಕಷವಾಗಿ ಶೋಧಿಸಲಾಗುತ್ತಿದೆ ಎಂದು ಅವರು ಹೇಳಿದರು.

ತಪ್ಪು ಮಾಡಿದ್ದರೆ ನಮಗೂ ಶಿಕ್ಷೆಯಾಗಲಿ : ಡಿಕೆಶಿ

Pakistani, intruder, shot, dead, Border, J&K,

Articles You Might Like

Share This Article