ಸಂಸತ್‍ನಲ್ಲಿ ಏಕರೂಪ ನಾಗರೀಕತೆ ಮಸೂದೆ ಪ್ರಸ್ತಾಪ ನಿರೀಕ್ಷೆ

Social Share

ನವದೆಹಲಿ,ಡಿ.9-ವಿವಿಧ ರಾಜ್ಯಗಳಲ್ಲಿ ಸದ್ದು ಮಾಡಿರುವ ಏಕ ರೂಪದ ನಾಗರೀಕ ಸಂಹಿತೆ ಮಸೂದೆ ಕುರಿತು ಇಂದು ಸಂಸತ್‍ನಲ್ಲೂ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಬಿಜೆಪಿಯ ಸಂಸದ ಹರ್ನಾಥ್‍ಸಿಂಗ್‍ಯಾಧವ್ ಅವರು ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆಗೆ ಶೂನ್ಯವೇಳೆಯಲ್ಲಿ ಅವಕಾಶ ಮಾಡಿಕೊಡಬೇಕೆಂದು ಸಭಾಪತಿ ಜಗದೀಪ್ ಧನ್ಕರ್ ಅವರಿಗೆ ನೋಟಿಸ್ ನೀಡಿದ್ದಾರೆ.

ಸೂಕ್ಷ್ಮ ವಿಷಯವಾಗಿರುವ ಏಕರೂಪ ನಾಗರೀಕತೆ ಸಂಹಿತೆ (ಯುಸಿಸಿ) ಕುರಿತು ಈಗಾಗಲೇ ಹಲವು ರಾಜ್ಯಗಳಲ್ಲಿ ಚರ್ಚೆಗಳು ನಡೆದಿವೆ. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕುರಿತು ಚರ್ಚೆಗಳಾಗಿವೆ. ಮಧ್ಯಪ್ರದೇಶ ರಾಜ್ಯ ಏಕರೂಪ ನಾಗರೀಕ ಸಂಹಿತೆ ಮಸೂದೆ ರಚನೆಗಾಗಿ ಕಳೆದ ಡಿ.2ರಂದು ಸಮಿತಿಯೊಂದನ್ನು ರಚಿಸಿದೆ.

ಚಂಡಮಾರುತ : ತಮಿಳುನಾಡು ಪುದುಚರಿ ಕರಾವಳಿಯಲ್ಲಿ ಭಾರಿ ಕಟ್ಟೆಚ್ಚರ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್‍ನಲ್ಲೇ ಈ ಬಗ್ಗೆ ಪ್ರಸ್ತಾಪಿಸಿದ್ದು, ಚರ್ಚೆಗೆ ವೇದಿಕೆ ಒದಗಿಸಿದ್ದರು. ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ ಎಸ್.ಪಿ.ಸಿಂಗ್ ಬಗೇಲ ಅವರು ಮುಂದೊಂದು ದಿನ ದೇಶಾದ್ಯಂತ ಯುಸಿಸಿ ಜಾರಿಗೊಳ್ಳಲಿದೆ ಎಂದು ಹೇಳುವ ಮೂಲಕ ಸಂಸತ್‍ನಲ್ಲಿ ಯಾವಾಗ ಬೇಕಾದರೂ ಈ ವಿಚಾರ ಚರ್ಚೆಯಾಗುವ ನಿರೀಕ್ಷೆ ಹುಟ್ಟಿಸಿದರು.

ಅಮೆರಿಕ ವೀಸಾ ವಿಳಂಬಕ್ಕೆ ಶೀಘ್ರ ಪರಿಹಾರ – ಶ್ವೇತಭವನ

ಅದರಂತೆ ಹಂತ ಹಂತವಾಗಿ ಇಂದು ರಾಜ್ಯಸಭೆಯಲ್ಲಿ ನೋಟಿಸ್ ನೀಡಲಾಗಿದೆ. ನಂತರ ಸಂಸತ್‍ನಲ್ಲೂ ಪ್ರಸ್ತಾಪವಾಗುವ ಸಾಧ್ಯತೆ ಇದೆ.

Parliament, Uniform Civilization Code, Harnath Singh,

Articles You Might Like

Share This Article