ಬೆಲೆ ಏರಿಕೆ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ನೋಟಿಸ್

ನವದೆಹಲಿ,ನ.30- ಬೆಲೆ ಏರಿಕೆಗೆ ಸಂಬಂದಪಟ್ಟಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ನೋಟಿಸ್ ನೀಡಿದೆ. ಲೋಕಸಭೆಯಲ್ಲಿ ಕಾಂಗ್ರೆಸ್‍ನ ಸಚೇತಕ ಮಾಣಿಕಂ ಠಾಕೂರ್ ಅವರು ನೋಟಿಸ್ ನೀಡಿದ್ದು, ಹಣದುಬ್ಬರದ ಪರಿಣಾಮವಾಗಿ ಏರಿಕೆಯಾಗುತ್ತಿರುವ ಬೆಲೆಗಳ ಬಗ್ಗೆ ಚರ್ಚೆಗೆ ಸಮಯ ನೀಡಬೇಕು.

2013ರ ಬಳಿಕ ಅಬಕಾರಿ ಸುಂಕ ಗಣನೀಯವಾಗಿ ಹೆಚ್ಚಳವಾಗಿರುವುದು ಮತ್ತು ಅದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿರುವ ಬಗ್ಗೆ ನೋಟೀಸ್‍ನಲ್ಲಿ ವಿವರಿಸಲಾಗಿದೆ.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಗದ್ದಲದಿಂದಾಗಿ ಯಾವುದೇ ಕಲಾಪಗಳು ನಡೆಯುತ್ತಿಲ್ಲ. ಈ ನಡುವೆ ಕಾಂಗ್ರೆಸ್ ಹಲವಾರು ವಿಷಯಗಳ ಚರ್ಚೆಗೆ ಹಂತ ಹಂತವಾಗಿ ನೋಟಿಸ್ ನೀಡಿ ಆಡಳಿತ ಪಕ್ಷವನ್ನು ಮುಜುರುಗಕ್ಕೀಡು ಮಾಡಲು ಮುಂದಾಗಿದೆ.