ನವದೆಹಲಿ,ಫೆ.23-ಎಎಂಡಿಎಂಕೆ ಪಕ್ಷದ ಮುಖ್ಯಸ್ಥರಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮುಂದುವರೆಯಲಿದ್ದಾರೆ.
ಎಡಪ್ಪಾಡಿ ಪಳನಿಸ್ವಾಮಿ ನೇಮಕವನ್ನು ಪ್ರಶ್ನಿಸಿ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಓ ಪನ್ನೀರ್‍ಸೆಲ್ವಂ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದರಿಂದ ಪಳನಿಸ್ವಾಮಿ ಅಯ್ಕೆ ಸಿಂಧುವಾಗಿದೆ.
ಎಐಡಿಎಂಕೆ ಪಕ್ಷದ ಮುಖ್ಯಸ್ಥ ಸ್ಥಾನ ಪಳನಿಸ್ವಾಮಿಗೆ ಒಲಿದಿರುವುದನ್ನು ಪ್ರಶ್ನಿಸಿ ಪನ್ನೀರ್‍ಸೆಲ್ವಂ ಅವರು ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‍ನಲ್ಲೂ ಪಳನಿಸ್ವಾಮಿ ಆಯ್ಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು.
ಈಶಾನ್ಯ ರಾಜ್ಯಗಳಲ್ಲಿ CAA ಜಾರಿ ಮಾಡಲು ಬೀಡಲ್ಲ: ಮಮತಾ
ಈ ನಿರ್ಧಾರದ ವಿರುದ್ಧ ಪನ್ನಿರ್‍ಸೆಲ್ವಂ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲೂ ಅವರಿಗೆ ಮುಖಭಂಗವಾಗಿದ್ದು ಸರ್ವೋಚ್ಚ ನ್ಯಾಯಾಲಯ ತಮಿಳುನಾಡು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದು, ಒಪಿಎಸ್‍ಗೆ ಭಾರಿ ಹಿನ್ನಡೆಯಾಗಿದೆ.
Palaniswami, continue, AIADMK, general secretary,