ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಉಪವಾಸಕ್ಕೆ ಕರೆ ನೀಡಿದ ಪ್ರಧಾನಿ ಮೋದಿ

Social Share

ನವದೆಹಲಿ,ಜ.27- ದೇಶದ ಇಂದಿನ ಪ್ರಮುಖ ಸಮಸ್ಯೆ ಎಂದರೆ ಪ್ರತಿಯೊಬ್ಬರು ದಿನದ ಆರು ಗಂಟೆ ಸ್ಕ್ರೀನ್‍ನಲ್ಲೇ ಕಾಲ ಕಳೆಯುತ್ತಿದ್ದಾರೆ, ಇದರಿಂದ ಮೌಲ್ಯಯುತ ಮಾನವ ಸಂಪನ್ಮೂಲ ನಷ್ಟವಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ಕಾಲಕಾಲಕ್ಕೆ ಡಿಜಿಟಲ್ ಉಪವಾಸವನ್ನು ಆಚರಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಕುರಿತ ಭಯವನ್ನು ನಿವಾರಿಸಲು ಆಯೋಜಿಸಲಾಗಿದ್ದ ಪರೀಕ್ಷಾ ಪೇ ಚರ್ಚಾ-2023ರಲ್ಲಿ ಭಾಗವಹಿಸಿ, ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಬೆಂಗಳೂರಿನಿಂದ ಏವಮನನ್ ಅವರು ಆನ್‍ಲೈನ್ ಶಿಕ್ಷಣದ ವೇಳೆ ಗಮನ ಬೇರೆ ಕಡೆ ತಿರುಗುತ್ತಿದೆ. ಇದನ್ನು ಹೇಗೆ ನಿಯಂತ್ರಿಸುವುದು ಎಂದರೆ, ದಿಪೇಶ್, ಆದಿತಾಬ್ ಗುಪ್ತಾ, ಕಾಮಾಕ್ಷಿ ರಾಯ್ ಅವರು, ಪರೀಕ್ಷಾ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳ ಚಟಗಳಿಂದ ಗಮನ ಬೇರೆ ಕಡೆ ವಿಚಲಿತವಾಗದಂತೆ ತಡೆಯುವುದು ಹೇಗೆ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಪ್ರಧಾನಿ, ನೀವು ಸ್ಮಾರ್ಟ್ ಆಗಿದ್ದೀರಾ ಅಥವಾ ಗೆಜೆಟ್ ಸ್ಮಾರ್ಟ್ ಆಗಿದೆಯೇ ಎಂಬ ಪ್ರಶ್ನೆ ಇದೆ ಕೆಲವೊಮ್ಮೆ ಗೆಜೆಟ್ ಹೆಚ್ಚು ಸ್ಮಾರ್ಟ್ ಎಂಬು ಭಾವಿಸುವದರಿಂದ ತಪ್ಪುಗಳು ಆರಂಭವಾಗುತ್ತವೆ. ದೇವರು ನಿಮಗೆ ಹೆಚ್ಚು ಶಕ್ತಿ ನೀಡಿದ್ದಾರೆ. ಹಾಗಾಗಿ ಗೆಜೆಟ್ ನಿಮಗಿಂತ ಸ್ಮಾರ್ಟ್ ಅಲ್ಲ ಎಂಬುದನ್ನು ಮರೆಯಬೇಡಿ ಎಂದರು.

ಬಣ್ಣದ ಲೋಕದ ನಂಟು ಕಳಚಿದ `ಸಾಕ್ಷಾತ್ಕಾರ’ ನಟಿ ಜಮುನಾ

ಇಂದು ದೇಶವೇ ಚಿಂತೆ ಮಾಡಬೇಕಾದ ವಿಷಯವೆಂದರೆ ಆರು ಗಂಟೆ ಜನ ಸ್ಕ್ರೀನ್‍ನಲ್ಲಿರುತ್ತಾರೆ. ಅದರಲ್ಲಿ ವ್ಯವಹಾರ ಮಾಡುವುದಾದರೆ ಸಂತೋಷ. ಆದರೆ ಅದರಲ್ಲಿ ರೀಲ್ ನೋಡುತ್ತಾ ಕಾಲ ಕಳೆದರೆ ಸಮಯ ವ್ಯರ್ಥವಾಗುತ್ತದೆ. ಸೃಜನಾತ್ಮಕ ಸಮಯ ಗೆಜೆಟ್‍ನಲ್ಲೇ ಕಳೆದು ಹೋಗುವುದರಿಂದ ಮಾನವ ಶಕ್ತಿ ಹಾಳಾಗುತ್ತಿದೆ.

ಗೆಜೆಟ್ ನಮ್ಮನ್ನು ಗುಲಾಮ್ ಮಾಡಲು ಅವಕಾಶ ಕೊಡಬಾರದು. ಮೊಬೈಲ್, ಟಿವಿ ಅಥವಾ ಇನ್ನಿತರ ಗೆಜೆಟ್‍ಗಳನ್ನು ಸಂಭಾಳಿಸಬೇಕು. ನಿಮ್ಮಲ್ಲಿರುವ ಅಗಾಧ ಶಕ್ತಿಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲಾ ಗೆಜೆಟ್ ಅಲವಂಭಿತವಾಗಬಾರದು. ನಾನು ಸ್ವತಂತ್ರ ವ್ಯಕ್ತಿ, ನಾನು ಗೆಜೆಟ್‍ನ ಗುಲಾಮನಲ್ಲ ಎಂಬುದನ್ನು ಮರೆಯಬಾರಬಾರದು. ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಎಂಬುದು ನಿಜ. ಆದರೆ ಆನ್‍ಲೈನಲ್ಲಿ ಗಂಟೆಗಟ್ಟಲೆ ಇರುವುದು ಒಳೆಯದಲ್ಲ. ಮೊಬೈಲ್‍ನಲ್ಲಿ ಅಡುಗೆ ಮಾಡುವುದನ್ನು ನೋಡಿದರೆ ಹೊಟ್ಟೆ ತುಂಬುವುದಿಲ್ಲ. ಅಡುಗೆ ಮಾಡಲು ಬೇಕಾದ ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು, ಅಡುಗೆ ಮಾಡಬೇಕು ಎಂದು ಹೇಳಿದರು.

ಗೆಜೆಟ್‍ನಿಂದ ದೂರು ಇರುವುದನ್ನು ಪ್ರಜ್ಞಾಪೂರಕವಾಗಿ ಮಾಡುತ್ತಿರಬೇಕು. ನಿಮಗೆ ಗೂಗಲ್ ಹೊರತಾದ ಸಾಮಾಥ್ರ್ಯವಿದೆ ಅದನ್ನು ಬಳಕೆ ಮಾಡಿಕೊಳ್ಳಿ. ಪುರಾತನ ಸಂಸ್ಕøತಿಯಲ್ಲಿ ಉಪವಾಸದ ಬಗ್ಗೆ ಉಲ್ಲೇಖಿಸಲಾಗಿದೆ. ಈಗ ಕಾಲ ಬದಲಾಗಿದೆ, ನಾವು ಡಿಜಿಟಲ್ ಉಪವಾಸದ ಬಗ್ಗೆ ಅಭ್ಯಾಸ ಆರಂಭಿಸಬೇಕಿದೆ. ವಾರದಲ್ಲಿ ಒಂದು ದಿನ, ದಿನದಲ್ಲಿ ಕೆಲವು ಗಂಟೆಗಳ ಕಾಲ ಡಿಜಿಟಲ್ ಉಪವಾಸ ವೃತ ಆಚರಣೆ ಮಾಡಿ. ಟಿವಿ, ಮೊಬೈಲ್ ಸೇರಿದಂತೆ ಡಿಜಿಟಲ್ ಸಲಕರಣೆಗಳಿಂದ ದೂರ ಇರಿ. ಇಂದಿನ ದಿನಗಳಲ್ಲಿ ಕುಟುಂಬವೂ ಡಿಜಿಟಲ್ ಚಟಕ್ಕೆ ಅಂಟಿಕೊಂಡಿದೆ.

ಪಕ್ಕದ ಕೊಣೆಯಲ್ಲಿರುವ ಮಗ ಅಡುಗೆ ಮನೆಯಲ್ಲಿರುವ ತಾಯಿಗೆ ವಾಟ್ಸ್‍ಅಪ್ ಮಾಡುತ್ತಾನೆ. ಡಿಜಿಟಲ್ ಉಪವಾಸ ಆಚರಣೆ ಮಾಡುವುದರಿಂದ ನಮಗೆ ಅಂಟಿರುವ ರೋಗದಿಂದ ಮುಕ್ತರಾಗಲು ಸಾಧ್ಯವಿದೆ. ಮನೆಯಲ್ಲಿ ಕೆಲವು ಪ್ರದೇಶಗಳಿಗೆ ಡಿಜಿಟಲ್ ಪ್ರವೇಶಕ್ಕೆ ಅವಕಾಶ ನೀಡಬೇಡಿ. ಇದರಿಂದ ನಿಮಗೆ ಆನಂದ ಸಿಗಲಿದೆ, ಕುಟುಂಬದ ಸದಸ್ಯರು ಒಟ್ಟಾಗಿ ಕುಳಿತು ಅಲ್ಲಿ ಮಾತನಾಡಿ, ಹೊಂದಾಣಿಕೆಗಳನ್ನು ರೂಢಿಸಿಕೊಳ್ಳಿ. ಇದರಿಂದ ನಿಧಾನಕ್ಕೆ ನಿಮ್ಮ ಜೀವನ ಕ್ರಮವೂ ಸುಧಾರಣೆಯಾಗಲಿದೆ ಎಂದರು.

ಎಸ್.ಎಂ.ಕೃಷ್ಣ ಯುವಪೀಳಿಗೆಗೆ ಆದರ್ಶ: ಸಿಎಂ ಬೊಮ್ಮಾಯಿ

ಜಮ್ಮುವಿನಿಂದ ನಿಧಾ ಎಂಬ ವಿದ್ಯಾರ್ಥಿನಿ ಪ್ರಶ್ನೆ ಸ್ಪರ್ಧೆಯನ್ನು ನಿಭಾಯಿಸುವುದು ಹೇಗೆ ಎಂದಾಗ ಉತ್ತರಿಸಿದ ಪ್ರಧಾನಿ, ನಿಮ್ಮ ಜೀವನವನ್ನು ನೀವು ಜೀವಿಸಿ, ದಿನ ಪೂರ್ತಿ ಸ್ಪರ್ಧಾತ್ಮಕ ಮನೋಸ್ಥಿತಿಯಲ್ಲಿ ಇರಬೇಡಿ. ಪರೀಕ್ಷೆ ಹೋದರೆ ಜೀವನವೇ ಹೊಯಿತು ಎಂಬ ಭಾವನೆ ಬೇಡ. ಒಂದು ನಿಲ್ದಾಣ ಹೋದರೆ ಮತ್ತೊಂದು ನಿಲ್ದಾಣ ಬರುತ್ತದೆ. ಪರೀಕ್ಷೆ ಜೀವನದ ಕೊನೆ ಅಲ್ಲ. ನಿಮ್ಮ ಪ್ರಯತ್ನ ನೀವು ಮಾಡಿ ಎಂದು ಸಲಹೆ ನೀಡಿದರು.

ತೆಲಂಗಾಣದ ರಂಗಾರೆಡ್ಡಿ ನವೋದಯ ಶಾಲೆಯಿಂದ ಅಕ್ಷರಸಿರಿ, ಮಧ್ಯಪ್ರದೇಶದ ಭೂಪಾಲ್‍ನ ಋತಿಕಾ ಘೋಡೆ ಹೆಚ್ಚು ಭಾಷೆಗಳನ್ನು ಕಲಿಯುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಭಾರತ ವಿವಿಧತೆಯಿಂದ ಕೂಡಿದ ದೇಶ. ಇಲ್ಲಿ ಸಾವಿರಾರು ಭಾಷೆಗಳಿವೆ. ಇದಕ್ಕಾಗಿ ನಾವು ಹೆಮ್ಮೆ ಪಡಬೇಕಿದೆ.

ವಿದೇಶಿ ವ್ಯಕ್ತಿ ನಮ್ಮನ್ನು ಭೇಟಿ ಮಾಡಿದಾಗ ನಮಸ್ಕಾರ ಹೇಳುತ್ತಾರೆ. ಸಂಪರ್ಕಕ್ಕೆ ಹೆಚ್ಚು ಶಕ್ತಿ ಇದೆ. ಬಲಾ, ಅಕ್ಕಪಕ್ಕದ ರಾಜ್ಯಗಳ ಭಾಷೆ ಕಲಿಯಲು ಯತ್ನಿಸಿ. ಭಾಷೆ ಕಲಿಯಲು ಯತ್ನಿಸಿದರೆ ಮಾತನಾಡಲು ಶುರು ಮಾಡುತ್ತೀರಾ. ಒಂದು ಭಾಷೆಯ ಹಿಂದೆ ಸಾವಿರಾರ ವರ್ಷಗಳ ಅನುಭವ, ವಿಚಾರಧಾರೆ, ಅಚಲ ನಂಬಿಕೆಗಳು ಇರುತ್ತವೆ. ಅದನ್ನು ಕಲಿಯುವುದರಿಂದ ಸಾವಿರಾರು ವರ್ಷಗಳ ಅನುಭವದ ಭೂಮಿಕೆ ಪ್ರವೇಶಿಸಲು ನಿಮಗೆ ಬಾಗಿಲು ತೆರೆಯುತ್ತದೆ ಎಂದರು.

ನಮ್ಮಲ್ಲಿ ಎರಡು ಮೂರು ಸಾವಿರ ವರ್ಷಗಳ ಸ್ಥೂಪಗಳನ್ನು ನೋಡಬಹುದು. ಅಷ್ಟು ವರ್ಷದಿಂದ ಹಿರಿಯರು ಉಳಿಸಿದ ಆ ಸ್ಮಾರಕಗಳ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಮ್ಮಲ್ಲಿ ಜಗತ್ತಿನ ಪುರಾತನ ಭಾಷೆ ಇದೆ ಎಂಬುದಕ್ಕೆ ನಾವು ಹೆಮ್ಮೆ ಪಡಬೇಕು. ತಮಿಳು ಜಗತ್ತಿನ ಅತ್ಯಂತ ಪುರಾತನ ಭಾಷೆಯಾಗಿದೆ. ತಮಿಳು ಜಗತ್ತಿನ ಶ್ರೇಷ್ಠ ಮತ್ತು ಪುರಾತನ ಭಾಷೆ ಎಂಬ ಗೌರವ ನಮ್ಮ ಬಳಿ ಇದೆ ಎಂದರು.

ಭಾರತದ ಯಾವುದೇ ಭಾಷೆಯಲ್ಲಾದರೂ ಒಂದೆರಡು ವಾಖ್ಯಗಳನ್ನು ಕಲಿತಿದ್ದರೆ ನೀವು ತುಂಬಾ ಖಷಿ ಪಡುತ್ತಿರಾ. ಮಕ್ಕಳಿಗೆ ಭಾಷೆ ಕಲಿಯುವ ಗೆಜೆಟ್‍ನ ಹೆಚ್ಚು ಸಾಮಥ್ರ್ಯ ಇರುತ್ತದೆ. ಕೂಲಿ ಕಾರ್ಮಿಕ ಕುಟುಂಬವೊಂದರ ಎಂಟು ವರ್ಷದ ಮಗುವೊಂದು ಭಾರತದ ಹಲವು ಭಾಷೆಗಳಲ್ಲಿ ಮಾತನಾಡುವುದನ್ನು ನೋಡಿ ನಾನು ಅಚ್ಚರಿಕೊಂಡಿದ್ದೇನೆ. ದೇಶದ ಪ್ರತಿ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದರು.

ಹುಬ್ಬಳ್ಳಿಗೆ ಅಮಿತ್ ಷಾ: ಚುನಾವಣೆ ಕಾರ್ಯತಂತ್ರಕ್ಕೆ ಸರಣಿ ಸಭೆ

ಪರೀಕ್ಷೆಯನ್ನು ಉತ್ಸವವನ್ನಾಗಿ ಆಚರಿಸಿ, ಶಿಕ್ಷಕರು ಮತ್ತು ಪೋಷಕರನ್ನು ಬಂಧನದಲ್ಲಿ ಇಡಬೇಡಿ. ಮಕ್ಕಳು ಚಿಟ್ಟೆಗಳಂತೆ, ಅವುಗಳಿಗೆ ಸಮವಸ್ತ್ರ ಹಾಕಿ ಕೂಡಿಡುವ ಯತ್ನ ಮಾಡಬೇಡಿ. ಒಳ್ಳೆಯ ಅಭ್ಯಾಸಗಳನ್ನು ಕಲಿಸಿ ಎಂದರು.

Pariksha Pe Charcha 2023, PM Modi, mantra, Digitalfasting, Digitalfasting, Cheating, Timemanagement,

Articles You Might Like

Share This Article