ಪರೀಕ್ಷಾ ಪೇ ಚರ್ಚಾ: ಯುವಕರಿಗೆ ಒತ್ತಡ ಮುಕ್ತ ವಾತಾವರಣ ಸೃಷ್ಟಿಸುವ ಒಂದು ಆಂದೋಲನ

Social Share

ನನ್ನ ಪ್ರೀತಿಯ ಮಕ್ಕಳೇ, ಪೋಷಕರೇ ಮತ್ತು ಶಿಕ್ಷಕರೇ!
ನಮ್ಮ ನಿಮ್ಮೆಲ್ಲರ ಬಹುನಿರೀಕ್ಷಿತ ಪರೀಕ್ಷಾ ಪೇ ಚರ್ಚಾ (ಪಿಪಿಸಿ)ಯ 6 ನೇ ಆವೃತ್ತಿ ಮತ್ತೆ ಬಂದಿದೆ. ಪಿಪಿಸಿ 2023ನೇ ಜನವರಿ 27ರಂದು ಬೆಳಗ್ಗೆ 11 ಗಂಟೆಗೆ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ದೇಶ-ವಿದೇಶಗಳಿಂದ ಕೋಟ್ಯಂತರ ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸುಮಾರು 38.80 ಲಕ್ಷ ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪಿಪಿಸಿ 2023ಕ್ಕೆ ನೋಂದಾಯಿಸಿಕೊಂಡಿರುವುದರಿಂದ ಈ ವರ್ಷ ನೋಂದಣಿಯಲ್ಲಿ ಅಸಾಧಾರಣ ಹೆಚ್ಚಳ ಕಂಡುಬಂದಿದೆ. ಸುಮಾರು 150 ದೇಶಗಳ ವಿಧ್ಯಾರ್ಥಿಗಳು, 51 ದೇಶಗಳ ಶಿಕ್ಷಕರು ಮತ್ತು 50 ದೇಶಗಳ ಪೋಷಕರು ಪಿಪಿಸಿ-2023ರಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಮುಖ್ಯವಾಗಿ ವಿವಿಧ ರಾಜ್ಯ ಮಂಡಳಿಗಳ ನೋಂದಾಯಿತ ವಿಧ್ಯಾರ್ಥಿಗಳು ಮತ್ತು ಶಿಕ್ಷಕರಿಂದ ನೋಂದಾಯಿಸಲ್ಪಟ್ಟ ಈ ಬೃಹತ್ ಎರಡೂವರೆ ಪಟ್ಟಿನಷ್ಟು ಹೆಚ್ಚಳವು ಗೌರವಾನ್ವಿತ ಪ್ರಧಾನ ಮಂತ್ರಿಯವರ ಈ ವಿಶಿಷ್ಟ ಉಪಕ್ರಮದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಈ ಆವೃತ್ತಿಯಲ್ಲಿಯೂ ಸಹ, ಭಾಗವಹಿಸುವವರಿಗೆ ಗೌರವಾನ್ವಿತ ಪ್ರಧಾನ ಮಂತ್ರಿಯವರೊಂದಿಗೆ ನೇರವಾಗಿ ಸಂವಹನ ನಡೆಸುವ ಅವಕಾಶ ಸಿಗಲಿದೆ. ಗೌರವಾನ್ವಿತ ಪ್ರಧಾನ ಮಂತ್ರಿಗಳು ನೇರವಾಗಿ ವಿಧ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ಈ ಉಪಕ್ರಮದ ಹಿಂದಿನ ಉದ್ದೇಶದ ಬಗ್ಗೆ ನಿಮ್ಮಲ್ಲಿ ಅನೇಕರು ಆಶ್ಚರ್ಯ ಪಡುತ್ತಿರಬಹುದಲ್ಲವೇ? ನಾನು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ.

ಪಿಪಿಸಿ ಎಂಬುದು ಮೌಲ್ಯಮಾಪನಕ್ಕಾಗಿ ಒತ್ತಡ ಮುಕ್ತ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಮತ್ತು ಪ್ರತಿಯೊಬ್ಬ ವಿಧ್ಯಾರ್ಥಿಯ ಅನನ್ಯತೆಯನ್ನು ಪ್ರದರ್ಶಿಸಿ, ಅವರ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ವಿಧ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಮಾಜವನ್ನು ಒಟ್ಟುಗೂಡಿಸುವ ದೃಷ್ಟಿಕೋನದೊಂದಿಗೆ ಗೌರವಾನ್ವಿತ ಪ್ರಧಾನ ಮಂತ್ರಿಯವರು ಕೈಗೊಂಡ ಆಂದೋಲನವಾಗಿದೆ. ಈ ಕಾರ್ಯಕ್ರಮದ ಮೂಲಕ, ಗೌರವಾನ್ವಿತ ಪ್ರಧಾನಮಂತ್ರಿಯವರು ವಿಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರೀಕ್ಷೆಯ ಒತ್ತಡ ಮತ್ತು ಸಂಬಂಧಿತ ವಿಷಯಗಳ ಬಗ್ಗೆ, ಅವರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

ನಾಳೆ ಚಂದ್ರನ ಹಿಂದೆ ಕಣ್ಮರೆಯಾಗಲಿದೆ ಯುರೇನಸ್ ಗ್ರಹ

ನಿಮಗೆ ತಿಳಿದಿರುವಂತೆ ಪರೀಕ್ಷಾ ಒತ್ತಡವು ನಾವು ಎದುರಿಸುತ್ತಿರುವ ಅತ್ಯಂತ ನಿರ್ಣಾಯಕ ಸಮಸ್ಯೆಗಳಲ್ಲಿ ಒಂದಾಗಿದೆ. ಮುಂಬರುವ ಪರೀಕ್ಷೆಗಳು ಮತ್ತು ಪರೀಕ್ಷೆಗಳ ಬಗ್ಗೆ ಸ್ವಲ್ಪ ಒತ್ತಡವನ್ನು ಅನುಭವಿಸುವುದು ಸರ್ವೇಸಾಮಾನ್ಯ. ವಾಸ್ತವವಾಗಿ, ಸಣ್ಣ ಪ್ರಮಾಣದ ಒತ್ತಡವು ನಿಮಗೆ ಸವಾಲನ್ನೊಡ್ಡಿ ಕಷ್ಟಪಟ್ಟು ಕೆಲಸ ಮಾಡಲು ನಿಮ್ಮನ್ನು ಪ್ರಚೋದಿಸಬಹುದು.

ಆದರೆ ಪರೀಕ್ಷೆಯ ಒತ್ತಡವು ನಿಮ್ಮ ಶೈಕ್ಷಣಿಕ ಮತ್ತು ಕಲಿಕೆಯ ಗುರಿಗಳನ್ನು ನಿರ್ವಹಿಸುವ ಮತ್ತು ಸಾಧಿಸುವ ಸಾಮರ್ಥ್ಯಕ್ಕೆ ಅಡ್ಡಿಯಾದಾಗ, ಅದು ಸಮಸ್ಯಾತ್ಮಕವಾಗುತ್ತದೆ. ಅಂತಹ ಸಂದರ್ಭದಲ್ಲಿ, ಪೋಷಕರು ಮತ್ತು ಶಿಕ್ಷಕರು ಇಬ್ಬರೂ ಮಗುವಿನ ಜೀವನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ತಮ್ಮ ಕನಸುಗಳನ್ನು ವಿಧ್ಯಾರ್ಥಿಗಳ ಮೇಲೆ ಬಲವಂತವಾಗಿ ಹೇರಬಾರದು ಎಂಬುದು ಪೋಷಕರು ಮತ್ತು ಶಿಕ್ಷಕರು ಅರಿಯಬೇಕು, ಇದು ಅವರ ಜವಾಬ್ದಾರಿಯಾಗಿದೆ. ಪ್ರತಿ ಮಗುವು ತನ್ನದೇ ಆದ ಕನಸುಗಳನ್ನು ನನಸಾಗಿಸುವುದು ಬಹಳ ಮುಖ್ಯ.

ಈ ಚಳುವಳಿಗೆ ಸ್ಫೂರ್ತಿಯಾಗಿ, ಗೌರವಾನ್ವಿತ ಪ್ರಧಾನ ಮಂತ್ರಿಯವರ ಅತ್ಯಂತ ಹೆಚ್ಚು ಮಾರಾಟದ ಪುಸ್ತಕವಾದ ‘ಎಕ್ಸಾಮ್ ವಾರಿಯರ್ಸ್’ ಈಗ 13 ವಿಭಿನ್ನ ಭಾಷೆಗಳಲ್ಲಿ ಲಭ್ಯವಿದೆ. ಈ ಪುಸ್ತಕದಲ್ಲಿ ಅವರು ಶಿಕ್ಷಣವನ್ನು ಉಲ್ಲಾಸದಾಯಕವಾಗಿ ಪಡೆಯುವ ವಿಧಾನವನ್ನು ವಿವರಿಸಿದ್ದಾರೆ.

ಇದರಲ್ಲಿ ವಿಧ್ಯಾರ್ಥಿಗಳ ಜ್ಞಾನ ಮತ್ತು ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅನಗತ್ಯ ಒತ್ತು ಮತ್ತು ಒತ್ತಡದಿಂದ ಕೂಡಿದ ಜೀವನ್ಮರಣದ ಪರಿಸ್ಥಿತಿಯನ್ನು ಉಂಟುಮಾಡಿಕೊಳ್ಳುವ ಬದಲು ಪರೀಕ್ಷೆಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡುವಂತೆ ಅವರು ಪ್ರತಿಯೊಬ್ಬರನ್ನು ಒತ್ತಾಯಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬೇಡಿಕೆಗಳನ್ನು ವಿಧ್ಯಾರ್ಥಿಗಳು ಹೇಗೆ ನಿಭಾಯಿಸಬೇಕು ಮತ್ತು ಬೋರ್ಡ್ ಪರೀಕ್ಷೆಗಳಿಗೆ ಹೇಗೆ ಅಧ್ಯಯನ ಮಾಡಬೇಕು ಎಂಬ ವಿಷಯವನ್ನು ಪ್ರಸ್ತಾಪಿಸಿ ಪ್ರಧಾನ ಮಂತ್ರಿಯವರು, ವಿಧ್ಯಾರ್ಥಿಗಳು ತಮ್ಮ ಪೂರ್ಣ ಮನಸ್ಸಿನಿಂದ ಪಠ್ಯಕ್ರಮವನ್ನು ಅಧ್ಯಯನ ಮಾಡಿದರೆ, ಪರೀಕ್ಷೆಗಳು ನಿಜವಾಗಿಯೂ ಸುಲಭ ಎಂದು ಆಗಾಗ್ಗೆ ಹೇಳಿದ್ದಾರೆ.

ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಬದಲು ವಿಷಯವನ್ನು ಕರಗತ ಮಾಡಿಕೊಳ್ಳುವ ಗುರಿಯನ್ನು ವಿಧ್ಯಾರ್ಥಿಗಳು ಹೊಂದಿರಬೇಕು ಎಂದು ಅವರು ಹೇಳಿದ್ದಾರೆ. ಕೇವಲ ಪರೀಕ್ಷೆಗಾಗಿ ಅಧ್ಯಯನ ಮಾಡಬೇಡಿ, ಬದಲಿಗೆ ಜ್ಞಾನಕ್ಕಾಗಿ ಅಧ್ಯಯನ ಮಾಡಿ ಎಂದು ಅವರು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

ಕ್ರೀಡಾಪಟುಗಳು ಕ್ರೀಡೆಗಾಗಿ ತರಬೇತಿ ಪಡೆಯುತ್ತಾರೆಯೇ ಹೊರತು ಸ್ಪರ್ಧೆಗಾಗಿ ಅಲ್ಲ ಎಂದು ಅವರು ಹೇಳಿದ್ದಾರೆ. “ನೀವು ವಿಶೇಷ ನವ ಪೀಳಿಗೆಯವರು. ಹೌದು, ಈಗ ಹೆಚ್ಚಿನ ಸ್ಪರ್ಧೆ ಇದೆ ಆದರೆ ಅದಕ್ಕಿಂತ ಹೆಚ್ಚಿನ ಅವಕಾಶಗಳೂ ಇವೆ ” ಎಂದು ಅವರು ಹೇಳಿದ್ದಾರೆ. ಸ್ಪರ್ಧೆಯನ್ನು ತಮ್ಮ ಸಮಯದ ಶ್ರೇಷ್ಠ ಕೊಡುಗೆಯಾಗಿ ಪರಿಗಣಿಸುವಂತೆ ಅವರು ವಿಧ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಅನೇಕ ಬಾರಿ, ಕಲಿಕೆಯು ಆನಂದದಾಯಕ, ತೃಪ್ತಿದಾಯಕ ಮತ್ತು ಜೀವನಪರ್ಯಂತದ ಪ್ರಯಾಣವಾಗಿರಬೇಕು ಎಂದು ಅವರು ಒತ್ತಿಹೇಳಿದ್ದಾರೆ.

“ನಿಮ್ಮ ಸುದೀರ್ಘ ಜೀವನದಲ್ಲಿ, ಪರೀಕ್ಷೆಯು ನಿಮ್ಮನ್ನು ಸವಾಲು ಮಾಡುವ ಅವಕಾಶಗಳಲ್ಲಿ ಒಂದಾಗಿದೆ. ನೀವು ಪರೀಕ್ಷೆಯನ್ನು ನಿಮ್ಮ ಎಲ್ಲಾ ಕನಸುಗಳ ಅಂತ್ಯವಾಗಿ, ಜೀವನ್ಮರಣದ ಪ್ರಶ್ನೆಯಾಗಿ ನೋಡಿದಾಗ, ನಿಮಗೆ ಸಮಸ್ಯೆ ಉದ್ಭವಿಸುತ್ತದೆ. ಯಾವುದೇ ಪರೀಕ್ಷೆಯನ್ನು ಒಂದು ಅವಕಾಶವೆಂದು ಪರಿಗಣಿಸಿ. ವಾಸ್ತವವಾಗಿ, ನಾವು ಅಂತಹ ಸವಾಲುಗಳಿಂದ ಓಡಿಹೋಗುವ ಬದಲು ಅವುಗಳನ್ನು ಎದುರಿಸಬೇಕು.”
ಗೌರವಾನ್ವಿತ ಪ್ರಧಾನ ಮಂತ್ರಿಗಳು

ಜನವರಿ 12, 2023ರಂದು ಗೌರವಾನ್ವಿತ ಪ್ರಧಾನ ಮಂತ್ರಿಗಳು ಪಿಪಿಸಿ 2023ರ ಅಂಗವಾಗಿ ಪರೀಕ್ಷೆಯ ಒತ್ತಡವನ್ನು ನಿವಾರಿಸಿ ವಿಧ್ಯಾರ್ಥಿಗಳಿಗೆ ಸಹಾಯ ಮಾಡಲು ‘ಮಂತ್ರಗಳು ಮತ್ತು ಚಟುವಟಿಕೆಗಳ ಭಂಡಾರವನ್ನು’ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದು ನಿಮಗೆ ಸಂತೋಷವಾಗುತ್ತದೆ. ನೀವು ಅದನ್ನು ಆನ್ ಲೈನ್ ನಲ್ಲಿ ಪಡೆಯಬಹುದು.

ಪಿಪಿಸಿಯ ಹಿಂದಿನ ಪುನರಾವರ್ತಿತ ಆವೃತ್ತಿಗಳಲ್ಲಿ ಪ್ರಧಾನ ಮಂತ್ರಿಯವರು ತಮ್ಮ ಸಂವಾದಗಳಲ್ಲಿ ಉಲ್ಲೇಖಿಸಿದ ಎಲ್ಲಾ ಪ್ರಮುಖ ವಿಷಯಗಳನ್ನು ಒಟ್ಟುಗೂಡಿಸುವ ಗುರಿಯನ್ನು ಈ ಸರಣಿ ಹೊಂದಿದೆ. ಈ ವೆಬ್ ಸೈಟ್ ನಲ್ಲಿ ನಿಮಗೆ ಪ್ರಧಾನ ಮಂತ್ರಿಯವರ ವೀಡಿಯೊಗಳು, ಪರಿಕಲ್ಪನೆಗಳ ಪಠ್ಯ ಸಾರಾಂಶ ಮತ್ತು ಸಂದೇಶವನ್ನು ಸಂಕ್ಷಿಪ್ತವಾಗಿ ಸೆರೆಹಿಡಿಯುವ ಗ್ರಾಫಿಕ್ಸ್ ಸಿಗುತ್ತದೆ. ಇದು ‘ಪರೀಕ್ಷೆಗಳ ಬಗ್ಗೆ ಸರಿಯಾದ ಮನೋಭಾವ ಯಾವುದು?’, ‘ಪರೀಕ್ಷಾ ಕೊಠಡಿಯ ಒಳಗೆ ಮತ್ತು ಹೊರಗಿನ ವಿಶ್ವಾಸ’, ಸಮಯ ನಿರ್ವಹಣೆ, ಕಷ್ಟಕರ ವಿಷಯಗಳ ನಿರ್ವಹಣೆ, ಏಕಾಗ್ರತೆಯನ್ನು ಹೇಗೆ ನಿಭಾಯಿಸುವುದು, ‘ಜ್ನಾಪಕ ಶಕ್ತಿಯನ್ನು ಹೇಗೆ ಬಳಸಿಕೊಳ್ಳುವುದು’, ‘ಗುರಿಗಳ ನಿಗದಿಪಡಿಕೆ’ ಮತ್ತು ಇನ್ನೂ ಅನೇಕ ವಿಷಯಗಳನ್ನು ಒಳಗೊಂಡಿದೆ.

ಭಾರತಕ್ಕೆ ಮತ್ತೆ ಸೌತ್ ಆಫ್ರಿಕಾದ 100 ಚೀತಾಗಳು

ವಿವಿಧ ಸವಾಲಿನ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು, ಈ ವಲಯಕ್ಕೆ ಪರಿವರ್ತಕ ಸುಧಾರಣೆಗಳನ್ನು ತರುವ ದೃಷ್ಟಿಯಿಂದ, ನಮ್ಮ ಸರ್ಕಾರವು ಎಲ್ಲ ಮಧ್ಯಸ್ಥಗಾರರ ತೀವ್ರ ಸಮಾಲೋಚನೆಗಳ ಪ್ರಕ್ರಿಯೆಯ ಮೂಲಕ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು (ಎನ್.ಇ.ಪಿ.) ಜಾರಿಗೆ ತಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಶೈಕ್ಷಣಿಕ ಕ್ಷೇತ್ರದಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರುತ್ತದೆ.

ಈ ನೀತಿಯು ವಿಧ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಯಲ್ಲಿ ನಮ್ಯತೆಯನ್ನು ಪಾಲಿಸುತ್ತದೆ. ವಿಧ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯಗಳನ್ನು ತೆಗೆದುಕೊಳ್ಳಲು, ತಮ್ಮದೇ ಆದ ಮಾರ್ಗವನ್ನು ಆಯ್ಕೆ ಮಾಡಲು ಮತ್ತು ತಮ್ಮದೇ ಆದ ಇಚ್ಛಾವೃತ್ತಿಯಲ್ಲಿ ಮುಂದುವರೆಯಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಇದು ನಿರಂತರ, ರಚನಾತ್ಮಕ ಮತ್ತು ಸಾಮರ್ಥ್ಯ ಆಧಾರಿತ ಮೌಲ್ಯಮಾಪನ, ವಿಧ್ಯಾರ್ಥಿಗಳ ಕಲಿಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ವಿಶ್ಲೇಷಣೆ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನಾ ಸ್ಪಷ್ಟತೆ ಇತ್ಯಾದಿಗಳನ್ನು ಒಳಗೊಂಡಿರುವ ಉನ್ನತ-ಶ್ರೇಣಿಯ ಕೌಶಲ್ಯಗಳನ್ನು ಪರೀಕ್ಷಿಸುವುದರ ಮೇಲೆ ಕೇಂದ್ರೀಕೃತವಾಗಿದೆ.

ಮುಂದಿನ ಸಮೀಪದ ದಿನಗಳಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ 2020 ಹತ್ತನೇ ಮತ್ತು ಹನ್ನೆರಡನೇ ತರಗತಿಯ ವಿಧ್ಯಾರ್ಥಿಗಳಿಗೆ ಸಂಪೂರ್ಣ ಪಠ್ಯಕ್ರಮ ಮತ್ತು ಮಾದರಿಯನ್ನು ಬದಲಾಯಿಸುತ್ತದೆ. ವಿಷಯಗಳ ಸಂಯೋಜನೆ ಮತ್ತು ಸ್ಟ್ರೀಮ್ ಗಳ ನಡುವಿನ ಕ್ರಾಸ್ ಓವರ್ ನೊಂದಿಗೆ, ವಿಧ್ಯಾರ್ಥಿಗಳು ಈಗ ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ವಿಷಯಗಳನ್ನು ಅಧ್ಯಯನ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಉನ್ನತ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ಸಾಂಪ್ರದಾಯಿಕ ವಿಷಯಗಳ ಜೊತೆಗೆ ಕಲೆ ಮತ್ತು ಕರಕುಶಲ ಮತ್ತು ವೃತ್ತಿಪರ ವಿಷಯಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅವರು ಹೊಂದಿರುತ್ತಾರೆ. ಉದಾಹರಣೆಗೆ, ವಿಜ್ಞಾನ ವಿಭಾಗದ ವಿಧ್ಯಾರ್ಥಿಯು ಕಲಾ ವಿಷಯವನ್ನು ಆಯ್ಕೆ ಮಾಡಲು ಮತ್ತು ಎರಡನ್ನೂ ಏಕಕಾಲದಲ್ಲಿ ಅಧ್ಯಯನ ಮಾಡಲು ಈ ಮಾದರಿಯಲ್ಲಿ ಅನುವು ಮಾಡಿಕೊಡಲಾಗುತ್ತದೆ.

ಈ ಪ್ರಕ್ರಿಯೆಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿಯಂತಹ ಉಪಕ್ರಮವು ಪರೀಕ್ಷೆಯ ಆತಂಕ, ಸಮಯ ನಿರ್ವಹಣೆ, ಒತ್ತಡ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ವಿಧ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಕಳವಳಗಳನ್ನು ಪರಿಹರಿಸುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ. ಈ ಆಂದೋಲನಕ್ಕೆ ಸೇರಿ ವಿಧ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಮತ್ತು ಯಶಸ್ವಿಯಾಗಲು ಮತ್ತು ರಾಷ್ಟ್ರ ನಿರ್ಮಾಣದ ಉದಾತ್ತ ಉದ್ದೇಶಕ್ಕೆ ಕೊಡುಗೆ ನೀಡಲು ಸಕ್ರಿಯವಾಗಿ ಬೆಂಬಲಿಸಬೇಕೆಂದು ನಾನು ಎಲ್ಲರನ್ನೂ ಆಹ್ವಾನಿಸುತ್ತೇನೆ ಮತ್ತು ವಿನಂತಿಸುತ್ತೇನೆ.

ಮುಂಬರುವ ಪಿಪಿಸಿಯಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ನಾನು ಎದುರು ನೋಡುತ್ತೇನೆ.
ಧನ್ಯವಾದಗಳು

ಧರ್ಮೇಂದ್ರ ಪ್ರಧಾನ್
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರು

ParikshapeCharcha, unique, popular, initiative, PM Modi, Education Minister, Dharmendra Pradhan,

Articles You Might Like

Share This Article