ಪ್ರೀತಿಸಿದವನನ್ನು ಮನೆಗೆ ಕರೆಸಿ ವಿಷವಿಟ್ಟು ಕೊಂದ ಪ್ರೇಯಸಿ..!

Social Share

ತಿರುವನಂತಪುರಂ,ಅ.31- ಪ್ರೀತಿಸಿದ ಹುಡುಗನನ್ನು ಮನೆ ಕರೆಸಿ ವಿಷ ನೀಡಿ ಪ್ರೇಯಸಿ ಕೊಲೆ ಮಾಡಿರುವ ಸಿನಿಮಾ ಶೈಲಿಯ ದುರಂತ ಇಲ್ಲಿ ನಡೆದಿದೆ. ರೇಡಿಯಾಲಜಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಶರೋನ್ ರಾಜï(23) ಕೊಲೆಯಾಗಿದ್ದು ಆತನ ಪ್ರೇಯಸಿ ಗ್ರೀಷಾ(23)ಳನ್ನು ಪೊಲೀಸರು ಬಂಧಿದಿಸಿದ್ದಾರೆ.

ಕಳೆದ 1 ವರ್ಷದ ಹಿಂದೆ ಪ್ರೀತಿ ಬಲೆಯಲ್ಲಿ ಬಿದ್ದಿದ್ದ ಈ ಜೋಡಿ ಬೆಚ್ಚಿಬೀಳುವ ಕಥನ ಎಂತವರನ್ನು ಬೆಚ್ಚಿಬೀಳುವಂತೆ ಮಾಡುತ್ತದೆ.ಪ್ರೀತಿ ಹಕ್ಕಿಗಳಾಗಿ ತೇಲಾಡುತ್ತಿದ್ದ ಇವರು ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು ಬ್ರೇಕ್ ಅಪ್ ಆಗಲು ಗ್ರೀಷ್ಮಾ ಮನಸು ಮಾಡಿದ್ದಳು.

ಇತ್ತೀಚೆಗೆ ತನ್ನ ಪ್ರೀತಿಸಿದ ಹುಡುಗನಿಗೆ ಇದರ ಬಗ್ಗೆ ತಿಳಿಸಿದ್ದಳು ಆದರೆ ಇದಕ್ಕೆ ಆತ ಒಪ್ಪಲಿಲ್ಲ ,ನನ್ನ ಜಾತಕದಲ್ಲಿ ಮೊದಲ ಪತಿ ಸಾಯುತ್ತಾನೆ ಎಂದು ಕಥೆ ಕಟ್ಟಲಾಯಿತು ಅದರೂ ಅದನ್ನು ರಾಜï ನಂಬಲಿಲ್ಲ .

ಇದರ ನಡುವೆ ಗ್ರೀಷ್ಮಾಗೆ ಬೇರೆ ಹುಡುಗನ ಜೊತೆಗೆ ಮದುವೆ ಮಡಲು ಮನೆಯವರು ನಿರ್ಧಾರ ಮಾಡಿದ್ದರು. ಇದರಿಂದಾಗಿ ಶರೋನ್ ಜೊತೆಗೆ ಬ್ರೇಕ್ ಅಪ್ ಆಗೋಣ ಎಂದು ಮೃದುವಾದ ಆತನಿಗೆ ಹೇಳಿದ್ದಾಳೆ,ಆದರೆ ಆತ ನಾನು ನಿನ್ನನ್ನೂ ತುಂಬಾ ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ .ಏನೇ ಮಾಡಿದರು ಆತ ಒಪ್ಪದಿದ್ದಾಗ ಕೊಲೆ ಮಾಡಲು ಗ್ರೀಷ್ಮಾ ನಿರ್ಧರಿಸಿದಳು ಎಮದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಲ್ಲಿ ದುಪ್ಪಟಾಯ್ತು ಡೆಂಘೀ ಪೀಡಿತರ ಸಂಖ್ಯೆ

ಕಳೆದ ಅ.14 ರಂದು ರಾಜ್‍ನನ್ನು ತನ್ನ ಮನೆಗೆ ಕರೆಸಿಕೊಮಡು ಆಯುರ್ವೇದದ ಮಿಶ್ರಣದ ಚಹಾದಲ್ಲಿ ಕಪಿಕ್ ಎಂಬ ಕೀಟನಾಶಕವನ್ನು ಬೆರೆಸಿ ನೀಡಲಾಗಿತ್ತು.ಮನೆಯಿಂದ ಹೊರಟಾಗ ಆತನ ಸ್ನೇಹಿತ ಸಿಕ್ಕಿ ಮಾತನಾಡುವ ವೇಳೆ ವಾಂತಿ ಮಾಡಿಕೊಂಡಿದ್ದಾನೆ ಕೂಡಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಆತ ಅ.25 ರಂದು ಮೃತಪಟ್ಟಿದ್ದ.

ಪೆÇಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಜಿತ್ ಕುಮಾರ್ ತಿಳಿಸಿದ್ದಾರೆ.

Articles You Might Like

Share This Article