ನವದೆಹಲಿ,ಜ.27- ಪರೀಕ್ಷೆಯಲ್ಲಿ ನಕಲು ಮಾಡಿ ಯಶಸ್ವಿಯಾದವರು, ಜೀವನದಲ್ಲಿ ನಕಲು ಮಾಡಲಾಗಲ್ಲ, ಯಶಸ್ವಿಯಾಗುವುದಿಲ್ಲ. ಆದ್ದರಿಂದ ಪರೀಕ್ಷಾ ಅಕ್ರಮಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳಿಂದ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಕಾಪಿ, ನಕಲು ಮೂಲಕ ತಮ್ಮ ಗಾಡಿ ಓಡಿಸುವವರು ತಾವು ಪರೀಕ್ಷಾ ಕೊಠಡಿಯಲ್ಲಿ ಕಾವಲಿಗಿರುವ ಸೂಪರ್ ವೈಸರ್‍ರಿಗೆ ಯಾಮಾರಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನಕಲು ಮಾಡಲು ವಿದ್ಯಾರ್ಥಿಗಳು ಹಲವು ಸೃಜನಶೀಲ ಮಾರ್ಗಗಳನ್ನು ಅನುಸರಿಸುತ್ತಾರೆ.
ಚಿಕ್ಕ ಚಿಕ್ಕ ಅಕ್ಷರಗಳಲ್ಲಿ ಚೀಟಿ ಬರೆದುಕೊಳ್ಳುತ್ತಾರೆ. ಅವರ ಬುದ್ದಿವಂತಿಕೆಯೂ ಹೆಚ್ಚೇ ಇರುತ್ತದೆ. ಆದರೆ ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಬೇಕು. ನಕಲು ಮಾಡಿ ಒಂದು ಪರೀಕ್ಷೆಯಿಂದ ಹೊರ ಬಂದರೆ ಜೀವನದಿಂದಲೇ ಹೊರ ಬಂದ ಹಾಗಲ್ಲ. ಜೀವನದಲ್ಲಿ ಎಷ್ಟು ಭಾರಿ ನಕಲು ಮಾಡುತ್ತಿರಿ, ಪರೀಕ್ಷೆಯಲ್ಲಿ ನಕಲು ಮಾಡಿ ಯಶಸ್ವಿಯಾದವರು ಜೀವನದಲ್ಲಿ ಯಶಸ್ವಿಯಾಗುವುದಿಲ್ಲ ಎಂದರು.
ಇನ್ನೊಬ್ಬ ವಿದ್ಯಾರ್ಥಿ ಕಾಳಜಿ ವಹಿಸಬೇಕು. ನಿಮ್ಮ ಕಾಳಜಿ ಜೀವನದ ಬಣ್ಣವನ್ನು ಬದಲಾಯಿಸಬಹುದು. ಪ್ರಾಮಾಣಿಕತೆಯ ತಾಕತ್ತು ನಿಮ್ಮನ್ನು ಮುನ್ನೆಡೆಸುತ್ತದೆ. ಪರೀಕ್ಷೆ ಬರುತ್ತದೆ ಹೋಗುತ್ತದೆ ನಕಲು ಮಾತ್ರ ಮಾಡಬೇಡಿ. ಅಡ್ಡದಾರಿ ಹಿಡಿಯಬೇಡಿ, ಓದಿತ್ತ ಗಮನ ನೀಡಿ ಯಶಸ್ಸು ನಿಮ್ಮದಾಗಲಿದೆ. ಶಾಳೆ ಹಾಗೂ ಮನೆ ಪಾಠದ ಶಿಕ್ಷಕರು ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡಬೇಕು ಎಂದು ಕರೆ ನೀಡಿದರು.
ಹಾಸನ ಅಭ್ಯರ್ಥಿ ಗೊಂದಲ: ಜೆಡಿಎಸ್ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ವಿಳಂಬ
ಹಾರ್ಡ್‍ವರ್ಕ್ ಮತ್ತು ಸ್ಮಾರ್ಟ್‍ವರ್ಕ್ ನಡುವೆ ಯಾವುದು ಸೂಕ್ತ ಎಂದು ವಿದ್ಯಾರ್ಥಿಗಲ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿಯವರು, ಹೂಜಿಯ ತಳಭಾಗದಲ್ಲಿದ್ದ ನೀರಿಗೆ ಕಾಗೆ ಕಲ್ಲು ತಂದು ಹಾಕಿ ನೀರು ಕುಡಿದಿದ್ದನ್ನು ಎಲ್ಲರೂ ಕೇಳಿದ್ದಾರೆ. ಕೆಲವರು ಹಾರ್ಡ್ ವರ್ಕ್ ಮಾಡುತ್ತಿರುತ್ತಾರೆ. ಕೆಲವರು ಸ್ಮಾರ್ಟ್‍ವರ್ಕ್‍ನಲ್ಲೇ ಬದುಕು ಕಂಡುಕೊಂಡಿದ್ದಾರೆ.
ಕೆಲವರು ಶ್ರಮದಲ್ಲಿ ಬುದ್ದಿವಂತಿಕೆ ಬಳಸಿದರೆ, ಇನ್ನೂ ಕೆಲವರು ಬುದ್ಧಿವಂತಿಕೆಯಲ್ಲೇ ಶ್ರಮವಹಿಸಿರುತ್ತಾರೆ. ನಾನು ಬುಡಕಟ್ಟ ಪ್ರದೇಶದಲ್ಲಿ ಕೆಲಸ ಮಾಡುವಾಗ ದುರ್ಗಮ ಪ್ರದೇಶಕ್ಕೆ ಹೋಗಬೇಕಿತ್ತು. ಅಲ್ಲಿ ಹಳೆಯ ಜೀಪು ಬಳಸಲಾಗಿತ್ತು. ಇದ್ದಕ್ಕಿದ್ದಂತೆ ಜೀಪ್ ಕೆಟ್ಟು ಹೋಗಿತ್ತು.
ಒಬ್ಬ ಮೇಕ್ಯಾನಿಕ ಬಂದು ಎರಡು ನಿಮಿಷದಲ್ಲಿ ಸರಿ ಮಾಡಿದರು. ಕೆಲಸ ಮುಗಿಸಿದ ಆತ ಇನ್ನೂರು ರೂಪಾಯಿ ಕೇಳಿದ. ಎರಡು ನಿಮಿಷದ ಕೆಲಸಕ್ಕೆ ಅಷ್ಟು ಹಣವೇಕೆ ಎಂದು ಪ್ರಶ್ನಿಸಿದಾಗ ನೀವು ಹಣ ಕೊಡುವುದು ನಾನು ಕೆಲಸ ಮಾಡಿದ ಎರಡು ನಿಮಿಷಕ್ಕಲ್ಲ, ನನ್ನ 20 ವರ್ಷಗಳ ಅನುಭವಕ್ಕೆ ಎಂದು ಹೇಳಿದ. ಹಾಗೇ ಕ್ರಿಕೆಟ್‍ನಲ್ಲೂ ಕೆಲವು ಬುದ್ದಿವಂತಿಕೆ ಹಾಗೂ ಶ್ರಮದಾಯಕ ಉದಾಹರಣೆಗಳು ಕಂಡು ಬರುತ್ತವೆ ಎಂದರು.
ಗುರುಗ್ರಾಮ ನವೋದಯ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಜೋವಿದಾ ಪಾತ್ರಾ ಓದಿನ ತಯಾರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿಯವರು, ನಮ್ಮ ಸಾಮಥ್ರ್ಯದ ಬಗ್ಗೆ ನಮಗೆ ಅರಿವಿರಬೇಕು. ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ತಜ್ಞತೆಯ ಕೊರತೆ ಇತ್ತು. ಈಗ ಜಾಗತಿಕವಾಗಿ ಭಾರತ ಮಿಂಚುತ್ತಿದೆ. ಕೊರೊನಾ ಬಳಿಕ ಅವಕಾಶಗಳು ಹೆಚ್ಚಾಗಿವೆ. ಇದನ್ನು ಬಳಸಿಕೊಳ್ಳಲು ನಾವು ಸಿದ್ಧರಾಗಬೇಕು ಎಂದರು.
ಬೆಂಗಳೂರಿನಿಂದ ವೈಟ್‍ಫಿಲ್ಡ್‍ನ ಖಾಸಗಿ ಶಾಲೆಯ ವಿದ್ಯಾರ್ಥಿ ಆಕಾಶ್ ದರಿರಾ, ಜೀವನದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಪ್ರಧಾನಿ, ಪಠ್ಯಕ್ರಮ ಹೊರತಾದ ಪ್ರಶ್ನೆ ಇದು. ಆದರೂ ನೀವು ಏನನ್ನು ಕೇಳಲು ಬಯಸುತ್ತೀರಾ ಎಂದು ನಾನು ಅಂದಾಜಿಸಬಲ್ಲೆ.
ಶಾಲೆಯಲ್ಲಿ ವೇಶಭೂಷಣ ಸ್ಪರ್ಧೆ ಇರುತ್ತದೆ. ನೀವು ಧರಿಸಿದ ಉಡುಪು ಅಪ್ಪ ಅಮ್ಮನಿಗೆ ಚೆನ್ನಾಗಿರುತ್ತದೆ. ಆದರೆ ನಿಮ್ಮ ಪ್ರೀತಿಯ ಸ್ನೇಹಿತ ಅದನ್ನು ಚೆನ್ನಾಗಿಲ್ಲ ಎಂದು ಬಿಡುತ್ತಾನೆ. ನಕಾರಾತ್ಮಕವಾಗಿ ಮಾತನಾಡುವವರನ್ನು ಪಕ್ಕಕ್ಕಿಡಿ. ಮನೆಯಲ್ಲಿ ಆಲೋಚನೆಗಳು ನಡೆಯುತ್ತಿಲ್ಲ.
ಕೆಎಂಎಫ್‍ನಲ್ಲಿ ಹುದ್ದೆ ಕೊಡಿಸುವುದಾಗಿ ವಂಚನೆ: ನಿರ್ಮಾಪಕನ ಬಂಧನ
ತಂದೆ ತಾಯಿಗಳು ಅಧ್ಯಯನ ಮಾಡಬೇಕು, ಮಕ್ಕಳನ್ನು ಗಮನಿಸಬೇಕು, ಮೊಬೈಲ್‍ನಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂದು ನೋಡಬೇಕು. ಸರಿಯಾದ ಸಮಯದಲ್ಲಿ ತಿಳುವಳಿಕೆ ಹೇಳಬೇಕು.ಕೊಪದಲ್ಲಿ ಹೇಳಿದರೆ ಅದನ್ನು ಮಕ್ಕಳು ಪಾಲಿಸದೇ ಹೋಗಬಹುದು. ಟೋಕಾ ಟೋಕಿ ಚಕ್ಕರ್‍ನಿಂದ ಮಕ್ಕಳನ್ನು ಪೋಷಕರು ಹೊರ ತರಬೇಕು ಎಂದರು.
ಸಂಸತ್‍ನಲ್ಲಿ ಕೆಲವರು ಭಾರೀ ತಯಾರಿ ಮಾಡಿಕೊಂಡು ಬಂದಿರುತ್ತಾರೆ. ಆ ಕುರಿತೇ ಮಾತನಾಡಬೇಕು ಎಂಬುದು ಅವರ ಭಾವನೆಯಾಗಿರುತ್ತದೆ. ಆದರೆ ಎದುರಿಗೆ ವಿರೋಧ ಪಕ್ಷದಲ್ಲಿರುತ್ತಾರೆ. ಅವರ ಪ್ರಚೋದಿಸಿ ಟಿಪ್ಪಣಿ ಮಾಡುತ್ತಾರೆ, ಅದರ ಪ್ರಭಾವಕ್ಕೆ ಒಳಗಾಗಿ ಎದುರುಗಿನವರ ಟೀಕೆಗಳಿಗೆ ಉತ್ತರ ಹೇಳುತ್ತಾ ಸಮಯ ಕಳೆಯುತ್ತಾರೆ.
ಎಂಡಿ, ನಿರ್ದೇಶಕರುಗಳ ನಕಲಿ ಸಹಿ ಮಾಡಿ ಬಿಎಂಟಿಸಿ ಸಂಸ್ಥೆಗೆ ಮೋಸ
ಹೀಗಾಗಿ ಟಿಪ್ಪಣಿ ಮಾಡುವವರತ್ತ ಹೆಚ್ಚಾಗಿ ಗಮನ ನೀಡಬೇಡಿ. ನಿಮ್ಮ ಆಲೋಚನೆಗಳನ್ನು ನಿಮ್ಮನ್ನು ಸಂವೃದ್ಧ ಮಾಡುತ್ತವೆ. ಅದರ ಮೇಲೆ ಗಮನ ಕೇಂದ್ರೀಕರಿಸಿ. ನಾವು ಪ್ರಾಮಾಣಿಕವಾಗಿದ್ದರೆ, ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದರೆ ಆರೋಪಗಳಿಗೆ ಹೆದರಬೇಕಿಲ್ಲ ಎಂದು ಸಲಹೆ ನೀಡಿದರು.
Pariksha Pe Charcha, PM Modi, interacts, students,