ನವದೆಹಲಿ,ಮಾ.16- ರಾಹುಲ್ಗಾಂಯವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವೇ ಕಲಾಪಕ್ಕೆ ಅಡ್ಡಿ ಪಡಿಸುವ ಮೂಲಕ ನಾಲ್ಕನೆ ದಿನದ ಕಲಾಪವೂ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಈ ನಡುವೆ ಪ್ರತಿಪಕ್ಷ ಅದಾನಿ ಕಂಪೆನಿಯ ಷೇರು ಮೌಲ್ಯ ಹೆಚ್ಚಳ ಅವ್ಯವಹಾರದ ತನಿಖೆಗೆ ಪಟ್ಟು ಹಿಡಿದಿದೆ.
ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಗದ್ದಲ ಕೋಲಾಹಲಗಳು ಮುಂದುವರೆದು ಸಭಾಧ್ಯಕ್ಷರು ಕಲಾಪವನ್ನು ಭೋಜನ ವಿರಾಮದವರೆಗೂ ಮುಂದೂಡಿದ್ದಾರೆ.
ಇಂದು ಬೆಳಗ್ಗೆ ಲೋಸಭೆ ಸಮಾವೇಶಗೊಳ್ಳು ತ್ತಿದ್ದಂತೆ ಕೆಲವು ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಬಂದು ಘೋಷಣೆಗಳನ್ನುಕೂಗಲು ಪ್ರಾರಂಭಿಸಿದರು, ಅದಾನಿ ಕಂಪೆನಿಯ ಷೇರು ಮೌಲ್ಯ ಹೆಚ್ಚಳ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಯಾಗಿ ಸರ್ಕಾರದ ಮುಂದಿನ ಸಾಲಿನಲ್ಲಿ ಕುಳಿತ ಸಚಿವರು, ತಮ್ಮ ಆಸನಗಳಲ್ಲೇ ಎದ್ದು ನಿಂತ ಪ್ರತಿ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿ ಮಾತನಾಡಿರುವ ಕುರಿತು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನಕ್ಕೆ ಅವಕಾಶ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿದರು.ನಾನು ಸದನವನ್ನು ನಡೆಸಲು ಬಯಸುತ್ತೇನೆ, ನಾನು ನಿಮಗೆ ಸಾಕಷ್ಟು ಅವಕಾಶಗಳು ಮತ್ತು ಮಾತನಾಡಲು ಸಾಕಷ್ಟು ಸಮಯವನ್ನು ನೀಡುತ್ತೇನೆ. ನೀವು ನಿಮ್ಮ ಆಸನಗಳಿಗೆ ಹೋಗಬೇಕು. ನೀವು ಬಾವಿಯಿಂದ ಹೊರಗೆ ಬನ್ನಿ ಮತ್ತು ಬಾವಿಯಲ್ಲಿ ನಿಂತು ಮಾತನಾಡಲು ಯಾರಿಗೂ ಅವಕಾಶವಿಲ್ಲ ಎಂದು ಹೇಳಿದರು.
ನೀವು ಸದನ ನಡೆಸಲು ಬಿಡುವುದಿಲ್ಲ. ಘೋಷಣೆಗಳನ್ನು ಕೂಗುತ್ತೀರಿ. ಸಂಸತ್ತಿಗೆ ತನ್ನದೇ ಆದ ಘನತೆ ಇದೆ. ಅದನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕು. ಸದನ ಸುಗಮವಾಗಿ ನಡೆಸಲು ಸಹಕರಿಸಬೇಕು ಎಂದು ಬಿರ್ಲಾ ಹೇಳಿದರು.ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಮನವಿಯನ್ನು ನಿರ್ಲಕ್ಷಿಸಿದ್ದರಿಂದ ಸ್ಪೀಕರ್ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಇನ್ನೂ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದರು ಕಲಾಪ ಆರಂಭಕ್ಕೂ ಮುನ್ನವೇ ಸದನದ ಬಾವಿಗಿಳಿದು ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ಸಂಕೇತವಾಗಿ ಟಿಎಂಸಿ ಸದಸ್ಯರು ಕಪ್ಪು ಮಾಸ್ಕ್ ಧರಿಸಿದ್ದರು.
ಅಧ್ಯಕ್ಷ ಜಗದೀಪ್ ಧನ್ಖರ್, ಧರಣಿ ನಡೆಸುತ್ತಿರುವ ಸದಸ್ಯರು ತಮ್ಮ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಮತ್ತು ಸಚಿವರು ರಾಹುಲ್ ಗಾಂ ತಮ್ಮ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ ಎರಡೇ ನಿಮಿಷದಲ್ಲಿ ಸದನವನ್ನು ಮುಂದೂಡಲಾಯಿತು.
ಲಂಡನ್ನಲ್ಲಿ ಸಂವಾದದ ವೇಳೆ ರಾಹುಲ್ಗಾಂ ಭಾರತೀಯ ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ, ದೇಶದ ಸ್ವಾಯತ್ತ ಸಂಸ್ಥೆಗಳ ಮೇಲೆ ಆಕ್ರಮಣ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಹೇಳಿಕೆಗಳು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿವೆ. ರಾಹುಲ್ ವಿದೇಶಿ ನೆಲದಲ್ಲಿ ಭಾರತವನ್ನು ದೂಷಿಸಿದ್ದಾರೆ ಮತ್ತು ಭಾರತದ ಪ್ರಜಾಪ್ರಭುತ್ವದಲ್ಲಿ ವಿದೇಶಿ ಹಸ್ತಕ್ಷೇಪಗಳನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಆಂತರಿಕ ರಾಜಕೀಯವನ್ನು ಲೇವಡಿ ಮಾಡಿದ ಹೇಳಿಕೆಗಳನ್ನು ಪ್ರಸ್ತಾಪಿಸಿ ಪ್ರತಿಟೀಕೆ ಮಾಡಿದೆ.
ಆಡಳಿತ ಮತ್ತು ಪ್ರತಿಪಕ್ಷಗಳ ಗದ್ದಲದ ನಡುವೆ ಸಂಸತ್ನ ಉಭಯ ಸದನಗಳಲ್ಲಿ ಸೋಮವಾರದಿಂದ ಯಾವುದೇ ಚರ್ಚೆ ನಡೆದಿಲ್ಲ. ಬಜೆಟ್ ಅವೇಶನದ ಎರಡನೇ ಚರಣದಲ್ಲಿ ಅದಾನಿ ಗುಂಪಿನ ಹಗರಣ, ರಾಹುಲ್ಗಾಂ ಹೇಳಿಕೆಗಳಿಂದಲೇ ಸಮಯ ವ್ಯರ್ಥವಾಗುತ್ತಿದೆ. ಈ ನಡುವೆ ಬೆಲೆ ಏರಿಕೆ, ನಿರುದ್ಯೋಗದಂತಹ ಗಂಭೀರ ವಿಷಯಗಳು ಮರೆ ಮಾಚಿದಂತಾಗಿವೆ.
#Parliament, #adjourned, #3rdDay, #RahulGandhi, #Adani,