ಪುರುಷ ನೌಕರರಿಗೆ ಶಿಶುಪಾಲನಾ ರಜಾ

Social Share

ಬೆಳಗಾವಿ, ಡಿ.29- ಪತ್ನಿ ಮೃತಪಟ್ಟ ಸಂದರ್ಭದಲ್ಲಿ ಮಕ್ಕಳ ಪಾಲನೆ ಜವಾಬ್ದಾರಿ ನಿರ್ವಹಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಪುರುಷ ಸರ್ಕಾರಿ ನೌಕರರಿಗೂ ಶಿಶುಪಾಲನಾ ರಜಾ ಸೌಲಭ್ಯ ವಿಸ್ತರಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದ್ದಾರೆ.

ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರದಲ್ಲಿ ಸದಸ್ಯ ನಜೀರ್ ಅಹಮ್ಮದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 1 ರಿಂದ 18 ವರ್ಷದವರೆಗೂ ಅಪ್ರಾಪ್ತ ಮಕ್ಕಳೆಂದು ಪರಿಗಣಿಸಲಾಗುತ್ತದೆ. ಅನಂತರ ವಯೋಮಾನದವರನ್ನು ವಯಸ್ಕರೆಂದು ಗುರುತಿಸಲಾಗುವುದು. ಮಕ್ಕಳ ಪಾಲನೆಗೆ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ 180 ದಿನಗಳ ಶಿಶುಪಾಲನಾ ರಜೆ ನೀಡಲಾಗುತ್ತಿದೆ. ಅದನ್ನು ಮಕ್ಕಳ 18 ವರ್ಷದವರೆಗೂ ಯಾವಾಗಲಾದರೂ ಅದನ್ನು ಮಹಿಳಾ ನೌಕರರು ಬಳಸಿಕೊಳ್ಳಬಹುದು ಎಂದರು.

ಸಾಮಾನ್ಯವಾಗಿ ಹೆಣ್ಣುಮಕ್ಕಳೆ ಮಕ್ಕಳ ಪಾಲನೆ ಮಾಡುವುದು ಎಂಬ ಅಭಿಪ್ರಾಯದಿಂದ ಅವರಿಗೆ ಮಾತ್ರ ರಜಾ ಸೌಲಭ್ಯ ನೀಡಲಾಗುತ್ತಿದೆ. ಗಂಡಸರಿಗೆ ಶಿಶುಪಾಲನಾ ರಜೆ ನೀಡುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದರು.
ಇದಕ್ಕೆ ನಜೀರ್ ಅಹಮ್ಮದ್ ಆಕ್ಷೇಪಿಸಿದರು. ಪತ್ನಿ ಸಾವನ್ನಪ್ಪಿದ ಪ್ರಕರಣಗಳಲ್ಲಿ ಪತಿಯೇ ಮಕ್ಕಳನ್ನು ಸಾಕಬೇಕು, ಅಂತಹ ಪ್ರಕರಣಗಳಿಗೆ ಗಂಡಸರಿಗೂ ರಜೆ ಸೌಲಭ್ಯ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ನಿಮ್ಮ ಸಂಕಲ್ಪ, ನಮ್ಮ ಹೊಣೆ: ಕಾಂಗ್ರೆಸ್ ಪ್ರಣಾಳಿಕೆ ತಯಾರಿ ಆರಂಭ

ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಇದಕ್ಕೆ ಧ್ವನಿಗೂಡಿದರು. ಪತ್ನಿ ಇಲ್ಲದ ಗಂಡಸರಿಗೆ ನೀಡಬೇಕು. 14 ವರ್ಷ ಮೇಲ್ಪಟ್ಟ ಮಕ್ಕಳು ಪ್ರಭುದ್ಧರಾಗಿರುತ್ತಾರೆ, ಒಂದರಿಂದ 14 ವರ್ಷದವರೆಗೂ ಶಿಶುಪಾಲನಾ ರಜೆ ಸೌಲಭ್ಯ ಸಿಮಿತ ಮಾಡಿ ಎಂದು ಸಲಹೆ ನೀಡಿದರು.

ಎಸ್.ವಿ.ಸಂಕನೂರು, ಶಿಶುಪಾಲನೆ ರಜೆಯ ಅಸೂಚನೆಯಲ್ಲಿ ಕೆಲವು ಲೋಪಗಳಿದ್ದು. ದುರುಪಯೋಗವಾಗುತ್ತಿದೆ. ಶಿಶು ಎಂದರೆ ಮೂರು ವರ್ಷದ ಒಳಗೆ ಇರುವುದು ಮಾತ್ರ. 18 ವರ್ಷದವರೆಗೂ ರಜೆ ಸೌಲಭ್ಯ ಬಳಕೆಯಾಗುತ್ತಿದೆ. ಇದು ಸರಿಯಲ್ಲ. ಶಿಕ್ಷಣ ಇಲಾಖೆಯಲ್ಲಿ ಮಹಿಳಾ ಶಿಕ್ಷಕರೆ ಹೆಚ್ಚಿದ್ದಾರೆ. ಒಳ್ಳೆಯ ಪರೀಕ್ಷೆ ವೇಳೆಯಲ್ಲೇ ಶಿಶುಪಾಲನಾ ರಜೆ ಹಾಕುತ್ತಾರೆ.

ಪಠ್ಯ ಹಾಗೂ ಪರೀಕ್ಷಾ ಕೆಲಸಗಳಿಗೆ ತೊಂದರೆಯಾಗುತ್ತದೆ. ಮಕ್ಕಳ ಅನಾರೋಗ್ಯವಾಗಿದ್ದರೆ ರಜೆ ಸೌಲಭ್ಯ ಬಳಸಿಕೊಳ್ಳಲಿ. ಅದಕ್ಕೆ ಸಂಬಂಧ ಪಟ್ಟಂತಹ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಬೇಕು. ಆದರೆ ಆ ರೀತಿ ನಡೆಯುತ್ತಿಲ್ಲ. ಖಾಸಗಿ ಅನುದಾನಿತ ಸಂಸ್ಥೆಗಳ ಶಿಕ್ಷಕರಿಗೂ ಈ ಸೌಲಭ್ಯ ವಿಸ್ತರಣೆ ಮಾಡಿ ಎಂದು ಒತ್ತಾಯಿಸಿದರು.

ಹೆರಿಗೆ ವೇಳೆ ಪತ್ನಿ ಮೃತಪಟ್ಟರೆ ಮಗುವಿನ ಪಾಲನೆ ಜವಾಬ್ದಾರಿಯನ್ನು ತಂದೆಯೇ ಹೊರಬೇಕು. ಆಗ ರಜೆಯ ಅವಶ್ಯಕತೆ ಇದೆ. ಅದಕಗ್ಕಾಗಿ ಪುರುಷ ನೌಕರರಿಗೆ ಸೌಲಭ್ಯ ನೀಡಲು ಸರ್ಕಾರ ಕಾನೂನು ತಿದ್ದುಪಡಿ ಮಾಡಬೇಕು ಎಂದರು.

ರ‍್ಯಾಪಿಡ್ ಬೈಕ್ ಬ್ಯಾನ್‍ಗೆ ಒತ್ತಾಯಿಸಿ ಆಟೋ ಮುಷ್ಕರ

ಆಗ ಬೇಸರ ವ್ಯಕ್ತ ಪಡಿಸಿದ ಮಾಧುಸ್ವಾಮಿ, ಬೇಸಾಯ ಮಾಡುವವರಿಗೆ ಎಷ್ಟು ದಿನ ರಜೆ ಸಿಗುತ್ತಿದೆ ಎಂದು ಕೇಳಲು ಸಾಧ್ಯವೇ ? ಪತ್ನಿ ಸತ್ತುಹೋದರೆ ಎಂದು ಸದಸ್ಯರು ಮಾತನಾಡುತ್ತಾರೆ. ಅದಕ್ಕೆ ಸರ್ಕಾರ ಏನು ಮಾಡಲು ಸಾಧ್ಯ. ವಿಧಾನ ಪರಿಷತ್ ಚರ್ಚೆಯಲ್ಲಿ ಎಲ್ಲದಕ್ಕೂ ಮಿತಿಗಳಿವೆ ಎಂದರಲ್ಲದೆ, ಸರ್ಕಾರಿ ನೌಕರರ ಬೇಡಿಕೆ ಆಧರಿಸಿಯೇ 180 ದಿನ ರಜೆ ನೀಡಲಾಗುತ್ತಿದೆ.

ಅದನ್ನು ಮಹಿಳಾ ನೌಕರರು ತಮ್ಮ ಮಕ್ಕಳನ್ನು ಸಿಇಟಿಯಂತಹ ಪರೀಕ್ಷೆ ತಯಾರು ಮಾಡಲು ಬಳಸಿಕೊಳ್ಳುತ್ತಿದ್ದಾರೆ. ತಾಯಿ ಇಲ್ಲದ ಮಕ್ಕಳ ಪಾಲನೆ ಮಡುವ ಪುರುಷ ನೌಕರರಿಗು ಸೌಲಭ್ಯ ವಿಸ್ತರಿಸಲು ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

Parental leave, male, government, employees, Minister Madhuswamy,

Articles You Might Like

Share This Article