ಹಿಂದುಳಿದ ಪ್ರವರ್ಗಗಳ ಮೀಸಲು ಮರು ವರ್ಗೀಕರಣ

Social Share

ಬೆಂಗಳೂರು,ಜ.2- ರಾಜ್ಯದ ಪ್ರಭಾವಿ ಲಿಂಗಾಯಿತ ಪಂಚಮಸಾಲಿ, ಒಕ್ಕಲಿಗ ಸಮುದಾಯಗಳ ಮೀಸಲು ಬದಲಾವಣೆ ಮತ್ತು ಹೆಚ್ಚಳದ ವಿಚಾರದಲ್ಲಿ ಸೃಷ್ಟಿಯಾದ ಒತ್ತಡ ನಿಭಾಯಿಸಲು ತಲಾ ಶೇ.2ರಷ್ಟು ಮೀಸಲಾತಿ ಹೆಚ್ಚಿಸುವ ನಿರ್ಣಯಕ್ಕೆ ಪೂರಕವಾಗಿ ಹಿಂದುಳಿದ ವರ್ಗಗಳ ಪ್ರವರ್ಗಗಳನ್ನು ಮರುವರ್ಗೀಕರಣ ಮಾಡಲಾಗುತ್ತಿದೆ.

ಪ್ರವರ್ಗ -2(ಬಿ)ಯಲ್ಲಿದ್ದ ಅಲ್ಪಸಂಖ್ಯಾತ ಮುಸ್ಲಿಮರನ್ನು ಆರ್ಥಿಕ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ಕೋಟಾಗೆ ವರ್ಗಾಯಿಸಲು ಚಿಂತನೆ ನಡೆಸಿದೆ. ಸದ್ಯ ಮುಸ್ಲಿಂ, ಕ್ರೈಸ್ತ ಸೇರಿದಂತೆ ಕೆಲ ಅಲ್ಪಸಂಖ್ಯಾತರು ಹಿಂದುಳಿದ ಪ್ರವರ್ಗ-2 (ಬಿ) ವ್ಯಾಪ್ತಿಯಲ್ಲಿದ್ದು, ಒಟ್ಟು ಶೇ.4ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಜಾರಿಯಾಗಬೇಕಿರುವ ಕೇಂದ್ರದ ಇಡಬ್ಲ್ಯೂಎಸ್ ಶೇ.10 ಮೀಸಲು ವ್ಯಾಪ್ತಿಗೆ ಮುಸ್ಲಿಂರನ್ನು ವರ್ಗಾಯಿಸಲಾಗುತ್ತದೆ.

ಇದರಿಂದ ಲಭ್ಯವಾಗುವ ಶೇ.4 ಮೀಸಲು ಪ್ರಮಾಣವನ್ನು ತಲಾ ಶೇ.2ರಂತೆ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡಲು ಚಿಂತನೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ದಕ್ಷಿಣದಲ್ಲಿ ಕಮಲ ಅರಳಿಸಲು ಮೋದಿ, ಶಾ ಮಾಸ್ಟರ್ ಪ್ಲಾನ್

ಅಲ್ಪಸಂಖ್ಯಾತ ಸಮುದಾಯಕ್ಕೆ ಇಡಬ್ಲ್ಯೂಎಸ್ ಕೋಟಾದಲ್ಲಿ ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ಅಬಾಧಿತವಾಗಿರುತ್ತದೆ. ಆದರೆ ಅವರಿಗೆ ರಾಜಕೀಯ ಮೀಸಲು ಅವಕಾಶಗಳು ಈ ಸಮುದಾಯದ ಕೈತಪ್ಪಲಿವೆ.
ಬದಲಿಗೆ, ಪ್ರವರ್ಗ-3 (ಬಿ), 3(ಎ)ನಲ್ಲಿರುವ ಲಿಂಗಾಯಿತ,ಒಕ್ಕಲಿಗ ಮತ್ತಿತರ ಜಾತಿಗಳ ಉದ್ಯೋಗ, ಶಿಕ್ಷಣ ಹಾಗೂ ರಾಜಕೀಯ ಮೀಸಲಾತಿ ಪ್ರಮಾಣ ಹಿಗ್ಗಲಿದೆ.

ಪ್ರವರ್ಗಗಳ ಮರುವಿಂಗಡಣೆಯ ಈ ಪ್ರಕ್ರಿಯೆ ಬಹುತೇಕ ಮಾರ್ಚ್ 2ನೇ ವಾರದಲ್ಲಿ ಜಾರಿಯಾಗಲಿರುವ ವಿಧಾನಸಭಾ ಚುನಾವಣೆ ನೀತಿಸಂಹಿತೆಗೂ ಮುನ್ನ ಮುಗಿಯುವ ನಿರೀಕ್ಷೆ ಇಲ್ಲ ಎನ್ನಲಾಗಿದೆ. ಪ್ರತಿ 10 ವರ್ಷಗಳಿಗೊಮ್ಮೆ ಪ್ರವರ್ಗಗಳ ಮರುವಿಂಗಡಣೆಗೆ ಅವಕಾಶವಿದ್ದು, 2002ರಿಂದ ಈ ಪ್ರಕ್ರಿಯೆ ನಡೆದಿಲ್ಲ. ಈ ಅವಕಾಶ ಬಳಸಿಕೊಂಡು ಪ್ರವರ್ಗಗಳ ಬದಲಾವಣೆ ಮಾಡಲಾಗುತ್ತಿದೆ.

ರಾಜ್ಯದಲಿ ಪ್ರಸ್ತುತ ಬ್ರಾಹ್ಮಣ, ಆರ್ಯವೈಶ್ಯ, ಜೈನ, ನಗರ್ತ ಮತ್ತು ಮೊದಲಿಯಾರ್ ಜಾತಿಗಳು ಮಾತ್ರವೇ ಮೀಸಲು ವ್ಯವಸ್ಥೆಯಿಂದ ಹೊರಗುಳಿದಿವೆ. ಆದರೆ, ಈ ಸಮುದಾಯಗಳ ಜನಸಂಖ್ಯೆ ತೀರಾ ಕಡಿಮೆ ಇರುವ ಕಾರಣ ಅಲ್ಪಸಂಖ್ಯಾತ ಸಮುದಾಯಕ್ಕೆ ಈ ಕೋಟಾದಲ್ಲಿ ಅವಕಾಶ ಕಲ್ಪಿಸಲು ತೊಂದರೆ ಇಲ್ಲ.

ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ

ಇಡಬ್ಲ್ಯೂಎಸ್ ಮೀಸಲು ಜಾರಿಗೊಳಿಸುವ ಅಧಿಕಾರವನ್ನು ಆಯಾ ರಾಜ್ಯ ಶಾಸನಸಭೆಗಳಿಗೆ ಬಿಡಲಾಗಿದೆ. ಈ ದೃಷ್ಟಿಯಿಂದ ರಾಜ್ಯ ಸರಕಾರದ ಲೆಕ್ಕಾಚಾರದ ಹಾದಿ ಸುಸೂತ್ರ ಎನ್ನಲಾಗಿದೆ.

Panchamasali, Vokkaliga, Reservation, increase,

Articles You Might Like

Share This Article