ಪಂಚಮಸಾಲಿ ಮೀಸಲಾತಿಗೆ ಸರ್ಕಾರ ಸಮ್ಮತಿ..?

Social Share

ಬೆಳಗಾವಿ,ಡಿ.29- ಬಹುದಿನಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಕೊನೆಗೂ ಪಂಚಮಶಾಲಿ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇತ್ತೀಚೆಗಷ್ಟೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದ ಬೆನ್ನಲ್ಲೇ ಪಂಚಮಶಾಲಿ ಸಮುದಾಯಕ್ಕೂ ಶೇ.4ರಿಂದ 5ರಷ್ಟು ಮೀಸಲಾತಿ ಹೆಚ್ಚಳ ಮಾಡುವ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಿದೆ.

ಇಲ್ಲಿ ಸುವರ್ಣಸೌಧದಲ್ಲಿ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಪಂಚಮಶಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲು ಸಭೆ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಕಳೆದ ವಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದರು. ಪಂಚಮಶಾಲಿ ಸಮುದಾಯವನ್ನು ಈಗಿರುವ 3ಬಿಯಿಂದ 2ಬಿಗೆ ಸೇರ್ಪಡೆ ಮಾಡುವ ಬದಲು ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಮೀಸಲಾತಿ ನೀಡಬೇಕೆಂದು ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

ಕನ್ಯೆ ಹುಡುಕಾಟದಲ್ಲಿ ರಾಹುಲ್‍ ಗಾಂಧಿ, ಮನದನ್ನೆ ಹೇಗಿರಬೇಕಂತೆ ಗೊತ್ತಾ..?

ಅದರಂತೆ ಸರ್ಕಾರ ಶೇ.4ರಿಂದ 5ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳಿಹಿಸಿಕೊಡಲು ತೀರ್ಮಾನಿಸಿದೆ. ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ಅನುಸರಿಸಿದ ಮಾರ್ಗವನ್ನೇ ಇಲ್ಲಿಯೂ ಕೂಡ ಅಳವಡಿಸಿಕೊಳ್ಳಲಿದೆ.

ಪಂಚಮಶಾಲಿ ಉಪಜಾತಿಯನ್ನು 2ಎ ಹಿಂದುಳಿದಜಾತಿ ಪ್ರವರ್ಗಕ್ಕೆ ಸೇರಿಸಬೇಕೆಂದು ಸದ್ಯದ ಬೇಡಿಕೆ. ವೀರಶೈವ ಲಿಂಗಾಯಿತ ಸಮಾಜದಲ್ಲಿ ಒಟ್ಟು 102 ಉಪಜಾತಿಗಳಿದ್ದು, ಇವುಗಳ ಪೈಕಿ 34 ಉಪ ಜಾತಿಗಳನ್ನು ಕೇಂದ್ರ ಸರ್ಕಾರದ ಒ.ಬಿ.ಸಿ. 2ಅ ಪಟ್ಟಿಯಲ್ಲಿ ಸೇರಿಸಲಾಗಿದೆ. 2ಎ ರಡಿ 15% ಮೀಸಲಾತಿ ಕಲ್ಪಿಸಲಾಗುತ್ತಿದೆ.

ಈಗಾಗಲೇ 2ಎ ಪ್ರವರ್ಗದಡಿ ವೀರಶೈವ ಲಿಂಗಾಯತದ 34 ಉಪಜಾತಿಗಳಾದ ಗೌಲಿ, ಕಾವಾಡಿಗ, ಮೇದಾರ, ಬಾಟರ್, ಗೌರಿ, ಗೌರಿ ಮರಾಠ, ಬರ್ನಡ ಗೌರಿಗು, ಅಗಸ, ಗುರುವ, ಹುಗಾರ, ಜೀರ್, ಜೇಡ, ಕುರುಜಿನಶೆಟ್ಟಿ, ಬಿಳಿಮಗ್ಗ, ಜಾಡರು, ಅಕ್ಕಸಾಲಿ, ಕಮ್ಮಾರ, ಕಮ್ಮಾಲಿ, ಬಡೀಗ, ನಾಯಿಂಡ, ಬಂಡಾರಿ, ಜಜಂತ್ರಿ, ಗಾಣಿಗ, ಗಾಣಿಗರ, ಸಜ್ಜನ, ಬಳೆಗಾರ, ಸಜ್ಜನ ಗಾಣಿಗರ, ನೀಲಗಾರಿ ಮೀಸಲಾತಿ ಪಡೆಯುತ್ತಿದ್ದಾರೆ.

ಪಂಚಮಸಾಲಿ ಉಪಜಾತಿಯನ್ನು 3ಬಿ ಯಿಂದ 2ಎಗೆ ಸೇರಿಸಿದರೆ, ಯಾವ ಆಧಾರದ ಮೇಲೆ ಯಾವ ಯಾವ ಅಂಶಗಳ ಮೇಲೆ ನೀಡಲಾಗಿದೆ ಎಂಬುದನ್ನು ಸ್ಪಷ್ಟಡಿಸಬೇಕು. ಸುಮಾರು 50 ಲಕ್ಷ ಜನಸಂಖ್ಯೆ ಇರುವ ಪಂಚಮಸಾಲಿಯ ಉಪಜಾತಿಯವರನ್ನು ಒ.ಬಿ.ಸಿ 2ಎ ಪ್ರವರ್ಗ ಪಟ್ಟಿಯಲ್ಲಿ ಸೇರಿಸಿದರೆ, ಈಗಾಗಲೇ 2ಎ ಪ್ರವರ್ಗದಲ್ಲಿ ಇರುವ ಎಲ್ಲಾ ಜಾತಿಯವರಿಗೆ ವಿದ್ಯಾಭ್ಯಾಸ ಮತ್ತು ಸರ್ಕಾರದ ನೌಕರಿಯಿಂದ ವಂಚಿತರಾಗುತ್ತಾರೆ.

ಹಿಂಡಲಗಾ ಜೈಲಿಗೆ ಗೃಹ ಸಚಿವ ಜ್ಞಾನೇಂದ್ರ ದಿಡೀರ್ ಭೇಟಿ

ಒಂದು ವೇಳೆ ಎಲ್ಲಾ 102 ವೀರಶೈವ ಲಿಂಗಾಯಿತ ಉಪಜಾತಿಗಳನ್ನು ಒಬಿಸಿ 2ಎಜಾತಿಯ ಪ್ರವರ್ಗ ಪಟ್ಟಿಯಲ್ಲಿ ಸೇರಿಸಿದ್ದಲ್ಲಿ (ಒಂದು ಕೋಟಿ ವೀರಶೈವ ಲಿಂಗಾಯಿತರು)ಈಗಾಗಲೇ 2ಎ ಪ್ರವರ್ಗದಲ್ಲಿ ಮೀಸಲಾತಿ ಪಡೆಯುತ್ತಿರುವ ಜಾತಿಯವರ ಮೀಸಲಾತಿ ಸೌಲಭ್ಯಕ್ಕೆ ಸಂಚಕಾರ ಬರಲಿದೆ ಎಂಬ ಬಲವಾದ ಆತಂಕ ಎದುರಾಗಿದೆ.

ಆದರೆ, 2ಎ ಪ್ರವರ್ಗದ 15% ಮೀಸಲಾತಿಯಡಿ ಸೇರ್ಪಡೆಗೊಳಿಸಿದರೆ, ಆ ಪ್ರವರ್ಗದಲ್ಲಿನ ಪ್ರಬಲ ಉಪಜಾತಿಗಳ ವಿರೋಧ ಕಟ್ಟಿಕೊಳ್ಳುವ ಭಯ ಸರ್ಕಾರದ್ದು. ಪಂಚಮಸಾಲಿ ಒಳಗೊಂಡಂತೆ ವೀರಶೈವ ಲಿಂಗಾಯತದಲ್ಲಿನ ಇತರ ಹಿಂದುಳಿದ ಉಪಜಾತಿಗಳನ್ನೂ ಸೇರಿಸಿ ಮೀಸಲಾತಿ ಕೊಡುವ ಬೇಡಿಕೆ ಇದೆ.

ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ಕೊಡುವ ಅನಿವಾರ್ಯತೆ ಹೊಂದಿರುವ ಬೊಮ್ಮಾಯಿ ಸರ್ಕಾರ ಪಂಚಮಸಾಲಿಗರ ಮೀಸಲಾತಿಗಾಗಿ ಪ್ರತ್ಯೇಕ ಪ್ರವರ್ಗ ಸೃಜಿಸುವ ಯೋಚನೆಯಲ್ಲಿ ಇದೆ ಎನ್ನಲಾಗಿದೆ. ಆ ಮೂಲಕ 2ಎ ಪ್ರವರ್ಗದಲ್ಲಿನ ಒಬಿಸಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗದೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಫಿಲಿಪೈನ್ಸ್ ನಲ್ಲಿ ಭಾರಿ ಮಳೆ, ಪ್ರವಾಹಕ್ಕೆ 32 ಮಂದಿ ಸಾವು

ಇದಕ್ಕಾಗಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲಾಗುವ ಮೀಸಲಾತಿಯನ್ನು ಕಡಿತಗೊಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಸ್ಲಿಂ (4%) ಮತ್ತು ಕ್ರಿಶ್ಚಿಯನ್ (5%) ಮೀಸಲಾತಿ ಕಡಿತಗೊಳಿಸಿ, ಪಂಚಮಸಾಲಿಗರು ಸೇರಿ ವೀರಶೈವ ಲಿಂಗಾಯತ ಉಪಜÁತಿಗಳಿಗೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ, ಮೀಸಲಾತಿ ನೀಡಲು ಬೊಮ್ಮಾಯಿ ಸರ್ಕಾರ ಮುಂದಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಹೈ ಕಮಾಂಡ್ ಸಿಎಂ ಬೊಮ್ಮಾಯಿಗೆ ಮೀಸಲಾತಿ ಬೇಡಿಕೆ ಸಂಬಂಧ ಯಾವ ಸಲಹೆ ಸೂಚನೆ ನೀಡಿದೆ ಎಂಬುದು ಕುತೂಹಲ ಕೆರಳಿಸಿದೆ.

Panchamasali, Lingayat, reservation, government, Deadline,

Articles You Might Like

Share This Article