ಸಂಸತ್‍ನಲ್ಲಿ ಮಾಸ್ಕ್ ಧರಿಸಲು ಸಂಸದರಿಗೆ ಸಭಾಧ್ಯಕ್ಷರ ಸೂಚನೆ

Social Share

ನವದೆಹಲಿ,ಡಿ.22- ಹಲವು ದೇಶಗಳಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ನಡುವೆ ಸಂಸತ್‍ನಲ್ಲಿ ಎಲ್ಲಾ ಸದಸ್ಯರು ಮಾಸ್ಕ್ ಧರಿಸುವಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕರೆ ನೀಡಿದ್ದಾರೆ.

ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ ಎಲ್ಲಾ ಸದಸ್ಯರಿಗೆ ಸೂಚನೆ ನೀಡಿದ ಓಂ ಬಿರ್ಲಾ ಅವರು, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಮತ್ತು ಜನರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಖುದ್ದು ಮಾಸ್ಕ್ ಧರಿಸಿ ಆಗಮಿಸಿದ ಅವರು, ಸರ್ಕಾರ ಕ್ಷೀಪ್ರ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಜನನೀಬೀಢ ಪ್ರದೇಶಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಒತ್ತಾಯಿಸಿದರು.

ಸಾಂಕ್ರಾಮಿಕ ರೋಗದ ಬಗ್ಗೆ ನಮ್ಮಲ್ಲಿ ಸದಾ ಜಾಗೃತ ವ್ಯವಸ್ಥೆಯನ್ನು ಹೊಂದಿರಬೇಕು. ಹಿಂದಿನ ಪರಿಸ್ಥಿತಿಯ ಪಾಠಗಳನ್ನು ರೂಢಿಸಿಕೊಳ್ಳಬೇಕು ಎಂದರು. ಸಂಸದರಿಗೆ ಸಂಸತ್ ಪ್ರವೇಶ ದ್ವಾರದಲ್ಲಿ ಮಾಸ್ಕ್‍ಗಳು ಲಭ್ಯ ಇರುವಂತೆ ವ್ಯವಸ್ಥೆ ಮಾಡಲಾಗಿದೆ. ಸಭಾಧ್ಯಕ್ಷರ ಕಚೇರಿಯಲ್ಲೂ ಮಾಸ್ಕ್‍ಗಳನ್ನು ಹಂಚಲಾಗುತ್ತಿದೆ. ಎಲ್ಲರೂ ಅವನ್ನು ಬಳಕೆ ಮಾಡಬೇಕು ಎಂದು ಹೇಳಿದರು.

ಸಿಎಂ ಅಧ್ಯಕ್ಷತೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ

ಎಲ್ಲರೂ ಮಾಸ್ಕ್ ಧರಿಸಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದು ಸರ್ಕಾರ ಸೂಚಿಸಿದೆ. ವಿಮಾನ ನಿಲ್ದಾಣದಲ್ಲಿ ಚೀನಾ ಹಾಗೂ ಸೋಂಕು ಬಾಧಿತ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾವಹಿಸಲಾಗುವುದು ಎಂದು ಹೇಳಿದರು.

ವಿಮಾನ ಪ್ರಯಾಣಕ್ಕಿಂತ ದುಬಾರಿಯಾಯ್ತು ಖಾಸಗಿ ಬಸ್ ದರ

ಇಷ್ಟು ದಿನ ಮಾಸ್ಕ್ ಇಲ್ಲದೆ ಸಂಸದರು ಕಲಾಪದಲ್ಲಿ ಭಾಗವಹಿಸುತ್ತಿದ್ದರು. ಇಂದಿನಿಂದ ಮತ್ತೆ ಮಾಸ್ಕ್ ಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆಲವು ಸಂಸದರು ನಿಯಮ ಪಾಲನೆ ಮಾಡಿದರು. ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪತ್ರಕರ್ತರು ಮಾಸ್ಕ್ ಧರಿಸಿದ್ದರು. ಕೆಲವು ಸಂಸದರು ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳಲಾದ ಕ್ರಮಗಳನ್ನು ಸ್ವಾಗತಿಸಿದರು.

Parliament, Winter Session, Speaker, Om Birla, MPs, wear a mask,

Articles You Might Like

Share This Article