ಆರ್ಕಿಡ್ ಶಾಲೆ ಮುಂದೆ ಪೋಷಕರ ಪ್ರತಿಭಟನೆ

Social Share

ಬೆಂಗಳೂರು, ಜ.25- ಸಿಬಿಎಸ್‍ಇ ಮಾನ್ಯತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ 5 ರಿಂದ 8ನೆ
ತರಗತಿವರೆಗೂ ಮಕ್ಕಳನ್ನು ದಾಖಲು ಮಾಡಿಕೊಂಡಿರುವುದಾಗಿ ಆರೋಪಿಸಿ ಇಂದು ಕೂಡ ಪೋಷಕರು ನಾಗರಬಾವಿಯ ಆರ್ಕಿಡ್ ಇಂಟರ್‍ನ್ಯಾಷನಲ್ ಶಾಲೆ ವಿರುದ್ಧ ಇಂದು ಕೂಡ ಪ್ರತಿಭಟನೆ ನಡೆಸಿದರು.

ಜನವಸತಿ ಪ್ರದೇಶದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲಾಗಿದ್ದು, ಆಟದ ಮೈದಾನವೂ ಇಲ್ಲ. ಲಕ್ಷ ಲಕ್ಷ ಡೊನೇಷನ್ ಪಡೆದು ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲವೆಂದು ಆರೋಪಿಸಿ ಶಾಲೆ ಮುಂದೆ ಜಮಾಯಿಸಿದ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಂಶುಪಾಲರು ಯಾರು ಎಂಬುದೇ ಸಿಬ್ಬಂದಿಗೆ ಗೊತ್ತಿಲ್ಲವಂತೆ: ಶಾಲೆಯ ಪ್ರಾಂಶುಪಾಲರು ಯಾರು ಎಂದು ಕೇಳಿದರೆ ನಾನಲ್ಲ ನಾನಲ್ಲ ಎಂದು ಸಿಬ್ಬಂದಿ ಜಾರಿಕೊಳ್ಳುತ್ತಿದ್ದಾರೆ. ಹಾಗಾದರೆ ಪ್ರತಿನಿತ್ಯ ಇದೇ ಶಾಲೆಯಲ್ಲೇ ಕೆಲಸ ಮಾಡುತ್ತಾರೆ ತಾನೆ, ಇವರಿಗೆ ಪ್ರಾಂಶುಪಾಲರು ಗೊತ್ತಿಲ್ಲವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ನಿನ್ನೆಯಿಂದ ಪೋಷಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಡಿಡಿಪಿಐ ಮತ್ತು ಬಿಇಒ ಸ್ಥಳಕ್ಕೆ ಬಂದರೂ ಸಹ ಶಾಲೆಯ ಆಡಳಿತ ಮಂಡಳಿ ಮಾತ್ರ ನಾಪತ್ತೆಯಾಗಿದೆ. ಇಷ್ಟು ದಿನ ಏನು ಮಾಡುತ್ತಿದ್ದಿರಿ, ಪರವಾನಗಿ ಹೇಗೆ ಕೊಟ್ಟಿರಿ ಎಂದು ಪೋಷಕರು ಹಾಗೂ ಬಿಇಒ ನಡುವೆ ಮಾತಿನ ಚಕಮಕಿ ನಡೆಯಿತು.

ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ವಂಚನೆ ವಂಚಿಸುತ್ತಿದ್ದ ಮೂವರ ಬಂಧನ

ವರ್ಷಪೂರ್ತಿ ಸಿಬಿಎಸ್‍ಇ ಪಠ್ಯ ಬೋಧನೆ ಮಾಡಿ ಈಗ ದಿಢೀರನೆ ರಾಜ್ಯ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಸಿದರೆಮಕ್ಕಳ ಭವಿಷ್ಯದ ಗತಿ ಏನು? ಇದರಿಂದ ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರೀಕ್ಷೆ ವೇಳೆಗೆ ತಿಂಗಳು ಬಾಕಿ ಉಳಿದಿರುವಾಗಲೇ ಪಠ್ಯ ಬದಲಾವಣೆ ಮಾಡಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಗೊಂದಲಕ್ಕೆ ದೂಡಿದೆ. ವರ್ಷವಿಡೀ ಬೋಧನೆ ಮಾಡುವುದನ್ನು ಒಂದೇ ತಿಂಗಳಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಹೆಚ್ಚಿನ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಸಾಧ್ಯತೆ ಇದೆ. ಲಕ್ಷ ಲಕ್ಷ ಹಣ ಖರ್ಚು ಮಾಡಿ ಮಕ್ಕಳನ್ನು ಈ ಶಾಲೆಗೆ ಸೇರಿಸಿದ್ದು, ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ದೂರಿದರು.

ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು

ಜತೆಗೆ 9 ಮತ್ತು 10ನೆ ತರಗತಿ ಕೂಡ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ. ರಾಜ್ಯ ಶಿಕ್ಷಣ ಇಲಾಖೆ ಯಿಂದ ಈ ಎರಡೂ ತರಗತಿ ನಡೆಸಲು ಪರವಾನಗಿ ಇಲ್ಲ. ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಪಟ್ಟು ಹಿಡಿದಿದ್ದಾರೆ.

Parents, protest, Orchid School, fake, CBSE affiliation,

Articles You Might Like

Share This Article