ಹೈದರಾಬಾದ್, ಫೆ.21- ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದೆ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ಕರೆ ಮಾಡಿದ್ದ ಪ್ರಯಾಣಿಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹೈದ್ರಾಬಾದ್‍ನಿಂದ ಚೆನ್ನೈಗೆ ಹೊರಡಬೇಕಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬಗ್ಗೆ ಬಂದ ಕರೆ ಮೇರೆಗೆ ವಿಮಾನ ತಪಾಸಣೆ ನಡೆಸಿದಾಗ ಅದು ಹುಸಿಕರೆ ಎಂಬುದು ಸಾಬೀತಾಗಿತ್ತು. ಈ ಕುರಿಂತೆ ತನಿಖೆ ನಡೆಸಿದ ಪೊಲೀಸರಿಗೆ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದ ಪ್ರಯಾಣಿಕರೊಬ್ಬರು ಮಾಡಿರುವ ಹುಸಿ ಕರೆ ಎನ್ನುವುದು ತಿಳಿಯುತ್ತಿದ್ದಂತೆ ಕಾರ್ಯಚರಣೆ ನಡೆಸಿ ಹುಸಿ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಯುವತಿಗೆ ತಂದೆ ಹಾಗೂ ಸಹೋದರನಿಂದಲೇ ಲೈಂಗಿಕ ಕಿರುಕುಳ
ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Passenger, bomb threat, catch, flight, RGIA, arrested,