ಸಂಸತ್ ಉಭಯ ಸದನಗಳಲ್ಲಿ ಅದಾನಿ ಕೋಲಾಹಲ

Social Share

ನವದೆಹಲಿ,ಫೆ.1- ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಸಂಸತ್ ಕಲಾಪದಲ್ಲಿ ಅದಾನಿ ಗುಂಪಿನ ಹಗರಣ ಪ್ರಸ್ತಾಪವಾಗಿ ಭಾರಿ ಕೋಲಾಹಲ ಉಂಟಾಗಿದ್ದು, ಉಭಯ ಸದನಗಳ ಕಾರ್ಯಕಲಾಪ ಮಧ್ಯಾಹ್ನದವರೆಗೆ ಮುಂದೂಡಿಕೆಯಾಗಿದೆ.

ವಿರೋಧ ಪಕ್ಷಗಳು ವಿವಿಧ ಸಮಸ್ಯೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರಿಂದಾಗಿ ಲೋಕಸಭೆಯಲ್ಲಿ ಇಂದು ಗದ್ದಲದ ವಾತವರಣ ನಿರ್ಮಾಣಗೊಂಡು ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ಓಂ ಬಿರ್ಲಾ ಜೋಂಬಿಯಾ ದಿಂದ ಆಗಮಿಸಿದ್ದ ನಿಯೋಗವನ್ನು ಸ್ವಾಗತಿಸಿದರು. ಬಳಿಕ ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದರು.

ಈ ಹಂತದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ, ಶಿವಸೇನೆ (ಬಾಳ ಸಾಹೇಬ್ ಠಾಕ್ರೆ ಬಣ), ಜೆಡಿಯು ಸೇರಿದಂತೆ ಎಡಪಕ್ಷಗಳು ವಿವಿಧ ಸಮಸ್ಯೆಗಳ ಚರ್ಚೆಗೆ ಅವಕಾಶ ಕೇಳಿದವು ಮತ್ತು ಅದಾನಿ ಗುಂಪಿನ ಹಗರಣಗಳ ಕುರಿತು ಜಂಟಿ ಸದನ ಸಮಿತಿಯ ತನಿಖೆಗೆ ಪಟ್ಟು ಹಿಡಿದವು.

ನಾಗಾಲ್ಯಾಂಡ್‍ನಲ್ಲಿ 1 ಕೋಟಿ ಹಣದೊಂದಿಗೆ ಮಹಿಳೆ ಬಂಧನ

ಈ ಹಂತದಲ್ಲಿ ಸಭಾಧ್ಯಕ್ಷರು ಪ್ರಶ್ನೋತ್ತರವನ್ನು ನಡೆಸಲು ಮುಂದಾದಾಗ ಘೋಷಣೆ ಕೂಗಿ ಗದ್ದಲ ಎಬ್ಬಿಸಲಾಯಿತು. ಯಾರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದ ಪರಿಸ್ಥಿತಿ ನಿರ್ಮಾಣವಾದಾಗ ಕಲಾಪವನ್ನು ಮುಂದೂಡಲಾಗಿದೆ.

ದೀದಿ ನಮಗೆ ನಿಮ್ಮ ಆಶೀರ್ವಾದ ಬೇಕಿಲ್ಲ

ಇತ್ತ ರಾಜ್ಯಸಭೆಯಲ್ಲೂ ಅದಾನಿ ಗುಂಪಿನ ವಂಚನೆ ಕುರಿತು ಪ್ರಸ್ತಾಪವಾದಾಗ ಕೋಲಹಲ ವಾತವರಣ ನಿರ್ಮಾಣವಾಗಿದೆ. ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ಪರಿಸ್ಥಿತಿ ನಿಭಾಹಿಸಲು ಪ್ರಯತ್ನಿಸಿದರು ಆದರೆ ವಿರೋಧ ಪಕ್ಷಗಳು ಅದಾನಿ ಗುಂಪಿನ ವಂಚನೆಯನ್ನು ಜಂಟಿ ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕೆಂದು ಪಟ್ಟು ಹಿಡಿದವು.

Parliament, Both Houses, adjourned, Opposition, demands, discussion, Adani row,

Articles You Might Like

Share This Article