ಮಗುವನ್ನು ನಿಲ್ದಾಣದಲ್ಲೇ ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ

Social Share

ಟೆಲ್‍ಅವಿವ್,ಫೆ.2- ವಿಮಾನಪ್ರಯಾಣದ ಸಂದರ್ಭದಲ್ಲಿ ಮಗುವಿಗೆ ಟಿಕೆಟ್ ಇಲ್ಲದ ದಂಪತಿ ತಮ್ಮ ಕರುಳ ಕುಡಿಯನ್ನೇ ನಿಲ್ದಾಣದಲ್ಲಿ ಬಿಟ್ಟು ಫ್ಲೈಟ್ ಹತ್ತಲು ಹೋದ ವಿಲಕ್ಷಣ ಘಟನೆ ಇಸ್ರೇಲ್‍ನಲ್ಲಿ ನಡೆದಿದೆ.

ದಂಪತಿ ಬೆಲ್ಜಿಯಂನ ಬ್ರಸೆಲ್ಸ್‍ಗೆ ಪ್ರಯಾಣ ಬೆಳೆಸಲು ತಮ್ಮ ಮಗುವಿನೊಂದಿಗೆ ಟೆಲ್‍ಅವಿವ್ ವಿಮಾನ ನಿಲ್ದಾಣಕ್ಕೆ ಬಂದರು. ಆದರೆ, ಮಗುವಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿಗಳು ಮಗುವಿಗೆ ಟಿಕೆಟ್ ಕಡ್ಡಾಯ ಎಂದಾಗ ವಿಲಕ್ಷಣ ಮನೋಭಾವದ ದಂಪತಿ ಇನ್ನೊಂದು ಟಿಕೆಟ್ ಖರೀದಿಸುವ ಬದಲು ಮಗುವನ್ನು ಚೆಕ್ ಇನ್ ಕೌಂಟರ್‍ನಲ್ಲೇ ಬಿಟ್ಟು ವಿಮಾನ ಹತ್ತಲು ಮುಂದಾದರು.

ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು

ಪ್ರಯಾಣ ರದ್ದು ಮಾಡಿ ಮನೆಗೆ ವಾಪಾಸಗಬೇಕು ಇಲ್ಲವೇ ಮಗುವಿಗೆ ಮತ್ತೊಂದು ಟಿಕೆಟ್ ಪಡೆಯುವುದನ್ನು ಬಿಟ್ಟು ಮಗುವನ್ನೇ ನಿಲ್ದಾಣದಲ್ಲಿ ಬಿಟ್ಟು ಹೋಗುವುದನ್ನು ನಾವು ಇದುವರೆಗೂ ನೋಡಿರಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ನಿಲ್ದಾಣದ ಮ್ಯಾನೇಜರ್ ತಿಳಿಸಿದ್ದಾರೆ.

ಟೆಲ್ ಅವಿವ್‍ನಿಂದ ಬ್ರಸೆಲ್ಸ್‍ಗೆ ಪ್ರಯಾಣಿಸುತ್ತಿದ್ದ ಈ ಪ್ರಯಾಣಿಕರು ತಮ್ಮ ಶಿಶುವಿಗೆ ಬುಕ್ಕಿಂಗ್ ಮಾಡದೆ ಚೆಕ್-ಇನ್‍ನಲ್ಲಿ ಮಗುವನ್ನು ಬಿಟ್ಟು ಭದ್ರತೆಗೆ ತೆರಳಿದರು. ತಕ್ಷಣ ಏರ್‍ಪೆಪೊರ್ಟ್ ಭದ್ರತಾ ಸಿಬ್ಬಂದಿಗಳು ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾಗಿದ್ದ ದಂಪತಿಯನ್ನು ತಡೆದು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Parents, leave, baby, airport, check-in, after, refusing, pay,

Articles You Might Like

Share This Article