ಜಾಹಿರಾತಿನಲ್ಲಿ ಪಂಡಿತ್ ನೆಹರು ಭಾವಚಿತ್ರ ನಾಪತ್ತೆ, ಕಾಂಗ್ರೆಸ್ ತೀವ್ರ ಆಕ್ಷೇಪ

Social Share

ಬೆಂಗಳೂರು,ಆ.14-ರಾಜ್ಯ ಸರ್ಕಾರದ ವತಿಯಿಂದ ನೀಡಲಾಗಿರುವ ಆಜಾದಿ ಕಾ ಅಮೃತ ಮಹೋತ್ಸವದ ಜಾಹಿರಾತಿನಲ್ಲಿ ಪಂಡಿತ್ ಜವಹಾರ್ ಲಾಲ್ ನೆಹರು ಅವರ ಭಾವಚಿತ್ರ ಕಾಣೆಯಾಗಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಸಂಬಂಧ ಟ್ವೀಟ್‍ವೊಂದನ್ನು ಹಂಚಿಕೆಕೊಂಡಿದ್ದು, ನೆಹರು ಅವರು ಇಂತಹ ಸಣ್ಣತನವನ್ನು ಕ್ಷಮಿಸುತ್ತಾರೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೆಲಸವನ್ನು ಉಳಿಸಿಕೊಳ್ಳುವುದಕ್ಕಾಗಿ ಹತಾಶರಾಗಿದ್ದು, ಅವರಿಗೆ ತಾವು ಮಾಡಿರುವ ತಪ್ಪು ಅರಿವಾದಂತಿಲ್ಲ ಎಂದಿದ್ದಾರೆ.

ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ ಮತ್ತು ಅವರ ತಂದೆಯ ಮೊದಲ ರಾಜಕೀಯ ಗುರು ಎಂ.ಎನ್.ರಾಯ್ ಇಬ್ಬರೂ ಜವಹಾರ್ ಲಾಲ್ ನೆಹರು ಅವರ ಅಭಿಮಾನಿಗಳಾಗಿದ್ದರು. ನಂತರ ಒಳ್ಳೆಯ ಸ್ನೇಹಿತರಾಗಿದ್ದರು. ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

ಮೋಹನ್‍ಕುಮಾರ ಮಂಗಳಂ ಎಂಬ ತಮಿಳುನಾಡು ಮೂಲದ ರಾಜಕೀಯ ಕಾರ್ಯಕರ್ತರೊಬ್ಬರು ಕರ್ನಾಟಕ ಸರ್ಕಾರ ನೀಡಿರುವ ಜಾಹಿರಾತನ್ನು ಶೇರ್ ಮಾಡಿ ನರೇಂದ್ರಮೋದಿ ಅವರ ಹೆಸರಿನಲ್ಲಿ ಸಣ್ಣತನ ಅನುಸರಿಸಲಾಗಿದೆ ಎಂದು ಕಿಡಿಕಾರಿದ್ದಾರೆ. ಜೈರಾಮ್ ರಮೇಶ್ ಅವರು ಇದನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇತ್ತ ರಾಜ್ಯದಲ್ಲಿ ಅನೇಕ ಕಾಂಗ್ರೆಸಿಗರು ಮತ್ತು ಪ್ರಗತಿಪರರು ಸರ್ಕಾರಿ ಜಾಹಿರಾತಿನಲ್ಲಿ ನೆಹರು ಮತ್ತು ಟಿಪ್ಪು ಸುಲ್ತಾನ್ ಅವರ ಫೋಟೊ, ಮಾಹಿತಿ ಇಲ್ಲದೇ ಇರುವ ಬಗ್ಗೆ ಆಕ್ಷೇಪಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿದೆ.

Articles You Might Like

Share This Article