Saturday, September 23, 2023
Homeಇದೀಗ ಬಂದ ಸುದ್ದಿನಾಳೆಯಿಂದ ಐದು ದಿನ ಸಂಸತ್ ವಿಶೇಷ ಅಧಿವೇಶನ

ನಾಳೆಯಿಂದ ಐದು ದಿನ ಸಂಸತ್ ವಿಶೇಷ ಅಧಿವೇಶನ

- Advertisement -

ನವದೆಹಲಿ,ಸೆ.17- ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಾಳೆಯಿಂದ ಐದು ದಿನಗಳ ಕಾಲ ಸಂಸತ್‍ನ ವಿಶೇಷ ಅಧಿವೇಶನ ನಡೆಯಲಿದೆ. ಈ ವಿಶೇಷ ಅಧಿವೇಶನದಲ್ಲಿ ಕಳೆದ 75 ವರ್ಷಗಳ ಸಂಸದೀಯ ಇತಿಹಾಸದ ಬಗ್ಗೆ ಚರ್ಚೆ, ನಡೆದುಬಂದ ಹಾದಿ ಹಾಗೂ ಚುನಾವಣಾ ಆಯುಕ್ತರ ನೇಮಕಾತಿ ಸೇರಿದಂತೆ ನಾಲ್ಕು ಮಸೂದೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ನಾಳೆ ಸಂಸತ್‍ನ ಹಳೆಯ ಕಟ್ಟಡದಲ್ಲಿ ಅಧಿವೇಶನ ಪ್ರಾರಂಭವಾದರೂ ಮಂಗಳವಾರದಿಂದ ಹೊಸ ಕಟ್ಟಡದಲ್ಲಿ ಕಲಾಪಗಳು ಜರುಗಲಿವೆ. ಅಧಿವೇಶನದ ಹಿನ್ನಲೆಯಲ್ಲಿ ಇಂದು ಸಂಜೆ ಸರ್ವ ಪಕ್ಷಗಳ ನಾಯಕರ ಸಭೆಯನ್ನು ಕೇಂದ್ರ ಸರ್ಕಾರ ಕರೆದಿದೆ.

- Advertisement -

ತೀವ್ರ ಕುತೂಹಲ ಕೆರಳಿಸಿರುವ ಈ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಹಾಗೂ ಚರ್ಚಿತವಾಗುವ ವಿಚಾರಗಳ ಬಗ್ಗೆ ಸರ್ವ ಪಕ್ಷಗಳ ನಾಯಕರ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.
ಕಳೆದ 75 ವರ್ಷಗಳ ಸಂಸತ್ತಿನ ಪಯಣದ ಕುರಿತ ವಿಶೇಷ ಚರ್ಚೆಯು ಕಾರ್ಯಸೂಚಿಯಲ್ಲಿದೆ. ಕಾರ್ಯಸೂಚಿಯ ಭಾಗವಾಗಿರದ ಕೆಲವು ಹೊಸ ಮಸೂದೆ ಹಾಗೂ ಇತರೆ ವಿಷಯಗಳನ್ನು ಸಂಸತ್ತಿನಲ್ಲಿ ಮಂಡಿಸುವ ವಿಶೇಷ ಅಧಿಕಾರವನ್ನು ಸರ್ಕಾರ ಹೊಂದಿದೆ.

ಚೈತ್ರಾ ಕುಂದಾಪುರ ಆರೋಗ್ಯ ಚೇತರಿಕೆ: ಯಾವುದೇ ಕ್ಷಣದಲ್ಲಾದರೂ ಡಿಸ್ಚಾರ್ಜ್

ಯಾವುದೇ ಸಂಭಾವ್ಯ ಹೊಸ ವಿಧೇಯಕದ ಬಗ್ಗೆ ಅಕೃತ ಪ್ರಸ್ತಾಪವಿಲ್ಲದಿದ್ದರೂ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಕುರಿತು ಪ್ರಧಾನಿಯವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮಹಿಳಾ ಮೀಸಲಾತಿ ಮಸೂದೆ ವಿಚಾರಕ್ಕೆ ಪುಷ್ಟಿ ನೀಡಿವೆ.

ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಯಶಸ್ವಿ ಜಿ-20 ಶೃಂಗಸಭೆಯ ವಿಚಾರವು ಅವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಆಡಳಿತ ಪಕ್ಷದ ಸಂಸದರು ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಾಧ್ಯತೆ ಹೆಚ್ಚಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಸಂಸತ್ತಿನಲ್ಲಿ ಬಜೆಟ್, ಮಳೆಗಾಲ ಮತ್ತು ಚಳಿಗಾಲದ ಅಧಿವೇಶನಗಳು ನಡೆಯುತ್ತವೆ. ಮುಂಗಾರು ಅಧಿವೇಶನವು ಜುಲೈ-ಆಗಸ್ಟ್‍ನಲ್ಲಿ ನಡೆದರೆ, ಚಳಿಗಾಲದ ಅಧಿವೇಶನವು ನವೆಂಬರ್-ಡಿಸೆಂಬರ್‍ನಲ್ಲಿ ನಡೆಯಲಿದೆ. ಬಜೆಟ್ ಅಧಿವೇಶನವು ಪ್ರತಿ ವರ್ಷ ಜನವರಿ ಅಂತ್ಯದಲ್ಲಿ ಪ್ರಾರಂಭವಾಗಿ ನಿಗದಿತ ಸಮಯದವರೆಗೆ ನಡೆಯುತ್ತದೆ. ಎರಡು ಅಧಿವೇಶಗಳ ನಡುವಿನ ಅಂತರವು ಆರು ತಿಂಗಳಿಗಿಂತ ಹೆಚ್ಚಿರಬಾರದು ಎಂಬ ನಿಯಮವಿದೆ.

ನೂತನ ಸಂಸತ್‍ ಭವನದಲ್ಲಿ ಧ್ವಜಾರೋಹಣ ನೆರವೇರಿಸಿದ ಉಪರಾಷ್ಟ್ರಪತಿ

ಅಧಿವೇಶನದ ಮೊದಲ ದಿನದಂದು ಸಂಸತ್ತಿನ ಸಭಾಂಗಣದಲ್ಲಿ ಪ್ರಾರಂಭ ವಾಗಲಿದೆ. ಸಂಸತ್ತಿನ 75 ವರ್ಷಗಳ ಪಯಣದ ವಿಶೇಷ ಚರ್ಚೆಯನ್ನು ಸರ್ಕಾರ ಪಟ್ಟಿ ಮಾಡಿದ್ದು, ಸಾಧನೆಗಳು, ಅನುಭವಗಳು, ನೆನಪುಗಳ ಬಗ್ಗೆ ಸಮಗ್ರ ಚರ್ಚೆಯಾಗಲಿದೆ.

Parliament, #SpecialSession, #begin, # tomorrow,

- Advertisement -
RELATED ARTICLES
- Advertisment -

Most Popular