ಗುವಾಹಟಿ,ಮಾ.11-ಚುನಾವಣೋತ್ತರ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಬಂದಿದ್ದ ಸಂಸದೀಯ ನಿಯೋಗದ ಮೇಲೆ ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ದಾಳಿ ನಡೆದಿದೆ. ತ್ರಿಪುರಾದಲ್ಲಿ ನಡೆದಿತ್ತು ಎನ್ನಲಾದ ಚುನಾವಣೋತ್ತರ ತನಿಖೆ ಹಾಗೂ ಸಂತ್ರಸ್ಥ ಜನರೊಂದಿಗೆ ಮಾತುಕತೆ ನಡೆಸಲು ಸಂಸದಿಯ ನಿಯೋಗ ಎರಡು ದಿನಗಳ ಪ್ರವಾಸ ಕೈಗೊಂಡಿತ್ತು.
ತ್ರಿಪುರಾಕ್ಕೆ ಆಗಮಿಸಿರುವ ತಂಡದ ಮೇಲೆ ಬಿಸಲ್‍ಗಢ್‍ನ ನೇಹಲ್‍ಚಂದ್ರ ನಗರ ಬಜಾರ್‍ನಲ್ಲಿ ಕಿಡಿಗೇಡಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಂಡದ ಸದಸ್ಯರು ಇಂದು ನಿಗದಿಯಾಗಿದ್ದ ಹೊರಾಂಗಣ ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಿಪಿಐ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಜಿತೇಂದ್ರ ಚೌಧರಿ ತಿಳಿಸಿದ್ದಾರೆ.
ಸಂಸದೀಯ ತಂಡದ ಸದಸ್ಯರು ಸೆಪಹಿಜಾಲಾ ಜಿಲ್ಲೆಯ ಹಿಂಸಾಚಾರ ಪೀಡಿತ ಬಿಸಲ್‍ಗಢ್‍ಗೆ ಆಗಮಿಸಿದಾಗ ಬಿಜೆಪಿ ಬೆಂಬಲಿತರು ದಾಳಿ ಮಾಡಿ ಮೂರು ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧೃವ ನಾರಾಯಣ್ ನಿಧನ
ಸಂಸದರು ಮತ್ತು ಜೊತೆಗಿದ್ದ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮುಖಂಡರು ಸ್ಥಳದಿಂದ ಪರಾರಿಯಾದ ಹಿನ್ನೆಲಯಲ್ಲಿ ಅವರು ದೊಡ್ಡ ದಾಳಿಯಿಂದ ಪಾರಾಗಿದ್ದಾರೆ ಎಂದು ಸಿಪಿಐ(ಎಂ) ಹೇಳಿಕೆಯಲ್ಲಿ ತಿಳಿಸಿದೆ.
ಪಶ್ಚಿಮ ತ್ರಿಪುರಾದ ಮೋಹನ್‍ಪುರದಲ್ಲಿ ಸಂಸದೀಯ ತಂಡಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದರು. ಮಾತ್ರವಲ್ಲ ಘೋಷಣೆ ಕೂಗುತ್ತ ಅಟ್ಟಹಾಸ ಮೆರೆದರು ಎಂದು ಸಿಪಿಎಂ ಆರೋಪಿಸಿದೆ.
ಜೊತೆಯಲ್ಲಿದ್ದ ಪೊಲೀಸ್ ಬೆಂಗಾವಲು ತಂಡವು ತ್ವರಿತವಾಗಿ ಸ್ಪಂದಿಸಿ ನಿಯೋಗವನ್ನು ಸುರಕ್ಷಿತವಾಗಿ ರಕ್ಷಿಸಿತು. ಹಿರಿಯ ಅಕಾರಿಗಳು ಸ್ಥಳದಲ್ಲಿದ್ದಾರೆ. ಯಾವುದೇ ವ್ಯಕ್ತಿಗೆ ಯಾವುದೇ ಗಾಯವಾದ ವರದಿಯಾಗಿಲ್ಲ. 2-3 ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಒಬ್ಬ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಳಿಗಳು ಮುಂದುವರೆದಿದೆ. ಇತರ ದುಷ್ಕರ್ಮಿಗಳನ್ನು ಗುರುತಿಸಿ ಮತ್ತು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಸಚಿವ ಅನುರಾಗ್‍ಸಿಂಗ್ ಠಾಕೂರ್ ಕಿಡಿ
ಘಟನೆಯನ್ನು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಖಂಡಿಸಿದ್ದಾರೆ. ತ್ರಿಪುರಾದ ಬಿಶಾಲ್‍ಗಢ್ ಮತ್ತು ಮೋಹನ್‍ಪುರದಲ್ಲಿ ಇಂದು ಕಾಂಗ್ರೆಸ್ ನಾಯಕರ ನಿಯೋಗದ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ನಿಯೋಗದ ಜೊತೆಗಿದ್ದ ಪೊಲೀಸರು ಏನೂ ಮಾಡಲಿಲ್ಲ. ನಾಳೆ ಬಿಜೆಪಿ ಅಲ್ಲಿ ವಿಜಯೋತ್ಸವವನ್ನು ನಡೆಸುತ್ತಿದೆ. ಪಕ್ಷ ಪ್ರಾಯೋಜಿತ ಹಿಂಸಾಚಾರಕ್ಕೆ ಜಯವಾಗಲಿ ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.
ನಾಲ್ವರು ಲೋಕಸಭಾ ಸಂಸದರು ಮತ್ತು ಮೂವರು ರಾಜ್ಯಸಭಾ ಸಂಸದರನ್ನು ಮೂರು ಗುಂಪುಗಳಾಗಿ ವಿಂಗಡಿಸಿರುವ ಸಂಸದೀಯ ನಿಯೋಗವು ಪಶ್ಚಿಮ ತ್ರಿಪುರಾ, ಸೆಪಹಿಜಾಲಾ ಮತ್ತು ಗೋಮತಿ ಜಿಲ್ಲೆಗಳ ಹಿಂಸಾಚಾರ ಪೀಡಿತ ಗ್ರಾಮಗಳು ಮತ್ತು ನಗರ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ ಎಂದು ಕಾಂಗ್ರೆಸ್ ಮತ್ತು ಸಿಪಿಐ(ಎಂ) ನಾಯಕರು ತಿಳಿಸಿದ್ದಾರೆ.
ಪಿಆರ್ ನಟರಾಜನ್, ರಂಜಿತಾ ರಂಜನ್, ಎಎ ರಹೀಮ, ಅಬ್ದುಲ್ ಖಾಲಿಕ್ , ಬಿಕಾಶ್ ರಂಜನ್ ಭಟ್ಟಾಚಾರ್ಯ, ವಿನಯ್ ವಿಶ್ವಂ ಮತ್ತು ಎಲಾರಾಮ್ ಕರೀಂ ಅವರನ್ನು ಒಳಗೊಂಡ ಸಂಸದೀಯ ನಿಯೋಗದ ಜತೆ ಪಕ್ಷಗಳ ಸ್ಥಳೀಯ ಶಾಸಕರು ಇದ್ದರು.
Parliamentary, Team, Post-Poll, Violence, Probe, Attacked, Tripura,