ಬೆಂಗಳೂರು, ಜ.13- ವನ್ಯಜೀವಿ ಚಿಪ್ಪು ಹಂದಿಯ (ಪ್ಯಾಂಗೋಲಿಯನ್) ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಹನುಮಂತ ನಗರ ಠಾಣೆ ಪೊಲೀಸರು ಬಂಧಿಸಿ 23 ಕೆಜಿ ತೂಕದ ಚಿಪ್ಪುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿವಾಸಿ ಕಿರಣ್ ರಾಮನಾಯ್ಕ್(25) ಬಂಧಿತ ಆರೋಪಿ. ನುಮಂತನಗರದ ಬಿ.ಎಸ್.ಕೆ., 50 ಅಡಿ ರಸ್ತೆಯ ಪಿಇಎಸ್ ಪದವಿ ಕಾಲೇಜು ಪಕ್ಕದ ಬಿಡಬ್ಲ್ಯೂಎಸ್ಎಸ್ಬಿ ಪಾರ್ಕ್ ಪಕ್ಕದ ಕಾಂಪೌಂಡ್ ಬಳಿ ವ್ಯಕ್ತಿಯೊಬ್ಬ ಚೀಲದಲ್ಲಿ ಚಿಪ್ಪು ಹಂದಿಯ (ಪ್ಯಾಂಗೋಲಿಯನ್) ಚಿಪ್ಪುಗಳನ್ನು ಮಾರಾಟ ಮಾಡಲು ಗಿರಾಕಿಗಳಿಗೆ ಕಾಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಮಹಾರಾಷ್ಟ್ರದ ನಾಸಿಕ್ ಬಳಿ ಭೀಕರ ಅಪಘಾತ, 10 ಮಂದಿ ಸಾವು
ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ ಪೊಲೀಸರು ಆತನನ್ನು ಬಂಧಿಸಿ 23 ಕೆಜಿ ತೂಕದ ಹಂದಿ ಚಿಪ್ಪುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಅಕ್ರಮವಾಗಿ ವನ್ಯ ಪ್ರಾಣಿ ಹಂದಿ ಚಿಪ್ಪುಗಳನ್ನು ಮಾರಾಟ ಮಾಡುತ್ತಿದ್ದುದ್ದು ವನ್ಯ ಜೀವಿ ಕಾಯ್ದೆಯನ್ವಯ ಅಪರಾಧವಾಗಿದ್ದು, ಈತನ ವಿರುದ್ಧ ಹನುಮಂತ ನಗರ ಠಾಣೆಯಲ್ಲಿ ವನ್ಯ ಜೀವಿ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಮೆಟ್ರೋ ಪಿಲ್ಲರ್ ದುರಂತ : ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್
ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಪಿ. ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ನಾಗರಾಜು ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.